/newsfirstlive-kannada/media/post_attachments/wp-content/uploads/2025/04/KOHLI-8.jpg)
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆರ್ಸಿಬಿ ಮತ್ತೊಂದು ಮುಖಭಂಗ ಎದುರಿಸಿದೆ. ತವರು ಮೈದಾನದಲ್ಲಿ ಸತತ ಮೂರನೇ ಬಾರಿಗೆ ಸೋಲುವ ಮೂಲಕ ಭಾರೀ ನಿರಾಸೆ ಮೂಡಿಸಿದೆ.
ಎದುರಾಳಿ ಪಂಜಾಬ್ ಕಿಂಗ್ಸ್, ಆರ್ಸಿಬಿ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಂಜೆ ವೇಳೆ ಮಳೆ ಸುರಿದ ಪರಿಣಾಮ, 14 ಓವರ್ಗಳಿಗೆ ಪಂದ್ಯವನ್ನು ಸೀಮಿತ ಮಾಡಲಾಗಿತ್ತು. ಟಾಸ್ ಸೋತು ಬ್ಯಾಟ್ ಮಾಡಿದ ರಜತ್ ಪಡೆ, 9 ವಿಕೆಟ್ ಕಳೆದುಕೊಂಡು 95 ರನ್ಗಳಿಸಿತ್ತು. ಟಿಮ್ ಡೆವೀಡ್ ಆರ್ಸಿಬಿ ಸ್ಕೋರ್ ಹೆಚ್ಚಿಸುವಲ್ಲಿ ಅಮೋಘ ಕೊಡುಗೆ ನೀಡಿದರು. 26 ಬಾಲ್ನಲ್ಲಿ ಮೂರು ಸಿಕ್ಸರ್, ಐದು ಬೌಂಡರಿ ಜೊತೆ 50 ರನ್ಗಳ ಕಾಣಿಕೆ ನೀಡಿದರು.
ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ
96 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಇನ್ನೂ 11 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಭರ್ಜರಿ ಸಾಧಿಸಿದೆ. ಪಂಜಾಬ್ ಕಿಂಗ್ಸ್ ಪರ ವಧೇರಾ 19 ಬಾಲ್ನಲ್ಲಿ 33 ರನ್ಗಳಿಸಿದರು. ಆರ್ಸಿಬಿ ಪರ ಹೇಜಲ್ವುಡ್ ಅದ್ಭುತ ಬೌಲಿಂಗ್ ದಾಳಿ ನಡೆಸಿದರು. ಮೂರು ಓವರ್ನಲ್ಲಿ ಕೇವಲ 13 ರನ್ ನೀಡಿ ಮೂರು ವಿಕೆಟ್ ಪಡೆದರು. ಭುವಿ 26 ರನ್ ನೀಡಿ ಎರಡು ವಿಕೆಟ್ ಪಡೆದರೂ, ಗೆಲುವು ಆರ್ಸಿಬಿಗೆ ಸಿಗಲಿಲ್ಲ. ಆ ಮೂಲಕ 18ನೇ ಆವೃತ್ತಿಯಲ್ಲಿ ಆಡಿದ ಮೂರು ಪಂದ್ಯಗಳನ್ನೂ ಆರ್ಸಿಬಿ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಸೋಲನ್ನು ಕಂಡಿದೆ.
ಇದನ್ನೂ ಓದಿ: 6, 6, 6; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್.. RCB ಮಾನ ಉಳಿಸಿದ ಸ್ಫೋಟಕ ಬ್ಯಾಟರ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್