/newsfirstlive-kannada/media/post_attachments/wp-content/uploads/2025/06/Siddaramaiah.jpg)
ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿವೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಸೆಣಸಾಟ ನಡೆಯುತ್ತಿದ್ದು, ಟ್ರೋಫಿ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಇನ್ನು, ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಫೈನಲ್ ಮ್ಯಾಚ್ ವೀಕ್ಷಿಸಿ ರಿಲ್ಯಾಕ್ಸ್ ಆಗ್ತಿದ್ದಾರೆ. ಗದಗ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ಆದರು. ಬೆಂಗಳೂರಿನ HAL ವಿಮಾನ ನಿಲ್ದಾಣದಿಂದ ನಿವಾಸಕ್ಕೆ ಬರುವವರೆಗೂ ಕಾರಿನಲ್ಲಿ ಮ್ಯಾಚ್ ವೀಕ್ಷಣೆ ಮಾಡಿದರು. ಟ್ಯಾಬ್ನಲ್ಲಿ ಐಪಿಎಲ್ ಪಂದ್ಯ ವೀಕ್ಷಣೆ ಮಾಡುವ ಮೂಲಕ ರಿಲ್ಯಾಕ್ಸ್ ಆದರು.
ಇದನ್ನೂ ಓದಿ: ಫೈನಲ್ನಲ್ಲಿ ಕೈಕೊಟ್ಟ ಇಬ್ಬರು ಸ್ಟಾರ್ ಬ್ಯಾಟ್ಸಮನ್.. ಕೊಹ್ಲಿಯೇ ಆರ್ಸಿಬಿಗೆ ಆಧಾರ..!
ಸಿಎಂ ಸಿದ್ದರಾಮಯ್ಯ ಕ್ರಿಕೆಟ್ ಅಭಿಮಾನಿ. ಐಪಿಎಲ್ ಸಂದರ್ಭದಲ್ಲಿ ಬೆಂಗಳೂರಲ್ಲಿ ನಡೆಯುವ ಕೆಲವು ಪಂದ್ಯಗಳ ವೀಕ್ಷಣೆ ಮಾಡಲು ಸ್ಟೇಡಿಯಂಗೆ ಬರುತ್ತಾರೆ. ಅಂತಾರಾಷ್ಟ್ರೀಯ ಪಂದ್ಯಗಳು ಬೆಂಗಳೂರಲ್ಲಿ ನಡೆದಾಗಲೂ ಸ್ಟೇಡಿಯಂನಲ್ಲಿ ಕೂತು ಮ್ಯಾಚ್ ವೀಕ್ಷಣೆ ಮಾಡುತ್ತಾರೆ. ಇನ್ನು, ಡಿಸಿಎಂ ಡಿಕೆ ಶಿವಕುಮಾರ್, ಸದಾಶಿವನಗರದ ನಿವಾಸದಲ್ಲಿ ಫೈನಲ್ ಮ್ಯಾಚ್ ವೀಕ್ಷಣೆ ಮಾಡಿದರು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ಗಳಿಸಿದೆ. ಪಂಜಾಬ್ ಕಿಂಗ್ಸ್ ಗೆಲ್ಲಬೇಕು ಅಂದರೆ 191 ರನ್ಗಳಿಸಬೇಕು.
ಇದನ್ನೂ ಓದಿ: ಕೊಹ್ಲಿ ಒಬ್ಬರಿಂದಲೇ ಹೃದಯಗೆದ್ದ ಇನ್ನಿಂಗ್ಸ್.. ಪಂಜಾಬ್ ಕಿಂಗ್ಸ್ಗೆ 191 ರನ್ಗಳ ಟಾರ್ಗೆಟ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ