/newsfirstlive-kannada/media/post_attachments/wp-content/uploads/2025/05/Rajat_Patidar-1.jpg)
ಸೀಸನ್-18 ಇಂಡಿಯನ್ ಪ್ರೀಮಿಯರ್ ಲೀಗ್ನ ಮತ್ತೊಂದು ಮಹಾಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಇಂದು ನಡೆಯಲಿರುವ 59ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗ್ತಿದೆ. ಉಭಯ ತಂಡಗಳ ಬಿಗ್ ಬ್ಯಾಟಲ್ಗೆ ಲಕ್ನೋದ ಎಕಾನ ಸ್ಟೇಡಿಯಂ ವೇದಿಕೆಯಾಗಲಿದೆ. ಪ್ಲೇ ಆಫ್ ಎಂಟ್ರಿಯ ದೃಷ್ಟಿಯಿಂದ ಇವತ್ತಿನ ಪಂದ್ಯ ಭಾರೀ ಕುತೂಹಲ ಹುಟ್ಟು ಹಾಕಿದೆ. ಇದರ ಮಧ್ಯೆ ಯುದ್ಧದ ಭೀತಿ ಹಿನ್ನೆಲೆಯಲ್ಲಿ ಇವತ್ತಿನ ಪಂದ್ಯ ನಡೆಯೋದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: ಐಪಿಎಲ್ ಟೂರ್ನಿ ಸ್ಥಗಿತ ಸಾಧ್ಯತೆ.. ಸುಳಿವು ಕೊಟ್ಟ IPL ಮುಖ್ಯಸ್ಥ ಅರುಣ್ ಧಮಾಲ್..!
ಒಂದು ವೇಳೆ ಎಲ್ಲಾ ಸಮಸ್ಯೆಗಳನ್ನೂ ಮೆಟ್ಟಿ, ಪಂದ್ಯ ನಡೆದರೂ ಆರ್ಸಿಬಿಗೆ ಒಂದಷ್ಟು ಸಂದಿಗ್ಧತೆ ಎದುರಾಗಿದೆ. ಅದು ಏನೆಂದು ನೋಡೋದಾದರೆ, ಜ್ವರದಿಂದಾಗಿ ಕಳೆದ 2 ಪಂದ್ಯಗಳಿಗೆ ಅಲಭ್ಯರಾಗಿದ್ದ ಫಿಲ್ ಸಾಲ್ಟ್ ಚೇತರಿಸಿಕೊಂಡಿದ್ದಾರಾ? ಇಲ್ವಾ? ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡ್ತಿದೆ. ಫಿಲ್ ಸಾಲ್ಟ್ ಫಿಟ್ಸೆನ್ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಒಂದು ವೇಳೆ ಫಿಟ್ ಆದ್ರೆ ಯಾರಿಗೆ ಅವಕಾಶ ಸಿಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಫಿಲ್ ಸಾಲ್ಟ್ ಅಲಭ್ಯತೆಯಲ್ಲಿ ಜೇಕಬ್ ಬೆಥೆಲ್ ಅಬ್ಬರಿಸಿದ್ದಾರೆ. ಹೀಗಾಗಿ ಮ್ಯಾನೇಜ್ಮೆಂಟ್ ಬೆಥೆಲ್ನ ಮುಂದುವರೆಸುತ್ತಾ? ಸಾಲ್ಟ್ಗೆ ಚಾನ್ಸ್ ನೀಡುತ್ತಾ? ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವುದು ಯಾರು? ಅನ್ನೋ ಪ್ರಶ್ನೆ ಸಹಜವಾಗೇ ಕಾಡ್ತಿದೆ. ಇವರಿಬ್ಬರಲ್ಲಿ ಯಾರೇ ಇನ್ನಿಂಗ್ಸ್ ಓಪನ್ ಮಾಡಿದ್ರೂ ಸಾಲಿಡ್ ಓಪನಿಂಗ್ ಸಿಗೋದು ಫಿಕ್ಸ್. ಸೋ ನೋ ಟೆನ್ಶನ್.
ಪಡಿಕ್ಕಲ್ ಔಟ್.. 3ನೇ ಸ್ಲಾಟ್ನಲ್ಲಿ ಯಾರು..?
ಗಾಯಗೊಂಡಿರೋ ಕನ್ನಡಿಗ ದೇವದತ್ತ್ ಪಡಿಕ್ಕಲ್ ಟೂರ್ನಿಯಿಂದ ಔಟ್ ಆಗಿದ್ದಾರೆ. ಪಡಿಕ್ಕಲ್ ಬದಲಿಯಾಗಿ ಮತ್ತೊಬ್ಬ ಕನ್ನಡಿಗ ಮಯಾಂಕ್ ತಂಡ ಸೇರಿದ್ದಾರೆ. ಈ ಸ್ಲಾಟ್ಗೆ ಮಯಾಂಕ್ ಬೆಸ್ಟ್ ಚಾಯ್ಸ್ ಅನ್ನೋದ್ರಲ್ಲಿ ಡೌಟೇ ಇಲ್ಲ. 3ನೇ ಕ್ರಮಾಂಕದಲ್ಲಿ ನಾಯಕ ರಜತ್ ಪಟಿದಾರ್ಗೂ ಆಡಿದ ಅನುಭವವಿದೆ. ಹೀಗಾಗಿ ರಜತ್ಗೆ 3ನೇ ಕ್ರಮಾಂಕಕ್ಕೆ ಪ್ರಮೋಟ್ ಮಾಡಿಕೊಳ್ಳೋ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ. ರಜತ್ ಒನ್ ಡೌನ್ ಕಣಕ್ಕಿಳಿದ್ರೆ ಲೋವರ್ ಆರ್ಡರ್ಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಮನೋಜ್ ಬಾಡಂಗೆಗೆ ತಂಡದಲ್ಲಿ ಸ್ಥಾನ ನೀಡಿದರೂ ಅಚ್ಚರಿ ಇಲ್ಲ.
ಜಿತೇಶ್ ಜಾದೂ ಮಾಡ್ಬೇಕು..
ಕೀಪಿಂಗ್ನಲ್ಲಿ ಮಿಂಚಿಂಗ್ ಪರ್ಫಾಮೆನ್ಸ್ ನೀಡ್ತಿರೋ ಜಿತೇಶ್ ಶರ್ಮಾ, ಬ್ಯಾಟಿಂಗ್ನಲ್ಲಿ ಅಸ್ಥಿರ ಪ್ರದರ್ಶನ ತಂಡಕ್ಕೆ ಹಿನ್ನಡೆಯಾಗ್ತಿದೆ. ಇದೀಗ ಪ್ಲೇ ಆಫ್ಗೂ ಮುನ್ನ ಜಿತೇಶ್ ಒಂದು ಬಿಗ್ ಇನ್ನಿಂಗ್ಸ್ ಕಟ್ಟಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಿದೆ. ಡೇಂಜರಸ್ ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಸ್ಲಾಗ್ ಓವರ್ಗಳಲ್ಲಿ ಅಬ್ಬರಿಸಲು ರೆಡಿಯಾಗಿದ್ದು, ಇವರಿಬ್ಬರ ಜುಗಲ್ಬಂದಿ ನಡೆದ್ರೆ ಲಕ್ನೋ ಕಂಗಾಲ್ ಆಗೋಗೋದು ಪಕ್ಕಾ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೊಂದು ಮರ್ಮಾಘಾತ; AWACS ಛಿದ್ರಛಿದ್ರ.. ಏನಿದು..?
ಭುಜದ ನೋವಿನ ಕಾರಣಕ್ಕೆ ಚೆನ್ನೈ ಎದುರಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಜೋಶ್ ಹೇಜಲ್ವುಡ್ ಫಿಟ್ನೆಸ್ ಬಗ್ಗೆ ಇನ್ನೂ ಅನುಮಾನವಿದೆ. ಹೇಜಲ್ವುಡ್ ಇಲ್ಲದಿದ್ರೂ ನೋ ಟೆನ್ಶನ್. ಬೌಲಿಂಗ್ ವಿಭಾಗ ಸಖತ್ ಜೋಷ್ನಲ್ಲೇ ಇದೆ. ಹೇಜಲ್ವುಡ್ ಬದಲಿಯಾಗಿ ಆಡಿದ್ದ ಲುಂಗಿ ಎನ್ಗಿಡಿ ಹೊಸ ಭರವಸೆ ಹುಟ್ಟು ಹಾಕಿದ್ದಾರೆ. ಭುವನೇಶ್ವರ್ ಕುಮಾರ್, ಯಶ್ ದಯಾಳ್ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಚೆನ್ನೈ ಎದುರು ಕಣಕ್ಕಿಳಿದಿದ್ದ ತ್ರಿವಳಿ ಅಸ್ತ್ರವೇ ಲಕ್ನೋ ವಿರುದ್ಧವೂ ದಾಳಿ ಸಂಘಟಿಸೋ ಸಾಧ್ಯತೆಯಿದೆ.
ಲಕ್ನೋಗೆ ಡು ಆರ್ ಡೈ..
ಇವತ್ತಿನ ಪಂದ್ಯ ಗೆದ್ರೆ ಆರ್ಸಿಬಿ ತಂಡ ಪ್ಲೇ ಆಫ್ ಸ್ಥಾನ ಕನ್ಫರ್ಮ್ ಆಗಲಿದೆ. 11 ಪಂದ್ಯಗಳಲ್ಲಿ 5 ಪಂದ್ಯ ಗೆದ್ದಿರೋ ಲಕ್ನೋ ಸೂಪರ್ ಜೈಂಟ್ಸ್ಗೆ ಈ ಪಂದ್ಯ ಮೊಸ್ಟ್ ಇಂಪಾರ್ಟೆಂಟ್. ಲಕ್ನೋ ಗೆದ್ರೆ ಮಾತ್ರ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಗೆಲುವಿಗಾಗಿ ಏಡೆನ್ ಮಾರ್ಕಮ್, ಮಿಚೆಲ್ ಮಾರ್ಶ್, ನಿಕೋಲಸ್ ಪೂರನ್ರನ್ನೇ ನೆಚ್ಚಿಕೊಂಡಿರೋ ಲಕ್ನೋ ಇನ್ಕನ್ಸಿಸ್ಟೆಂಟ್ ಪರ್ಫಾಮೆನ್ಸ್ನಿಂದ ಬಳಲಿಹೋಗಿದೆ. ಪೂರನ್ ಆಟವೂ ಕೆಲ ಪಂದ್ಯಗಳಿಂದ ನಡೆದಿಲ್ಲ. ಕ್ಯಾಪ್ಟನ್ ಪಂತ್ ಅಂತೂ ಫ್ಲಾಪ್ ಮೇಲೆ ಫ್ಲಾಪ್ ಶೋ ನೀಡ್ತಿದ್ದಾರೆ. ಹೀಗಾಗಿ ಇಂದು ಲಕ್ನೋಗೆ ಲಕ್ ಕೈ ಹಿಡಿಯಬೇಕಿದೆ.
ಇದನ್ನೂ ಓದಿ: ಅಧಿಕೃತ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ.. ಗಡಿಯಲ್ಲಿ ಪಾಕ್ ಡ್ರೋಣ್ ಪುಡಿಪುಡಿ..! VIDEO
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್