ಆರ್​ಸಿಬಿ ಸೋಲಿಗೆ 5 ಪ್ರಮುಖ ಕಾರಣ.. ಕೊಹ್ಲಿ ಒಬ್ಬರೇ ಅಲ್ಲ..!

author-image
Ganesh
Updated On
ಆರ್​ಸಿಬಿ ಸೋಲಿಗೆ 5 ಪ್ರಮುಖ ಕಾರಣ.. ಕೊಹ್ಲಿ ಒಬ್ಬರೇ ಅಲ್ಲ..!
Advertisment
  • PBKS ವಿರುದ್ಧ ಆರ್​ಸಿಬಿಗೆ ಸೋಲು
  • ಐದು ವಿಕೆಟ್​ಗಳಿಂದ ಗೆದ್ದು ಬೀಗಿದ ಪಂಜಾಬ್
  • ಚಿನ್ನಸ್ವಾಮಿಯಲ್ಲಿ ಹ್ಯಾಟ್ರಿಕ್ ಸೋಲುಂಡ ಆರ್​ಸಿಬಿ

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಆರ್​ಸಿಬಿ ಸೋತಿದೆ. ಸತತ ಮೂರು ಪಂದ್ಯಗಳನ್ನು ತವರಿನಲ್ಲೇ ಸೋತು ಸುಣ್ಣವಾಗಿರುವ ಆರ್​ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಆರ್​ಸಿಬಿ ಸೋಲಿಗೆ 6 ಕಾರಣಗಳು..!

  • ಕಾರಣ 1, ಮಳೆ: ಮೊದಲ ಕಾರಣ ಮಳೆ. ಪಂದ್ಯ ಆರಂಭವಾಗುವ ಹೊತ್ತಿಗೆ ಚಿನ್ನಸ್ವಾಮಿ ಸುತ್ತಮತ್ತ ಮಳೆ ಬಂದಿತ್ತು. ಪರಿಣಾಮ ಪಂದ್ಯ ಆರಂಭವಾಗೋದು ತುಂಬಾ ಲೇಟ್ ಆಯಿತು. ಅಲ್ಲದೇ ಪಂದ್ಯದ ಓವರ್​ಗಳು ಕೂಡ ಕಡಿತ ಮಾಡಲಾಯಿತು. ಜೊತೆಗೆ ಮಳೆಯಿಂದ ಮೈದಾನದ ಪರಿಸ್ಥಿತಿಯೂ ಉತ್ತಮ ಆಗಿರಲಿಲ್ಲ.
  • ಕಾರಣ 2, ಟಾಸ್​: ಟಾಸ್​ ಗೆದ್ದ ಪಂಜಾಬ್ ಕ್ಯಾಪ್ಟನ್, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಒಂದು ವೇಳೆ ರಜತ್ ಟಾಸ್​ ಗೆದ್ದಿದ್ದರೆ, ಆರ್​ಸಿಬಿ ಆಯ್ಕೆ ಕೂಡ ಇದೇ ಆಗಿರುತ್ತಿತ್ತು. ಚಿನ್ನಸ್ವಾಮಿಯಲ್ಲಿ ಟಾಸ್​ ಗೆದ್ದವನೇ ಬಾಸು ಅನ್ನೋ ಮಾತಿದೆ.
  • ಕಾರಣ 3, ಕೊಹ್ಲಿ: ಚಿನ್ನಸ್ವಾಮಿಯಲ್ಲಿ ಕೊಹ್ಲಿಯ ಕಳಪೆ ಫಾರ್ಮ್​ ಮುಂದುವರಿದಿದೆ. ನಿನ್ನೆಯ ದಿನ 3 ಬಾಲ್ ಎದುರಿಸಿ ಒಂದು ರನ್​ ಗಳಿಸಿರೋದು ತಂಡಕ್ಕೆ ಪ್ರಮುಖ ಹಿನ್ನಡೆ ಆಯಿತು. ಕೊಹ್ಲಿ ಕಡೆಯಿಂದ ಬಿಗ್ ಸ್ಕೋರ್ ಬಂದಿದ್ದರೆ, ಆರ್​ಸಿಬಿ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿರುತ್ತಿತ್ತು.
  • ಕಾರಣ 4, ಪಾಂಡ್ಯ: ಕೃನಾಲ್ ಪಾಂಡ್ಯ ತಮ್ಮ ಕಳಪೆ ಫಾರ್ಮ್ ಚಿನ್ನಸ್ವಾಮಿಯಲ್ಲೂ ಮುಂದುವರಿಸಿದರು. ಇಲ್ಲಿಯವರೆಗೆ 7 ಪಂದ್ಯ ಆಡಿರುವ ಕೃನಾಲ್​, ಬ್ಯಾಟ್​ನಿಂದ ರನ್​ ಬಂದೇ ಇಲ್ಲ. ಇನ್ನು, ನಿನ್ನೆಯ ದಿನ ಬೌಲಿಂಗ್​ನಲ್ಲೂ ದುಬಾರಿಯಾದರು. ಒಂದು ಓವರ್​ ಮಾಡಿ 10 ರನ್​ ನೀಡಿದರು.
  • ಕಾರಣ 5, ಲಿವಿಂಗ್​ಸ್ಟೋನ್​: ಆರ್​ಸಿಬಿ ಭರವಸೆಯ ಬ್ಯಾಟ್ಸಮನ್​ ಆಗಿದ್ದ ಲಿವಿಂಗ್​ ಸ್ಟೋನ್ ನಿನ್ನೆಯ ದಿನ ಫೇಲ್ ಆದರು. 6 ಬಾಲ್ ಎದುರಿಸಿ ಕೇವಲ 4 ರನ್​ಗಳಿಗೆ ಶರಣಾದರು. ಇದು ತಂಡಕ್ಕೆ ದೊಡ್ಡ ಹಿನ್ನಡೆ ಆಯಿತು.
  • ಕಾರಣ 6, ದಯಾಳ್: ಆರ್​ಸಿಬಿ ಬೌಲಿಂಗ್ ವಿಭಾಗ ತುಂಬಾನೇ ಸ್ಟ್ರಾಂಗ್ ಇದೆ, ನಿಜ. ಆದರೆ ನಿನ್ನೆಯ ದಿನ ದಯಾಳ್ ಅವರ ಕೊಡುಗೆ ಏನೂ ಇಲ್ಲ. ಒಂದು ಕ್ಯಾಚ್ ಕೈಚೆಲ್ಲಿದರು. ಜೊತೆಗೆ 2.1 ಓವರ್ ಎಸೆದು ಯಾವುದೇ ವಿಕೆಟ್ ಪಡೆಯದೇ 18 ರನ್​​ಗಳನ್ನು ಬಿಟ್ಟುಕೊಟ್ಟರು.
  • ಕಾರಣ 7, ಜಿತೇಶ್ ಶರ್ಮಾ: ವಿಕೆಟ್ ಕೀಪರ್ ಆಗಿರುವ ಜಿತೇಶ್ ಶರ್ಮಾ, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದರು. ಆದರೆ, ಕೇವಲ 2 ರನ್​ಗಳಿಸಿ ನಿರಾಸೆ ಮೂಡಿಸಿದರು.

ಕಾರಣ 8, ಸಾಲ್ಟ್​:ಪ್ರತಿ ಪಂದ್ಯದಲ್ಲೂ ಸಿಹಿ ಆಗಿರುತ್ತಿದ್ದ ಸಾಲ್ಟ್ ನಿನ್ನೆ ಆರ್​ಸಿಬಿ ಪಾಲಿಗೆ ಕಹಿ ಆದರು. ನಾಲ್ಕು ಬಾಲ್ ಎದುರಿಸಿ ನಾಲ್ಕು ರನ್​ಗಳಿಸಿ ಬೇಗ ಔಟ್ ಆದರು.

ಇದನ್ನೂ ಓದಿ: ಕೊಹ್ಲಿ ಔಟ್ ಆಗಿರುವ ಹಿಂದೆ ಕಾಕತಾಳಿಯ.. 18 ವರ್ಷದ ಹಿಂದಿನ ಇದೇ ದಿನ ಮತ್ತೆ ರಿಪೀಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment