ನಾಳೆ RCB ಬೆಂಗಳೂರು ಮ್ಯಾಚ್​ಗೆ ಮಳೆ ಅಡ್ಡಿಯಾಗುವ ಆತಂಕ; IMD ಅಲರ್ಟ್!

author-image
Bheemappa
Updated On
ಪಂಜಾಬ್ ವಿರುದ್ಧ ಇವತ್ತು ಆರ್​ಸಿಬಿ ಪಂದ್ಯ.. ಗೆಲ್ಲಬೇಕು ಅಂದ್ರೆ ಯಾರೆಲ್ಲ ಆಡಬೇಕು..?
Advertisment
  • ಆರು ಪಂದ್ಯ ಆಡಿರುವ ಆರ್​ಸಿಬಿ ಎಷ್ಟರಲ್ಲಿ ಗೆಲುವು ಪಡೆದಿದೆ?
  • ರನ್​ರೇಟ್​ನಿಂದ ಒಂದು ಸ್ಥಾನ ಹಿಂದೆ ಇರುವ ಪಂಜಾಬ್​ ಕಿಂಗ್ಸ್​
  • ಬಲಿಷ್ಠವಾಗಿರುವ ಪಂಜಾಬ್​ ಕಿಂಗ್ಸ್​ ಸೋಲಿಸುವುದು ಹೇಗೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್​ನ ಹೈವೋಲ್ಟೇಜ್​ ಪಂದ್ಯ ಏಪ್ರಿಲ್​ 18, ಅಂದರೆ ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡು ತಂಡಗಳು ಬಲಿಷ್ಠವಾಗಿದ್ದು ಪಂದ್ಯವೂ ರೋಚಕ ಕ್ಷಣಕ್ಕೆ ಕಾರಣವಾಗಬಹುದು. ಇದರ ನಡುವೆ ಆರ್​ಸಿಬಿ- ಪಂಜಾಬ್​ನ ಹೈವೋಲ್ಟೇಜ್​ ಪಂದ್ಯಕ್ಕೆ ಮಳೆ ಅಡ್ಡಿ ಆಗೋ ಆತಂಕವಿದೆ.

ರಜತ್ ಪಾಟಿದಾರ್ ನೇತೃತ್ವದ ಆರ್​​ಸಿಬಿ ತಂಡ ಈಗಾಗಲೇ 6 ಪಂದ್ಯಗಳನ್ನ ಆಡಿದ್ದು ಇದರಲ್ಲಿ 4 ಗೆಲುವು ಸಾಧಿಸಿ ತವರಲ್ಲಿ ನಡೆದ 2 ಪಂದ್ಯಗಳನ್ನು ಸೋತಿದೆ. ಇನ್ನೂ ಪಂಜಾಬ್​ ಕೂಡ 6 ಪಂದ್ಯಗಳನ್ನು ಆಡಿದ್ದು 4 ಗೆಲುವು ಪಡೆದು ಎರಡರಲ್ಲಿ ಸೋಲುಂಡಿದೆ. ಹೀಗಾಗಿ ಪಾಯಿಂಟ್​ ಟೇಬಲ್​ನಲ್ಲಿ ಆರ್​ಸಿಬಿ 3ನೇ ಸ್ಥಾನದಲ್ಲಿದ್ದರೇ, ಪಂಜಾಬ್​ ಕಡಿಮೆ ರನ್​ರೇಟ್​​ನಿಂದ 4ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ಚಿನ್ನಸ್ವಾಮಿಯಲ್ಲಿ RCB vs CSK ಹೈವೋಲ್ಟೇಜ್​ ಪಂದ್ಯ ಯಾವಾಗ? ಟಿಕೆಟ್‌ಗಳು ಸೋಲ್ಡ್ ಔಟ್?

publive-image

ನಾಳೆ ಸಂಜೆ 7:30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿಷ್ಠೆಯ ಪಂದ್ಯದ ಸಮಯದಲ್ಲಿ ಹವಾಮಾನ ಹೇಗಿದೆ ಎಂದರೆ ಮಳೆಯಿಂದ ಸ್ವಲ್ಪ ತೊಂದರೆ ಆಗುವ ಸಾಧ್ಯತೆ ಇದೆ. ಈ ಮಳೆ ಪಂದ್ಯದ ಆರಂಭದಲ್ಲಿ ಮಾತ್ರ ನಿರೀಕ್ಷೆ ಮಾಡಬಹುದು. ನಂತರ ಮಳೆ ನಿಂತು ಹೋಗುತ್ತದೆ. ಆದರೆ ಪಂದ್ಯ ಸುಗಮವಾಗಿ ನಡೆಯುತ್ತದೆ ಎನ್ನಲಾಗಿದೆ.

ಎಂ. ಚಿನ್ನಸ್ವಾಮಿ ಮೈದಾನದ ಪಿಚ್ ಬ್ಯಾಟಿಂಗ್ ಸ್ನೇಹಿ ಆದರೂ ಸ್ಪಿನ್ನರ್​ಗಳಿಗೆ ಹೆಚ್ಚು ಅನುಕೂಲಕರ. ಹೀಗಾಗಿ ಈ ಮೈದಾನದಲ್ಲಿ ಟಾಸ್ ಗೆದ್ದವರೇ ಬಾಸ್ ಎನ್ನಬಹುದು. ಏಕೆಂದರೆ ಸೆಕೆಂಡ್ ಆಫ್​ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭವಾಗುತ್ತದೆ. ಏಕೆಂದರೆ ಇಬ್ಬನಿಯಿಂದ ಬಾಲ್ ಹಾಕುವುದು ಕಷ್ಟವಾಗುತ್ತದೆ. ಇದರಿಂದ ಪಂದ್ಯದಲ್ಲಿ ಚೇಸಿಂಗ್ ಮಾಡುವ ತಂಡ ಗೆಲುವು ಸಾಧಿಸುತ್ತದೆ. ಈಗಾಗಲೇ ಚಿನ್ನಸ್ವಾಮಿಯಲ್ಲಿ 2 ಪಂದ್ಯಗಳಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಆರ್​ಸಿಬಿ ಎರಡರಲ್ಲೂ ನೆಲಕಚ್ಚಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment