/newsfirstlive-kannada/media/post_attachments/wp-content/uploads/2025/04/PBKS-3.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ಚಿನ್ನಸ್ವಾಮಿ ಬ್ಯಾಟಲ್ ಗ್ರೌಂಡ್ನಲ್ಲಿ ಮುಖಾಮುಖಿಯಾಗ್ತಿರುವ ಉಭಯ ತಂಡಗಳ ಫೈಟ್ ಭಾರೀ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ತವರಿನಲ್ಲಿ ಅಡ್ತಿರೋ 3ನೇ ಪಂದ್ಯವನ್ನಾದರೂ ಗೆಲ್ಲೋಕೆ ಪಣ ತೊಟ್ಟಿರುವ ಆರ್ಸಿಬಿಗೆ ಪಂಜಾಬ್ ಕಿಂಗ್ಸ್ ಎದುರು ಟಫ್ ಟಾಸ್ಕ್ ಎದುರಾಗಲಿದೆ. ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರೋ ಪಂಜಾಬ್ಗೆ ಪಂಚ್ ಕೊಡಬೇಕಂದ್ರೆ ಮೊದಲು ಪಂಜಾಬ್ ಪವರ್ ಕಟ್ ಮಾಡಬೇಕಿದೆ.
ಯಂಗ್ ಲೆಫ್ಟಿ ಬ್ಯಾಟರ್ ಪ್ರಿಯಾಂಶ್, ಮೊದಲ ಬಾಲ್ನಿಂದಲೇ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸ್ತಾರೆ. ಪ್ರಭು ಸಿಮ್ರನ್ ಸಿಂಗ್ ಪವರ್ ಪ್ಲೇನಲ್ಲಿ ಡೇಂಜರಸ್ ಬ್ಯಾಟರ್. ಪೀಲ್ಡರ್ಸ್ 30 ಯಾರ್ಡ್ ಸರ್ಕಲ್ ಒಳಗಿದ್ದಾಗ ನಿರಾಯಾಸವಾಗಿ ಬೌಂಡರಿ ಬಾರಿಸೋ ಚಾಣಾಕ್ಷ ಇವರಲ್ಲಿದೆ. ಇನ್ನು ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ನ ಮಿಡಲ್ ಆರ್ಡರ್ ಪವರ್. ಓಪನರ್ಸ್ ಫೇಲಾದ್ರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ಶ್ರೇಯಸ್ ತಂಡಕ್ಕೆ ಆಸರೆಯಾಗ್ತಿದ್ದಾರೆ. ಹೀಗಾಗಿ ಆರ್ಸಿಬಿ ಪ್ಲೇಯರ್, ಈ ಮೂವರು ಬ್ಯಾಟರ್ಗಳ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಅಂಪೈರ್ಗಳಿಗೆ ಡೌಟ್ ಬಂದ್ರೆ ದಿಢೀರ್ ತಪಾಸಣೆ.. ಐಪಿಎಲ್ನಲ್ಲಿ ಯಾಕೆ ಬ್ಯಾಟ್ ಚೆಕ್ ಮಾಡ್ತಿದ್ದಾರೆ?
ತ್ರಿಮೂರ್ತಿಗಳಿಗೆ ಬ್ರೇಕ್ ಹಾಕಲು ತ್ರಿವಳಿ ಅಸ್ತ್ರ ರೆಡಿ..!
ಈ ತ್ರಿಮೂರ್ತಿಗಳೇ ಪಂಜಾಬ್ ತಂಡದ ಬ್ಯಾಟಿಂಗ್ ಶಕ್ತಿಗಳು ಅನ್ನೋದು ಓಪನ್ ಸಿಕ್ರೇಟ್. ಈ ತ್ರಿಮೂರ್ತಿಗಳ ಆಟಕ್ಕೆ ಬ್ರೇಕ್ ಹಾಕೋ ಜವಾಬ್ದಾರಿ ಇದೀಗ ಆರ್ಸಿಬಿಯ ತ್ರಿವಳಿಗಳ ಮುಂದಿದೆ. ಪವರ್ ಪ್ಲೇನಲ್ಲೇ ಆಸಿಸ್ ಗನ್ ಜೋಶ್ ಹೇಜಲ್ವುಡ್, ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮಾಸ್ಟರ್ ಪ್ಲಾನ್ ರೂಪಿಸಿ ಖೆಡ್ಡಾಗೆ ಬೀಳಿಸಬೇಕಿದೆ.
ಭುವನೇಶ್ವರ್ ಪರ್ಫೆಕ್ಟ್ ಆಗಿ ಸ್ವಿಂಗ್ ಅಸ್ತ್ರ ಪ್ರಯೋಗಿಸಿದ್ರೆ ಆರಂಭಿಕರ ವಿಕೆಟ್ ಎಗರಿಸಬಹುದು. ಜೋಶ್ ಹೇಜಲ್ವುಡ್ ಬೌನ್ಸರ್ ಟ್ರೈ ಮಾಡಿದ್ರೆ, ಶಾರ್ಟ್ ಪಿಚ್ ಎಸೆತಗಳಿಗೆ ತಡಕಾಡುವ ಶ್ರೇಯಸ್ನ ಪೆವಿಲಿಯನ್ಗೆ ಕಳಿಸಬಹುದು. ಲೆಫ್ಟ್ ಆರ್ಮ್ ಪೇಸರ್ ಯಶ್ ದಯಾಳ್ ಸ್ಲೋ ಕಟರ್ ಅಸ್ತ್ರವನ್ನ ಸರಿಯಾಗಿ ಪ್ರಯೋಗಿಸಿದ್ರೆ ವಿಕೆಟ್ ಬೇಟೆ ಕಷ್ಟವೇನಿಲ್ಲ.
ಇದನ್ನೂ ಓದಿ: ಅಂಪೈರ್ಗಳಿಗೆ ಡೌಟ್ ಬಂದ್ರೆ ದಿಢೀರ್ ತಪಾಸಣೆ.. ಐಪಿಎಲ್ನಲ್ಲಿ ಯಾಕೆ ಬ್ಯಾಟ್ ಚೆಕ್ ಮಾಡ್ತಿದ್ದಾರೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್