/newsfirstlive-kannada/media/post_attachments/wp-content/uploads/2025/05/JITESH-SHARMA-1.jpg)
228 ರನ್ಗಳ ಬಿಗ್ ಟಾರ್ಗೆಟ್ ಚೇಸಿಂಗ್ಗಿಳಿದ ಆರ್ಸಿಬಿ ಸಾಲಿಡ್ ಸ್ಟಾರ್ಟ್ ಪಡೀತು. ಆದ್ರೆ, ಮಿಡಲ್ನಲ್ಲಿ ಸಡನ್ ಆಗಿ ಸಂಕಷ್ಟಕ್ಕೆ ಸಿಲುಕಿತು. ಆಗ ಸಂಕಷ್ಟಕ್ಕೆ ಸಿಲುಕಿದ ಆರ್ಸಿಬಿ ಕೈ ಹಿಡಿದಿದ್ದು ಕ್ಯಾಪ್ಟನ್ ಜಿತೇಶ್ ಶರ್ಮಾ! ಅತ್ಯದ್ಭುತ ಇನ್ನಿಂಗ್ಸ್.. ಅತ್ಯದ್ಭುತ ದಿಗ್ವಿಜಯ!
ಬಿಗ್ ಟಾರ್ಗೆಟ್ ಚೇಸಿಂಗ್ಗಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೊಂಬಾಟ್ ಆರಂಭ ಪಡೆದುಕೊಳ್ತು. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಪವರ್ ಪ್ಲೇನಲ್ಲಿ ಲಕ್ನೋ ಬೌಲರ್ಗಳನ್ನ ಸರಿಯಾಗಿ ಬೆಂಡೆತ್ತಿದ್ರು. ಮೊದಲ 5 ಓವರ್ಗಳಲ್ಲೇ ವಿಕೆಟ್ ನಷ್ಟವಿಲ್ಲದೇ ಆರ್ಸಿಬಿ 60 ರನ್ಗಳಿಸಿತು.
ಇದನ್ನೂ ಓದಿ: 12 ಪಂದ್ಯಗಳಲ್ಲಿ ಅಟ್ಟರ್ ಫ್ಲಾಪ್.. RCB ವಿರುದ್ಧ ಸಿಡಿಲಬ್ಬರದ ಸೆಂಚುರಿ ಸಿಡಿಸಿದ ರಿಷಭ್ ಪಂತ್
157ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಫಿಲ್ ಸಾಲ್ಟ್ 6 ಆಕರ್ಷಕ ಬೌಂಡರಿ ಬಾರಿಸಿದ್ರು. ಜಸ್ಟ್ 19 ಎಸೆತಗಳಲ್ಲೇ 30 ರನ್ಗಳಿಸಿದ ವೇಳೆ ಬ್ಯಾಟ್ ಶಾಟ್ ಪ್ಲೇ ಮಾಡಿದ ಫಿಲ್ ಸಾಲ್ಟ್ ಔಟಾದ್ರು. ಬಳಿಕ ಬ್ಯಾಟಿಂಗ್ಗೆ ಬಂದ ರಜತ್ ಪಾಟಿದಾರ್ 14 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರೆ, ಲಿಯಾಮ್ ಲಿವಿಂಗ್ಸ್ಟೋನ್ ಮತ್ತೊಂದು ಸೊನ್ನೆ ಸುತ್ತಿದ್ರು.
ಒಂದೆಡೆ ವಿಕೆಟ್ ಬಿದ್ರೆ ಇನ್ನೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಸಾಲಿಡ್ ಬ್ಯಾಟಿಂಗ್ ಮುಂದುವರೆಸಿದ್ರು. ಕ್ಲಾಸಿಕ್ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 180ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ನಡೆಸಿದ್ರು. 10 ಕ್ಲಾಸ್ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ ಸೀಸನ್ನಲ್ಲಿ 8ನೇ ಹಾಫ್ ಸೆಂಚುರಿ ಪೂರೈಸಿದ್ರು.
ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್ನಿಂದ ಕೊಚ್ಚಿ ಅಬ್ದುಲ್ ರಹಿಮಾನ್ನ ಭೀಕರ ಹತ್ಯೆ
30 ಎಸೆತಗಳನ್ನ ಎದುರಿಸಿದ ವಿರಾಟ್ ಕೊಹ್ಲಿ 54 ರನ್ಗಳಿಸಿ ಔಟಾದ್ರು. ಆರ್ಸಿಬಿಯ ಅಸಲಿ ಚೇಸಿಂಗ್ ಆರಂಭವಾಗಿದ್ದೇ ವಿರಾಟ್ ಕೊಹ್ಲಿ ಪತನದ ಬಳಿಕ. ಆ ಬಳಿಕ ಕ್ರಿಸ್ನಲ್ಲಿ ಜೊತೆಯಾದ ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ ಲಕ್ನೋ ಗೆಲುವಿನ ಕನಸನ್ನ ನುಚ್ಚು ನೂರು ಮಾಡಿದ್ರು. 5ನೇ ವಿಕೆಟ್ಗೆ ಬೊಂಬಾಟ್ ಜೊತೆಯಾಟವಾಡಿದ್ರು.
ಫಸ್ಟ್ ಮ್ಯಾಚ್ನಲ್ಲಿ ಫೇಲ್ ಆಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ನಿನ್ನೆ ಅದ್ಭುತವಾದ ಇನ್ನಿಂಗ್ಸ್ ಕಟ್ಟಿದ್ರು. ಮಯಾಂಕ್ ಜೊತೆಯಾದ ಕ್ಯಾಪ್ಟನ್ ಜಿತೇಶ್ ಶರ್ಮಾ ನಾಯಕನ ಇನ್ನಿಂಗ್ಸ್ ಕಟ್ಟಿದ್ರು. ಲಕ್ನೋ ಬೌಲಿಂಗ್ ದಾಳಿಯನ್ನ ಚಿಂದಿ ಉಡಾಯಿಸಿದ ಜಿತೇಶ್, ಬೌಂಡರಿ, ಸಿಕ್ಸರ್ಗಳನ್ನ ಚಚ್ಚಿ ಬಿಸಾಕಿದ್ರು.
ಲಕ್ನೋ ಬೌಲರ್ಗಳನ್ನ ಮನಸೋ ಇಚ್ಚೆ ದಂಡಿಸ್ತಾ ಇದ್ದ ಜಿತೇಶ್ ಶರ್ಮಾ ಲಕ್ನೋ ಕೂಡ ಸಾಥ್ ಕೊಡ್ತು. ಜೀವದಾನ ಪಡೆದುಕೊಂಡ ಜಿತೇಶ್ ಶರ್ಮಾ ಜಸ್ಟ್ 22 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ರು. ಅದೂ ಭರ್ಜರಿ ಸಿಕ್ಸರ್ನೊಂದಿಗೆ. ಹಾಫ್ ಸೆಂಚುರಿ ಬಳಿಕ ಜಿತೇಶ್ ಶರ್ಮಾ ಅಬ್ಬರ ಮತ್ತಷ್ಟು ಜೋರಾಗಿತ್ತು. ವಿಲಿಯಮ್ ರೋರ್ಕ್ ಎಸೆದ 18ನೇ ಓವರ್ನಲ್ಲಿ 3 ಬೌಂಡರಿ, 2 ಭರ್ಜರಿ ಸಿಕ್ಸರ್ ಚಚ್ಚಿದ್ರು. 21 ರನ್ಗಳು ಅದೊಂದೆ ಓವರ್ನಲ್ಲಿ ಹರಿದು ಬಂದ್ವು.
ಇದನ್ನೂ ಓದಿ: ಸೆಂಚುರಿ ಸಿಡಿಸಿ ಅದ್ಭುತ ಫ್ರಂಟ್ಫ್ಲಿಪ್.. ರಿಷಭ್ ಪಂತ್ ಶತಕದ ಸಂಭ್ರಮ ಹೇಗಿತ್ತು? -Video
ಜಿತೇಶ್ ಶರ್ಮಾಗೆ ಸಾಥ್ ಕೊಟ್ಟ ಕನ್ನಡಿಗ ಮಯಾಂಕ್ ಅಗರ್ವಾಲ್ 5 ಸೊಗಸಾದ ಬೌಂಡರಿ ಬಾರಿಸಿದ್ರು. 178ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ 41 ರನ್ಗಳಿಸಿದ್ರು. ಬರೋಬ್ಬರಿ 257.58ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಜಿತೇಶ್ ಶರ್ಮಾ 6 ಭರ್ಜರಿ ಸಿಕ್ಸರ್, 8 ಸಾಲಿಡ್ ಬೌಂಡರಿ ಬಾರಿಸಿದ್ರು. ಜಸ್ಟ್ 33 ಎಸೆತಗಳಲ್ಲಿ 85 ರನ್ ಚಚ್ಚಿದ್ರು.
ಮಯಾಂಕ್ ಅಗರ್ವಾಲ್-ಜಿತೇಶ್ ಶರ್ಮಾ ಅಜೇಯ 107 ರನ್ಗಳ ಜೊತೆಯಾಟವಾಡಿದ್ರು. 18.4ನೇ ಎಸೆತವನ್ನ ಸಿಕ್ಸರ್ ಸಿಡಿಸಿದ ಜಿತೇಶ್ ಶರ್ಮಾ, ಆರ್ಸಿಬಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಗೆಲುವಿನ ಗಡಿ ದಾಟಿದ ಬೆನ್ನಲ್ಲೇ ಆರ್ಸಿಬಿ ಕ್ಯಾಂಪ್ನಲ್ಲಿ ಭರ್ಜರಿ ಸಂಭ್ರಮಾಚರಣೆ ನಡೀತು. ಕಿಂಗ್ ಕೊಹ್ಲಿಯಂತೂ ಸಂಭ್ರಮದ ಕಡಲಲ್ಲಿ ತೇಲಾಡಿದ್ರು. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನ 6 ವಿಕೆಟ್ಗಳ ಅಂತರದಲ್ಲಿ ಮಣಿಸಿದ ಆರ್ಸಿಬಿ ಟೇಬಲ್ ಟಾಪ್ 2 ಸ್ಥಾನಕ್ಕೇರಿತು. ಆ ಮೂಲಕ ಫೈನಲ್ ಪ್ರವೇಶ ಮಾಡಲು ಎರಡು ಅವಕಾಶ ಪಡೆದುಕೊಳ್ತು. ಅಲ್ಲದೇ 3ನೇ ಬಾರಿಗೆ ಕ್ವಾಲಿಫೈಯರ್ 1ಗೆ ಕ್ವಾಲಿಫೈ ಆಯ್ತು.
ಇದನ್ನೂ ಓದಿ: RCB ಕ್ಯಾಪ್ಟನ್ ಜಿತೇಶ್ ಶರ್ಮಾ ಗೆಲುವಿನ ಕ್ರೆಡಿಟ್ ಯಾರಿಗೆ ನೀಡಿದರು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ