newsfirstkannada.com

RCB vs LSG; ನವೀನ್​ ಓವರ್​ನಲ್ಲಿ ಹೊಡಿಬಡಿ ಆಟ.. ಕೊಹ್ಲಿ ನೆಟ್ಸ್​​ನಲ್ಲಿ ಮಿಂಚಿನ ಬ್ಯಾಟಿಂಗ್ ಹಿಂದಿದೆಯಾ ಆ ಸೇಡು?

Share :

Published April 2, 2024 at 5:45pm

Update April 2, 2024 at 5:48pm

  ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚಿನ್ನಸ್ವಾಮಿಯಲ್ಲಿ RCB ಅಖಾಡಕ್ಕೆ

  ಪಂದ್ಯ ಆರಂಭಕ್ಕೂ ಮೊದಲು ನೆಟ್​ನಲ್ಲಿ ವಿರಾಟ್​ ​ಬ್ಯಾಟಿಂಗ್ ಅಭ್ಯಾಸ​

  ನವೀನ್​ ಉಲ್​ ಹಕ್​ಗೆ ಸರಿಯಾದ ಉತ್ತರ ಕೊಡುತ್ತಾರಾ ವಿರಾಟ್..? ​

ಉತ್ತರಪ್ರದೇಶದ ಲಕ್ನೋ ಸೂಪರ್ ಜೈಂಟ್ಸ್ ಟೀಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರೆಡಿಯಾಗಿದೆ. ಕಳೆದ ವರ್ಷದ ಆ ಒಂದು ಘಟನೆ ಇಡೀ ಆರ್​ಸಿಬಿ ಫ್ಯಾನ್ಸ್​ಗಳನ್ನ ಕೆಣಕಿದ್ದಲ್ಲದೇ ಎಲ್ಲೆಡೆ ಭಾರೀ ಸುದ್ದಿಯಾಗಿತ್ತು. ಸದ್ಯ ಅದೇ ಬಿಸಿಯಲ್ಲಿ ಎರಡು ತಂಡಗಳು ಅಖಾಡಕ್ಕೆ ಇಳಿಯಲಿವೆ. ಇದರ ಮಧ್ಯೆ ಪಂದ್ಯ ಆರಂಭಕ್ಕೂ ಕೆಲ ಗಂಟೆಗಳ ಮೊದಲು ವಿರಾಟ್​ ಕೊಹ್ಲಿ ನೆಟ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರಾಕ್ಟೀಸ್​ ನಡೆಸಿದ್ದಾರೆ.

ವಿರಾಟ್​ ಕೊಹ್ಲಿ ನೆಟ್ಸ್​ನಲ್ಲಿ ಭರ್ಜರಿ ಸಿದ್ಧತೆ ನಡೆಸಿರುವುದರ ಹಿಂದಿನ ಸತ್ಯವೇ ಬೇರೆಯಿದೆ. ಹಳೆ ದುಷ್ಮಾನ್​​ಗೆ ಹೊಸ ಏಟು ಎನ್ನುವಂತೆ ಕೊಹ್ಲಿ ಮೈದಾನದಲ್ಲಿ ಬ್ಯಾಟ್​ ಬೀಸಲಿದ್ದಾರೆ. ಲಕ್ನೋದ ಪ್ಲೇಯರ್​ ನವೀನ್ ಉಲ್​ ಹಕ್​ ಬೌಲಿಂಗ್​ನಲ್ಲಿ ಸಖತ್ ಬ್ಯಾಟಿಂಗ್ ಮಾಡುವ ಮೂನ್ಸೂಚನೆಯಲ್ಲಿದ್ದಾರೆ. ಈ ಮೂಲಕ ಆರ್​ಸಿಬಿ ಫ್ಯಾನ್ಸ್​ ವಲಯದಲ್ಲಿರುವ ಆ ಸೇಡಿನ ಕಿಚ್ಚು ತಣ್ಣಗೆ ಮಾಡಲು ಕಿಂಗ್ ಕೊಹ್ಲಿ ಕಾತರರಾಗಿದ್ದಾರೆ. ಹೀಗಾಗಿ ನವೀನ್​ ಉಲ್​ ಹಕ್​ ಓವರ್​ನಲ್ಲಿ ವಿರಾಟ್ ಕೊಹ್ಲಿ ಹೊಡಿಬಡಿ ಆಟಕ್ಕೆ ಮುಂದಾಗಬಹುದು ಎಂದು ಹೇಳಲಾಗುತ್ತಿದೆ. ಇದೆಲ್ಲ ಇಂದಿನ ಪಂದ್ಯ ಆರಂಭವಾದ ಮೇಲೆ ಎಲ್ಲ ಗೊತ್ತಾಗುತ್ತದೆ. ಸದ್ಯಕ್ಕಂತೂ ಎಲ್ಲರ ಕಣ್ಣು ವಿರಾಟ್ ಮತ್ತು ನವೀನ್​ ಮೇಲೆ ನೆಟ್ಟಿದೆ ಎನ್ನಲಾಗಿದೆ.

ಇನ್ನು ಆರ್​ಸಿಬಿ ವರ್ಸಸ್​ ಲಕ್ನೋ ನಡುವಿನ ಮಹಾಕದನ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಸಂಜೆ 7:30ಕ್ಕೆ ಆರಂಭವಾಗಲಿದೆ. ಲೊಕ್ನೋ ತಂಡದ ಕ್ಯಾಪ್ಟನ್​ ಕೆಎಲ್​ ರಾಹುಲ್ ಕನ್ನಡಿಗನಾಗಿದ್ದು ಚಿನ್ನಸ್ವಾಮಿಯಲ್ಲಿ ಬ್ಯಾಟಿಂಗ್​ನಿಂದ ಆರ್ಭಟಿಸಬಹುದು. ಹೀಗಾಗಿ ರಾಹುಲ್​ನ ವಿಕೆಟ್​ ಅನ್ನು ಬೇಗ ಪಡೆದರೆ ಆರ್​ಸಿಬಿಗೆ ಲಾಭದಾಯಕ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB vs LSG; ನವೀನ್​ ಓವರ್​ನಲ್ಲಿ ಹೊಡಿಬಡಿ ಆಟ.. ಕೊಹ್ಲಿ ನೆಟ್ಸ್​​ನಲ್ಲಿ ಮಿಂಚಿನ ಬ್ಯಾಟಿಂಗ್ ಹಿಂದಿದೆಯಾ ಆ ಸೇಡು?

https://newsfirstlive.com/wp-content/uploads/2024/04/VIRAT_KOHLI-5.jpg

Load More