ಅಭಿಮಾನಿಗಳೇ ಗೊಂದಲ ಬೇಡ.. ಇವತ್ತು ಎಷ್ಟು ಗಂಟೆಗೆ ಮ್ಯಾಚ್..? ಮಿಸ್​ ಮಾಡ್ಕೋಬೇಡಿ..!

author-image
Ganesh
Updated On
ಆರ್​ಸಿಬಿಗೆ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್.. ಇನ್ನೂ ಎಷ್ಟು ಪಂದ್ಯ ಬಾಕಿ ಇದೆ..?
Advertisment
  • ಆರ್​ಸಿಬಿ vs ಪಂಜಾಬ್ ರಿವೇಂಜ್ ಫೈಟ್​ಗೆ ಕೌಂಟ್​​ಡೌನ್
  • ತವರಿನಲ್ಲಿ ಆದ ಅಪಮಾನಕ್ಕೆ ಇಂದು ಪಂಜಾಬ್​ ಪಂಚ್!
  • ಸೇಡಿನ ಸಮರ.. RCBಗೆ ಆಗುತ್ತಾ ಸೂಪರ್ ಸಂಡೇ..?

ಬೆಂಗಳೂರಲ್ಲಿ ಗೆದ್ದೇ ಗೆಲ್ತೀವಿ ಅನ್ನೋ ನಿರೀಕ್ಷೆಯಲ್ಲಿ ಅಖಾಡಕ್ಕಿಳಿದ್ದ ಆರ್​ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಪಂಚ್​ಗೆ ಹೋಮ್​ ಕಂಡೀಷನ್ಸ್​ನಲ್ಲೇ ಹ್ಯಾಟ್ರೀಕ್ ಸೋಲು ಅನುಭವಿಸಿದೆ. ಇದೀಗ ಪಂಜಾಬ್​ ಕಿಂಗ್ಸ್ ತಾಯ್ನಾಡದಲ್ಲೇ ಸೋಲಿನ ಪಂಚ್​ ನೀಡಲು ರಣತಂತ್ರ ರೂಪಿಸುತ್ತಿರುವ ಆರ್​ಸಿಬಿ, ರಿವೇಂಜ್ ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಇದನ್ನೂ ಓದಿ: ಆರ್​ಸಿಬಿಗೆ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್.. ಇನ್ನೂ ಎಷ್ಟು ಪಂದ್ಯ ಬಾಕಿ ಇದೆ..?

publive-image

ಹೀಗಾಗಿ ಸೂಪರ್ ಸಂಡೇಯ ಸೇಡಿನ ಸಮರದಲ್ಲಿ ಯಾರ್ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಅಂದಹಾಗೆ ಎಂದಿನಂತೆ ಸಂಜೆ 7.30ಕ್ಕೆ ಪಂದ್ಯ ನಡೆಯುತ್ತಿಲ್ಲ. ಬದಲಾಗಿ ಮಧ್ಯಾಹ್ನವೇ ಆರ್​ಸಿಬಿ ಪಂದ್ಯ ಆಯೋಜನೆಗೊಂಡಿದೆ.

ಚಂಡಿಗಡದಲ್ಲಿರುವ ಮಹಾರಾಜ ಯದುವಿಂದ್ರ ಸಿಂಗ್ ಅಂತಾರಾಷ್ಟ್ರಿಯ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆ ಮೂರು ಗಂಟೆಗೆ ನಡೆಯಲಿದೆ. ಸ್ಟಾರ್​ ಸ್ಪೋರ್ಟ್ಸ್​​ ವಾಹಿನಿಗಳಲ್ಲಿ ಪಂದ್ಯದ ನೇರ ಪ್ರಸಾರ ನಡೆಯಲಿದೆ. ಮೊಬೈಲ್​​ನಲ್ಲಿ ವಿಕ್ಷಣೆ ಮಾಡೋರು ಜಿಯೋ ಹಾಟ್​ಸ್ಟರ್​​ನಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ: ಇಂದು RCB vs PBKS ಪಂದ್ಯ.. ಈ ಹೈವೋಲ್ಟೇಜ್​ ಮ್ಯಾಚ್​ ಎಷ್ಟು ಗಂಟೆಗೆ, ಎಲ್ಲಿ ನಡೆಯುತ್ತೆ?

publive-image

ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಆರ್​ಸಿಬಿಗೆ ಇವತ್ತಿನ ಗೆಲುವು ತುಂಬಾನೇ ಇಂಪಾರ್ಟೆಂಟ್. ಪ್ಲೇ-ಆಫ್​ ಎಂಟ್ರಿ ನೀಡಬೇಕು ಅಂದರೆ ಆರ್​​ಸಿಬಿ ಇವತ್ತಿನ ಪಂದ್ಯವನ್ನು ಗೆಲ್ಲಲೇಬೇಕಿದೆ. ಈಗಾಗಲೇ ಅಂಕಪಟ್ಟಿಯಿಂದ ಆರ್​ಸಿಬಿ ಸ್ಥಾನ ಕುಸಿಯುತ್ತಿದ್ದು, ಟಾಪ್​ ಮೂರರೊಳಗೆ ಇರುತ್ತಿದ್ದ ಬೆಂಗಳೂರು ತಂಡ, ಐದನೇ ಸ್ಥಾನಕ್ಕೆ ಬಂದು ನಿಂತಿದೆ.

ಇದನ್ನೂ ಓದಿ: ಕರ್ನಾಟಕ ಹೆಣ್ಮಕ್ಕಳಿಗೆ ಭರ್ಜರಿ ಗುಡ್​​ನ್ಯೂಸ್​; ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment