RCB ಗೆದ್ದರೇ, Qualifier​-1 ಪಂದ್ಯ ಯಾವ ತಂಡದ ವಿರುದ್ಧ ಆಡಲಿದೆ.. ಸೋತರೇ ಏನಾಗಲಿದೆ?

author-image
Bheemappa
Updated On
ಟೆನ್ಶನ್.. ಟೆನ್ಶನ್.. ಟೆನ್ಶನ್.. ಆರ್​ಸಿಬಿ ಕ್ಯಾಂಪ್​ನ ಚಿಂತೆಗೆ ದೂಡಿದ ಒಬ್ಬ ಆಟಗಾರ..!
Advertisment
  • ಲೀಗ್​ನ ಮೊದಲ ಪಂದ್ಯ ಆಡಿದ್ದ RCB, ಕೊನೆ ಪಂದ್ಯ ಕೂಡ ಆಡುತ್ತಿದೆ
  • ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಜಯಭೇರಿ ಆಗಿದ್ದ ಆರ್​​ಸಿಬಿ
  • ರಾಯಲ್ ಚಾಲೆಂಜರ್ಸ್​ ಇಂದು ಕೊನೆಯ ಲೀಗ್ ಪಂದ್ಯವನ್ನ ಆಡಲಿದೆ

ಐಪಿಎಲ್ ಸೀಸನ್​ 18ರ ಕೊನೆಯ ಲೀಗ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೆಂಟ್ಸ್​ ಸೆಣಸಾಟ ನಡೆಸಲಿವೆ. ಲೀಗ್​ನ ಕೊನೆ ಪಂದ್ಯ ಪ್ಲೇ ಆಫ್​ ದೃಷ್ಟಿಯಿಂದ ನೋಡಿದರೆ ಆರ್​ಸಿಬಿಗೆ ಅತ್ಯಂತ ಮುಖ್ಯವಾದ ಮ್ಯಾಚ್. ಆದರೆ ಇದರಿಂದ ಲಕ್ನೋ ತಂಡಕ್ಕೆ ಯಾವುದೇ ಉಪಯೋಗವಿಲ್ಲ. ಸದ್ಯ ಈ ಮ್ಯಾಚ್ ಅನ್ನು ಆರ್​ಸಿಬಿ ಗೆದ್ದರೇ ಅಥವಾ ಸೋತರೆ ಯಾವ ತಂಡದ ವಿರುದ್ಧ ಮುಂದಿನ ಪಂದ್ಯ ಆಡಲಿದೆ ಎನ್ನುವುದು ಇಲ್ಲಿದೆ.

ಮೇ 29 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್​ನ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ಈಗಾಗಲೇ ಪಂಜಾಬ್ ಕಿಂಗ್ಸ್​, ಮುಂಬೈ ವಿರುದ್ಧ ಗೆಲುವು ಪಡೆದು ಕ್ವಾಲಿಫೈಯರ್​-1 ಸ್ಥಾನದಲ್ಲಿದೆ. ಈ ಸ್ಥಾನ ಇಂದಿನ ಆರ್​ಸಿಬಿ ಪಂದ್ಯದ ಬಳಿಕ ಅಧಿಕೃತವಾಗಿ ಯಾರ ಪಾಲಾಗಲಿದೆ ಎಂಬುದು ತಿಳಿದು ಬರಲಿದೆ. ಏಕೆಂದರೆ ಆರ್​ಸಿಬಿ, ಎಲ್​ಎಸ್​ಜಿ ವಿರುದ್ಧ ಜಯ ಸಾಧಿಸಿದರೆ ಸ್ಥಾನ ಬದಲಾವಣೆ ಆಗಲಿದೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್​​ಗೆ ಎಂಟ್ರಿ ಕೊಟ್ಟ ಟೀಮ್ ಯಾವುದು.. RCBನಾ?

publive-image

ಲಕ್ನೋ ತಂಡವನ್ನು ಆರ್​ಸಿಬಿ ಒಳ್ಳೆಯ ರನ್​ ರೇಟ್​ ಪಡೆದು ಸೋಲಿಸಿದ್ರೆ ಟೇಬಲ್ ಟಾಪರ್ ಆಗಲಿದ್ದು ಪಂಜಾಬ್​ 2ನೇ ಸ್ಥಾನಿಯಾಗಲಿದೆ. ಇದರಿಂದ ಕ್ವಾಲಿಫೈಯರ್​-1ರ ಪಂದ್ಯದಲ್ಲಿ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್​ ನಡುವೆ ಬಿಗ್ ಫೈಟ್ ನಡೆಯಲಿದೆ. ಒಂದು ವೇಳೆ ಆರ್​ಸಿಬಿ, ಲಕ್ನೋ ತಂಡದ ವಿರುದ್ಧ ಸೋಲುಂಡರೇ, ಕ್ವಾಲಿಫೈಯರ್​-1ರ ಪಂದ್ಯದಲ್ಲಿ ಪಂಜಾಬ್ ಜೊತೆ ಗುಜರಾತ್​ ಅಖಾಡಕ್ಕೆ ಇಳಿಯಲಿದೆ. ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ, ಮುಂಬೈ ಇಂಡಿಯನ್ಸ್​ ಜೊತೆ ಆಡಲಿದೆ.

ಮಹತ್ವದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಸೋತಿರುವುದರಿಂದ ಈಗ ಎಲಿಮಿನೇಟರ್ ಆಗಿದೆ. ಹೀಗಾಗಿ ಇಂದು ಆರ್​ಸಿಬಿ ತಂಡದ ಸೋಲು, ಗೆಲುವಿನ ಮೇಲೆ ಮುಂಬೈ ಇಂಡಿಯನ್ಸ್, ಪಂಜಾಬ್​ ಹಾಗೂ ಗುಜರಾತ್​ ಟೈಟನ್ಸ್​​ ತಂಡಗಳ ಮುಂದಿನ ಪಂದ್ಯ ಯಾರ ವಿರುದ್ಧ ಆಡಲಿವೆ ಎನ್ನುವುದು ತಿಳಿದು ಬರಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment