/newsfirstlive-kannada/media/post_attachments/wp-content/uploads/2025/04/CHINNASWAMY_Stadium.jpg)
ಪಂಜಾಬ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ನಡುವಿನ ಪಂದ್ಯದ ಆರಂಭದಲ್ಲೇ ಮಳೆ ಬರುತ್ತಿದ್ದರಿಂದ ಟಾಸ್ ಅನ್ನು ತಡ ಮಾಡಲಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈಗ ಆರ್​ಸಿಬಿ ಹಾಗೂ ಪಂಜಾಬ್ ನಡುವೆ 34ನೇ ಐಪಿಎಲ್ ಪಂದ್ಯ ನಡೆಯಬೇಕಿದೆ. ಆದರೆ ಪಂದ್ಯದ ಆರಂಭದಲ್ಲೇ ವರುಣರಾಯ ಎಂಟ್ರಿಯಾಗಿದ್ದರಿಂದ ಟಾಸ್ ಅನ್ನು ತಡ ಮಾಡಿ ಹಾಕಲಾಗುತ್ತದೆ ಎಂದು ಹೇಳಲಾಗಿದೆ. ಆಟಗಾರರು ಮೈದಾನಕ್ಕೆ ಇಳಿಯುವ ಮೊದಲೇ ಮಳೆ ಬರುತ್ತಿರುವುದರಿಂದ ಪಂದ್ಯವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.
ಇದನ್ನೂ ಓದಿ: RCBಗೆ ಶ್ರೇಯಸ್ ಅಯ್ಯರ್ ಅಂದ್ರೆ ಭಯನಾ.. ಪಂಜಾಬ್ ಕ್ಯಾಪ್ಟನ್​ ಬ್ಯಾಟಿಂಗ್, ಗೇಮ್ ಪ್ಲಾನ್ ಹೇಗಿರುತ್ತೆ?
/newsfirstlive-kannada/media/post_attachments/wp-content/uploads/2025/04/CHINNASWAMY_Stadium_1.jpg)
ಆರ್​ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯ ಈಗಾಗಲೇ ನಡೆಯಬೇಕಿತ್ತು. ಆದರೆ ಚಿನ್ನಸ್ವಾಮಿ ಮೈದಾನ ಸೇರಿದಂತೆ ಸುತ್ತಲೂ ಭಾರೀ ಮಳೆ ಆಗುತ್ತಿರುವ ಕಾರಣ ಪಂದ್ಯ ಆರಂಭಕ್ಕೂ ಮೊದಲೇ ವಿಘ್ನ ಎದುರಾದಂತೆ ಆಗಿದೆ. ಹೀಗಾಗಿ 10 ನಿಮಿಷದ ಬಳಿಕ ಟಾಸ್ ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಟಾಸ್ ಆಗಿಲ್ಲ.
ಇನ್ನು ಜೋರಾಗಿ ಮಳೆ ಬರುತ್ತಿರುವ ಕಾರಣ ಚಿನ್ನಸ್ವಾಮಿ ಮೈದಾನದ ಪಿಚ್ ಅನ್ನು ತಾಡಪಾಲಗಳು, ದೊಡ್ಡ ದೊಡ್ಡ ಕವರ್​ಗಳಿಂದ ಮುಚ್ಚಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಸಿಬ್ಬಂದಿ ಸೇರಿ ಪಿಚ್​ಗೆ ನೀರು ತಾಗದಂತೆ ರಕ್ಷಣೆ ಮಾಡಿದ್ದಾರೆ. ಮಳೆ ಬರುತ್ತಿರುವುದರಿಂದ ಟಾಸ್ ಅನ್ನು ತಡವಾಗಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us