RCB vs PBKS ಪಂದ್ಯ​.. ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದೇನು..?

author-image
Ganesh
Updated On
RCB vs PBKS ಪಂದ್ಯ​.. ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದೇನು..?
Advertisment
  • ಹವಾಮಾನ ಇಲಾಖೆಯಿಂದ ಗುಡ್​ನ್ಯೂಸ್
  • ಚಂಡಿಗಢ ವಾತಾವರಣ ಬಗ್ಗೆ ಸಿಕ್ಕ ಮಾಹಿತಿ ಏನು?
  • ಇಂದು ಗೆದ್ದವರು ನೇರವಾಗಿ ಫೈನಲ್​​ಗೆ ಎಂಟ್ರಿ

ಈ ಕಪ್​ ನಮ್ದೇ ಅನ್ನೋಕೆ ಜಸ್ಟ್​ ಎರಡೇ ಎರಡು ಹೆಜ್ಜೆಯಷ್ಟೇ ಬಾಕಿ. ಈ ಕಪ್​ ನಮ್ದಾಗಬೇಕು ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ರಾಯಲ್ ಆಟವಾಡಬೇಕಿದೆ. ಗೆಲುವಿನ ನಾಗಲೋಟ ಮುಂದುವರಿಸಬೇಕಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪವರ್​​ನ ಮೆಟ್ಟಿನಿಲ್ಲಬೇಕಿದೆ.

ಇದನ್ನೂ ಓದಿ: ಅಬ್ದುಲ್ ರಹಿಮಾನ್ ಕೇಸ್.. ಕರಾವಳಿ ಮುಸ್ಲಿಂ ಕಾಂಗ್ರೆಸ್​ ಮುಖಂಡರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ಈ ನಡುವೆ ಇವತ್ತಿನ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿತ್ತು. ಇದೀಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪಂದ್ಯ ನಡೆಯುವ ಅವಧಿಯಲ್ಲಿ ಮಳೆ ಬೀಳಲ್ಲ ಎಂಬ ಮಾಹಿತಿ ನೀಡಿದೆ.

ಇವತ್ತು ಮಲ್ಲನ್​ಪುರ ಮೈದಾನದ ಸುತ್ತಮುತ್ತ ಮಳೆ ಬೀಳುವ ಸಾಧ್ಯತೆ ಇಲ್ಲ. ಅಲ್ಲಿನ ವಾತಾವರಣ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಗಾಳಿಯ ವೇಗದ ಪ್ರಮಾಣ ಗಂಟೆಗೆ 20 ಕಿಲೋ ಮೀಟರ್ ಇರಲಿದೆ. ಪಂದ್ಯ ನಡೆಸಲು ಸೂಕ್ತ ವಾತಾವರಣ ಇರಲಿದೆ ಅಂತಾ ತಿಳಿಸಿದೆ.

ಇದನ್ನೂ ಓದಿ: RCB ಗೆಲುವಿನ ಹಿಂದೆ 6 ಸೂತ್ರಗಳು ಕೆಲಸ.. ಇಂದಿನ ಹೋರಾಟದ ಸ್ಟ್ರೆಂಥ್ ಕೂಡ ಅದೇ..!

ಪಂಜಾಬ್ ಕಿಂಗ್ಸ್​, ಆರ್​ಸಿಬಿ, ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಪ್ಲೇ-ಆಫ್​ಗೆ ಎಂಟ್ರಿ ನೀಡಲಿವೆ. ಇಂದು ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಮೊದಲ ಎರಡು ಸ್ಥಾನದಲ್ಲಿರುವ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಸೆಣಸಾಟ ನಡೆಸಲಿವೆ. ಇಂದು ಗೆದ್ದ ತಂಡ ಫೈನಲ್​ಗೆ ಎಂಟ್ರಿ ಕೊಡಲಿದೆ. ನಾಳೆ ಮುಂಬೈ ಇಂಡಿಯನ್ಸ್​​ ಹಾಗೂ ಗುಜರಾತ್ ಟೈಟನ್ಸ್ ಮಧ್ಯೆ ಎಲಿಮಿನೇಟರ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಚಿಕ್ಕೋಡಿ ಮೇಖಳಿ ಮಠ ಧ್ವಂಸ.. ಅಧಿಕಾರಿಗಳ ಇಂಥ ನಿರ್ಧಾರಕ್ಕೆ ಅಸಲಿ ಕಾರಣ ಏನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment