/newsfirstlive-kannada/media/post_attachments/wp-content/uploads/2025/06/RAIN.jpg)
ಐಪಿಎಲ್ನ ಅಂತಿಮ ಪಂದ್ಯವು ಇವತ್ತು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಎರಡೂ ತಂಡಗಳು ಇಂದಿನ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿವೆ.
ಮತ್ತೊಂದು ಕಡೆ ಫೈನಲ್ ಫಲಿತಾಂಶ ತಿಳಿಯಲು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಆದರೆ ಇವತ್ತಿನ ಪಂದ್ಯಕ್ಕೆ ಕಪ್ಪು ಮೋಡಗಳು ಕವಿದಿವೆ. ಪಂಜಾಬ್ ಮತ್ತು ಬೆಂಗಳೂರು ನಡುವಿನ ಅಂತಿಮ ಪಂದ್ಯ ಮಳೆಯಿಂದಾಗಿ ಮುಂದೂಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಣ ಕಣದಲ್ಲೂ RCB.. ಈ ಸಲ ಕಪ್ ಗೆಲ್ಲಬೇಕೆಂದು ತಿಮ್ಮಪ್ಪನಿಗೆ ಮಂಡಿಸೇವೆ ಸಲ್ಲಿಸಿದ ಅಭಿಮಾನಿ
ಅಂತಿಮ ಮ್ಯಾಚ್ ಯಾವಾಗ..?
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಸಂಜೆ 7:30 ಕ್ಕೆ ಆರಂಭವಾಗಲಿದೆ. ಟಾಸ್ಗೆ ಕೆಲವೇ ಗಂಟೆ ಬಾಕಿ ಇರುವಾಗ ಮಳೆ ಬೀಳಲು ಶುರುವಾಗಿದೆ. ಮಳೆಯಾಗುವ ಸಾಧ್ಯತೆ ಶೇ. 50 ರಿಂದ 75 ರಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಐಪಿಎಲ್ ಅಂತಿಮ ದಿನ ಮಳೆಗೆ ಕೊಚ್ಚಿಹೋಗಬಹುದು. ಇಂದು ಮಳೆಯಿಂದ ಪಂದ್ಯ ರದ್ದಾದರೂ ಅಭಿಮಾನಿಗಳು ನಿರಾಶೆಗೊಳ್ಳುವ ಅಗತ್ಯ ಇಲ್ಲ. ಮಳೆ ಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ಬಿಸಿಸಿಐ ಮೀಸಲು ದಿನವನ್ನು ನಿಗದಿ ಮಾಡಿದೆ.
ಇದನ್ನೂ ಓದಿ:RCB VS PBKS ಫೈನಲ್ ಮ್ಯಾಚ್ ಆರಂಭಕ್ಕೂ ಮೊದಲೇ ಶಾಕಿಂಗ್ ನ್ಯೂಸ್..
ಫೈನಲ್‌ಗೆ ಮೀಸಲು ದಿನ
ಐಪಿಎಲ್ ನಿಯಮಗಳ ಪ್ರಕಾರ, ಬೆಂಗಳೂರು-ಪಂಜಾಬ್ ನಡುವಿನ ಅಂತಿಮ ಪಂದ್ಯದಲ್ಲಿ ಮಳೆ ಬಂದರೆ ಜೂನ್ 3ರ ಬದಲು ಜೂನ್ 4 ಕ್ಕೆ ನಡೆಸಲಾಗುತ್ತದೆ. ಹೆಚ್ಚುವರಿಯಾಗಿ ಒಂದು ದಿನವನ್ನು ಮೀಸಲಿಡಲಾಗಿದೆ.
120 ನಿಮಿಷಗಳ ಹೆಚ್ಚುವರಿ ಸಮಯ
ಸ್ವಲ್ಪ ಸಮಯ ಮಳೆ ಬಂದು ಹೋದರೆ ಪಂದ್ಯ ನಡೆಸಲು ಹೆಚ್ಚಿನ ಸಮಯ ಮೀಸಲಿಡಲಾಗಿದೆ. ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದರೆ, 120 ನಿಮಿಷಗಳನ್ನು ಮೀಸಲು ಗಂಟೆಗಳಾಗಿ ಇರಿಸಲಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯ ಮಳೆಯಿಂದಾಗಿ ನಿಗದಿತ ಅವಧಿಗೆ ನಡೆಯಲಿಲ್ಲ. ಸಂಜೆ 7.30ಕ್ಕೆ ಮ್ಯಾಚ್ ಶುರುವಾಗಬೇಕಿತ್ತು. ಆದರೆ ರಾತ್ರಿ 9:45ಕ್ಕೆ ಎಲ್ಲವೂ ಸರಿ ಹೋದ ನಂತರ ಪೂರ್ಣಾವಧಿ ಓವರ್ನೊಂದಿಗೆ ಮ್ಯಾಚ್ ನಡೆಸಲಾಗಿತ್ತು.
ಇದನ್ನೂ ಓದಿ: RCBಗೋಸ್ಕರ ಮದುವೆ ಮುಂದೂಡಿದ್ದ ಕ್ಯಾಪ್ಟನ್ ಪಾಟಿದಾರ್.. ರಜತ್ ತ್ಯಾಗದ ಸ್ಟೋರಿ ನಿಮ್ಗೆ ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ