/newsfirstlive-kannada/media/post_attachments/wp-content/uploads/2025/05/RCB-13.jpg)
ಐಪಿಎಲ್ನಲ್ಲಿ ನಾಳೆ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಮೊದಲ ಎರಡು ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಸೆಣಸಾಟ ನಡೆಯಲಿದೆ. ಇಲ್ಲಿ ಗೆದ್ದವರು ಫೈನಲ್ ಪ್ರವೇಶ ಮಾಡಲಿದ್ದಾರೆ. ಸೋತವರಿಗೂ ಇನ್ನೊಂದು ಅವಕಾಶ ಸಿಗಲಿದೆ. ನಾಳಿನ ಪಂದ್ಯಕ್ಕೆ ಮಳೆಯ ಆತಂಕ ಇದೆ. ಒಂದು ವೇಳೆ ಮಳೆ ಬಂದರೆ, ಮಳೆಯಿಂದಾಗಿ ಪಂದ್ಯ ರದ್ದಾದರೆ ಬಿಸಿಸಿಐನ ಹೊಸ ನಿಯಮ ಏನು ಅನ್ನೋ ವಿವರ ಇಲ್ಲಿದೆ.
ಮಳೆಯಿಂದ ಕ್ವಾಲಿಫೈಯರ್-1 ರದ್ದಾದರೆ..
ಬಿಸಿಸಿಐ ನಿಯಮದ ಪ್ರಕಾರ.. ಪಂಜಾಬ್ ಕಿಂಗ್ಸ್ vs ಆರ್‌ಸಿಬಿ ನಡುವಿನ ಪಂದ್ಯ ರದ್ದಾದರೆ ಪಂಜಾಬ್ ಫೈನಲ್‌ಗೆ ಟಿಕೆಟ್ ಪಡೆಯುತ್ತದೆ. ಆರ್‌ಸಿಬಿ ಫೈನಲ್ ತಲುಪಲು ಕ್ವಾಲಿಫೈಯರ್-2 ಆಡಬೇಕಾಗುತ್ತದೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.
ಪ್ಲೇ-ಆಫ್ ಪಂದ್ಯಗಳಲ್ಲಿ ಮೀಸಲು ದಿನ..?
ಇಲ್ಲ, ಪ್ಲೇಆಫ್ ಪಂದ್ಯಗಳ ಮೀಸಲು ದಿನದ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಕಳೆದ ಋತುವಿನಲ್ಲಿ ಐಪಿಎಲ್ ಫೈನಲ್‌ಗೆ ಮೀಸಲು ದಿನ ನಿಗದಿಪಡಿಸಲಾಗಿತ್ತು. ಬಿಸಿಸಿಐ ನಿರ್ಧಾರದ ಪ್ರಕಾರ, ಪ್ಲೇ-ಆಫ್ ಪಂದ್ಯಗಳು ರದ್ದಾಗುವ ಸಾಧ್ಯತೆ ಕಡಿಮೆ ಇದೆ.
ಇದನ್ನೂ ಓದಿ: ದಿಗ್ವೇಶ್ ರಾಠಿ ಮಂಗಾಟಕ್ಕೆ ಸೊಪ್ಪು ಹಾಕದ ಪಂತ್; ಆರ್‌ಸಿಬಿ ಫ್ಯಾನ್ಸ್ ಹೃದಯ ಗೆದ್ದ LSG ನಾಯಕ..! VIDEO
ಬಿಸಿಸಿಐ ಹೊಸ ನಿಯಮ..
ಐಪಿಎಲ್ 2025 ಪಂದ್ಯಗಳ ಹೆಚ್ಚುವರಿ ಸಮಯಕ್ಕೆ ಬಿಸಿಸಿಐ 120 ನಿಮಿಷಗಳನ್ನು ಸೇರಿಸಿದೆ. ಅದರ ಪ್ರಕಾರ ರಾತ್ರಿ 9:30 ರೊಳಗೆ ಪೂರ್ಣ 20 ಓವರ್‌ಗಳ ಪಂದ್ಯ ಪ್ರಾರಂಭ ಮಾಡಲು ಅವಕಾಶ ಇದೆ.
ಮೊಹಾಲಿಯಲ್ಲಿ ಮಳೆ ಸಾಧ್ಯತೆ
ಮೊಹಾಲಿ ಹವಾಮಾನ ಇಲಾಖೆ ಪ್ರಕಾರ, ಗುರುವಾರದ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆ ಸಾಧ್ಯತೆ ಇದೆ ಎಂದಿದೆ. ಆದರೆ ಶುಕ್ರವಾರ ಇಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆ ದಿನ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಆರ್ಸಿಬಿಯಿಂದ ಓರ್ವನ ಆಯ್ಕೆ.. ABD ಪ್ರಕಾರ ಸೂಪರ್ ಸ್ಟಾರ್ ಯಾರು? ಸ್ನೇಹಿತ ಕೊಹ್ಲಿ ಅಲ್ಲ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ