ಆರ್​ಸಿಬಿಯ ಒಂದೊಂದು ಅಸ್ತ್ರವೂ ಬೆಂಕಿಯ ಚೆಂಡು.. ಕಪ್​​ ಗೆಲ್ಲಲು ಇನ್ನೊಂದೇ ಹೆಜ್ಜೆ..!

author-image
Ganesh
Updated On
RCB ಈ ಸಲ ಕಪ್​ ಗೆಲ್ಲದಿದ್ರೆ, ಇನ್ಮುಂದೆ ಟ್ರೋಫಿಗೆ ಮುತ್ತಿಡುವ ಅವಕಾಶ ಸಿಗಲ್ವಾ..?
Advertisment
  • ಕ್ವಾಲಿಫೈಯರ್​-1ನಲ್ಲಿ RCB ಭರ್ಜರಿ ಬೌಲಿಂಗ್​
  • ಆರ್​​ಸಿಬಿ ಆರ್ಭಟಕ್ಕೆ ಬೆಚ್ಚಿ ಬಿದ್ದ ಪಂಜಾಬ್​ ಕಿಂಗ್ಸ್​
  • ಬೌಲಿಂಗ್​ ಅಟ್ಯಾಕ್​ಗೆ ‘ಜೋಷ್​​’ ತಂದ ಹೇಜಲ್​ವುಡ್

ಕ್ವಾಲಿಫೈಯರ್​ ಕದನದಲ್ಲಿ ಆರ್​​ಸಿಬಿ ಬೌಲರ್​​ಗಳು ನಿಜಕ್ಕೂ ಬೊಂಬಾಟ್​​ ಪ್ರದರ್ಶನ ನೀಡಿದ್ರು. ರಣಬೇಟೆಗಾರ ಹೇಜಲ್​ವುಡ್​​ ಎಂಟ್ರಿಯಿಂದಾಗಿ ಇಡೀ ಆರ್​​ಸಿಬಿ ಬೌಲಿಂಗ್​​ ಅಟ್ಯಾಕ್​ನ ಜೋಷ್​ ನೆಕ್ಸ್ಟ್​​ ಲೆವೆಲ್​ನಲ್ಲಿತ್ತು. ಆರ್​​ಸಿಬಿಯ ರಾಯಲ್​ ಬೌಲಿಂಗ್​ಗೆ ಪಂಜಾಬ್​ ಪಡೆ ಪತರುಗುಟ್ಟಿ ಹೋಯ್ತು.

ಲೀಗ್​ಸ್ಟೇಜ್​ನಲ್ಲಿ ಕೊನೆಯ ಪಂದ್ಯದಲ್ಲಿ ದುಬಾರಿಯಾಗಿದ್ದ ಆರ್​​ಸಿಬಿ ಬೌಲರ್ಸ್​​ ನಿನ್ನೆ ಬೊಂಬಾಟ್​​ ಪರ್ಫಾಮೆನ್ಸ್​ ನೀಡಿದ್ರು, ನಿಜಕ್ಕೂ ಮುಲ್ಲನ್​​ಪುರದಲ್ಲಿ ಆರ್​​ಸಿಬಿ ಬೌಲಿಂಗ್​ ಅಟ್ಯಾಕ್​ ಫುಲ್​​ ಜೋಷ್​​ನಲ್ಲಿತ್ತು. ಅದೇನು ಪ್ಲಾನಿಂಗ್​​, ಅದೇನು ಅಕ್ಯೂರೆಸಿ.. ಆರ್​​ಸಿಬಿಯ ಘರ್ಜನೆಯ ಮುಂದೆ ಪಂಜಾಬ್​​ನ ಶೇರ್​​ಗಳೆಲ್ಲಾ ಬೋನು ಸೇರಿದ್ವು.

ಇದನ್ನೂ ಓದಿ: BREAKING: ಹಿರಿಯ ಸಾಹಿತಿ ಹೆಚ್​.ಎಸ್​. ವೆಂಕಟೇಶಮೂರ್ತಿ ಇನ್ನಿಲ್ಲ

publive-image

RCB ಬೌಲಿಂಗ್​ ಅಟ್ಯಾಕ್​ಗೆ ‘ಜೋಷ್​​’ ತಂದ ಹೇಜಲ್​‘ಗಾಡ್​

ಅಸಂಖ್ಯ ಆರ್​​ಸಿಬಿ ಅಭಿಮಾನಿಗಳ ಪ್ರಾರ್ಥನೆ ನಿನ್ನೆಯ ಪಂದ್ಯಕ್ಕೂ ಮುನ್ನವೇ ಫಲಿಸಿತು. ಫಿಟ್​ನೆಸ್​​ ಸಮಸ್ಯೆಯಿಂದಾಗಿ ಕಳೆದ ಕೆಲ ಪಂದ್ಯಕ್ಕೆ ಆಸಿಸ್​ ವೇಗಿ ಜೋಷ್​ ಹೇಜಲ್​​ವುಡ್​ ಅಲಭ್ಯರಾಗಿದ್ರು. ಹೇಜಲ್​ವುಡ್​ ಅಲಭ್ಯತೆಯಿಂದಾಗಿ ಇಡೀ ಬೌಲಿಂಗ್​​ ಲೈನ್​ಅಪ್​ ಹಳಿ ತಪ್ಪಿತ್ತು. ಆದ್ರೆ ನಿನ್ನೆ ಆಸಿಸ್​ ವೇಗಿಯ ಕಮ್​ಬ್ಯಾಕ್​​ ಇಡೀ ಬೌಲಿಂಗ್​ ಪಡೆಗೇ ಜೋಷ್​ ತಂದು ಬಿಡ್ತು.

ಹೇಜಲ್​ವುಡ್​ ಆರ್ಭಟಕ್ಕೆ ಹೌಹಾರಿದ ಪಂಜಾಬ್​

ಕಮ್​​ಬ್ಯಾಕ್​ ಪಂದ್ಯದಲ್ಲೇ ಜೋಷ್​ ಹೇಜಲ್​ವುಡ್​​ ಭರ್ಜರಿ ಬೌಲಿಂಗ್​ ಮಾಡಿದ್ರು. ಹೇಜಲ್​ವುಡ್​​ ಆರ್ಭಟಕ್ಕೆ ಪಂಜಾಬ್​ ಪಡೆ ಹೌಹಾರಿಬಿಡ್ತು. ಫಸ್ಟ್​ ಓವರ್​ನ 4ನೇ ಎಸೆತದಲ್ಲೇ ಶ್ರೇಯಸ್​ ಅಯ್ಯರ್​ ವಿಕೆಟ್​ ಬೇಟೆಯಾಡಿದ ಹೇಜಲ್​ವುಡ್​, ನೆಕ್ಸ್ಟ್​​ ಓವರ್​​ ಜೋಸ್​ ಇಂಗ್ಲಿಸ್​ ವಿಕೆಟ್​​ ಉರುಳಿಸಿದ್ರು. ಸೆಕೆಂಡ್​ ಸ್ಪೆಲ್​ನ ಫಸ್ಟ್​ ಬಾಲ್​ನಲ್ಲಿ ಅಝಮತುಲ್ಲಾ ಜಝಾಯಿ ವಿಕೆಟ್​ ಉರುಳಿಸಿ ಪಂಜಾಬ್​ ಆಟಕ್ಕೆ ಫುಲ್​ ಸ್ಟಾಫ್​ ಇಟ್ರು. ಜಸ್ಟ್​ 21 ರನ್​ ಬಿಟ್ಟು ಕೊಟ್ಟ ಹೇಜಲ್​ವುಡ್​​ 3 ವಿಕೆಟ್​ ಉರುಳಿಸಿ ಮಿಂಚಿದ್ರು.

ಇದನ್ನೂ ಓದಿ: ಫೈನಲ್​ಗೆ 4ನೇ ಬಾರಿ ಎಂಟ್ರಿಕೊಟ್ಟ RCB.. Qualifier-1ರಲ್ಲಿ ಬೆಂಗಳೂರಿಗೆ ಸುಲಭ ಜಯ

publive-image

ಸುಯಶ್​ ಸ್ಪಿನ್​ ಬಲೆಗೆ ಬಿದ್ದ ‘ಪಂಜಾಬ್​ ಶೇರ್ಸ್’

ಮುಲ್ಲನ್​ಪುರದಲ್ಲಿ ಮಿಡಲ್​ ಓವರ್​​ನಲ್ಲಿ ಬೌಲಿಂಗ್​ಗೆ ಬಂದ ಸುಯಶ್​ ಶರ್ಮಾ ಸ್ಪಿನ್​ ಮ್ಯಾಜಿಕ್​ ಮಾಡಿದ್ರು. ಸುಯಶ್​​ ಸ್ಪಿನ್​ ಬಲೆಗೆ ಬಿದ್ದ ಪಂಜಾಬ್​ನ ಶೇರ್​ಗಳು ವಿಲ ವಿಲ ಒದ್ದಾಡಿದ್ರು. ಹಾಕಿದ ಮೊದಲ ಓವರ್​ನಲ್ಲೇ ಶಶಾಂಕ್​ ಸಿಂಗ್​, ಮುಷೀರ್​ ಖಾನ್​ಗೆ ಸುಯಶ್​ ಶರ್ಮಾ ಖೆಡ್ಡಾ ತೋಡಿದ್ರು. ನೆಕ್ಸ್ಟ್​ ಓವರ್​ನಲ್ಲಿ ಡೇಂಜರಸ್​​ ಬ್ಯಾಟರ್​ ಮಾರ್ಕಸ್​​ ಸ್ಟೋಯಿನಿಸ್​ ಖೇಲ್​ ಖತಂ ಮಾಡಿದ್ರು. 3 ಓವರ್​ ಬೌಲಿಂಗ್​ ಮಾಡಿದ ಸುಯಶ್​ ಶರ್ಮಾ 17 ರನ್​ ನೀಡಿ 3 ವಿಕೆಟ್​ ಬೇಟೆಯಾಡಿದ್ರು.

ಮುಲ್ಲನ್​ಪುರದಲ್ಲಿ ದಯಾಳ್​ ದರ್ಬಾರ್​

ಕಳೆದ ಪಂದ್ಯದಲ್ಲಿ ದುಬಾರಿ ಅನಿಸಿದ್ದ ವೇಗಿ ಯಶ್​ ದಯಾಳ್​ಗೆ ಮುಲ್ಲನ್​ಪುರದಲ್ಲಿ ಯಶಸ್ಸು ಸಿಗ್ತು. ಆರಂಭದಿಂದಲೇ ದರ್ಬಾರ್​ ನಡೆಸಿದ ದಯಾಳ್​ ಪಂಜಾಬ್​ಗೆ ಆರಂಭದಲ್ಲೇ ಪಂಚ್​ ಕೊಟ್ರು. ಪಂಜಾಬ್​ನ ಕುಸಿತಕ್ಕೆ ಮುನ್ನುಡಿ ಬರೆದಿದ್ದೇ ಈ ದಯಾಳ್​. 2ನೇ ಓವರ್​ನ 2ನೇ ಎಸೆತದಲ್ಲೇ ಪ್ರಿಯಾಂಶ್​ ಆರ್ಯಗೆ ಪೆವಿಲಿಯನ್​ ದಾರಿ ತೋರಿಸಿದ್ರು. 7ನೇ ಓವರ್​ನಲ್ಲಿ ನೆಹಾಲ್​ ವಡೇರಾ ಆಟಕ್ಕೆ ಅಂತ್ಯಹಾಡಿದ್ರು.

ಇದನ್ನೂ ಓದಿ: RCB ಗೆಲುವಿನ ಕ್ರೆಡಿಟ್​ ಯಾರಿಗೆ..? ಕ್ಯಾಪ್ಟನ್​ ರಜತ್ ಹೇಳಿದ ಹೆಸರು ಹ್ಯಾಜಲ್ವುಡ್​ ಅಲ್ಲವೇ ಅಲ್ಲ!

publive-image

ಸ್ವಿಂಗ್​ ಕಿಂಗ್​ ಭುವನೇಶ್ವರ್​ ಬೊಂಬಾಟ್​​ ಬೌಲಿಂಗ್​

ಸ್ವಿಂಗ್​ ಕಿಂಗ್​ ಭುವನೇಶ್ವರ್​ ಕುಮಾರ್​​ ನಿನ್ನೆ ರಿಧಮ್​ ಕಂಡು ಕೊಡ್ರು. ಆರಂಭದಿಂದಲೇ ಪಂಜಾಬ್​ ಪಡೆಯ ಮೇಲೆ ಪ್ರೆಶರ್​ ಹಾಕಿದ್ರು. ಡೇಂಜರಸ್​​ ಪ್ರಭ್​ಸಿಮ್ರನ್​ ಸಿಂಗ್​ ವಿಕೆಟ್​ ಕಬಳಿಸಿ ಮಿಂಚಿದ ಭುವನೇಶ್ವರ್​ ಕುಮಾರ್​ ಸೂಪರ್​ ಸ್ಪೆಲ್​ ಹಾಕಿದ್ರು. ಮಧ್ಯದಲ್ಲಿ ಒಂದು ಓವರ್​ ಬೌಲಿಂಗ್​ ಮಾಡಿದ ರೊಮಾರಿಯೋ ಶೆಫರ್ಡ್​ ಕೂಡ ವಿಕೆಟ್​ ಬೇಟೆಯಾಡಿದ್ರು. 1 ಓವರ್​​ ಬೌಲಿಂಗ್​ ಮಾಡಿ ಕೇವಲ 5 ರನ್​ ಬಿಟ್ಟು ಕೊಟ್ಟ ಶೆಫರ್ಡ್​​​ 1 ವಿಕೆಟ್​ ಕೂಡ ಉರುಳಿಸಿದ್ರು.

ಒಟ್ಟಿನಲ್ಲಿ ಕ್ವಾಲಿಫೈಯರ್​​​ ಫೈಟ್​​ನಲ್ಲಿ ಆರ್​​ಸಿಬಿ ಬೌಲರ್​​ಗಳಂತೂ ಬೆಂಕಿ ಪರ್ಫಾಮೆನ್ಸ್​ ನೀಡಿದ್ರು. ಫೈರಿ ಪರ್ಫಾಮೆನ್ಸ್​ ಇದೀಗ ಫೈನಲ್​ ಟಿಕೆಟ್​ ಸಿಗುವಂತೆ ಮಾಡಿದೆ. 18 ವರ್ಷಗಳ ಸುದೀರ್ಘ ಕನಸು ನನಸಾಗಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಆ ಪಂದ್ಯದಲ್ಲೂ ಆರ್​​ಸಿಬಿ ಬೌಲರ್ಸ್​​ ಪವರ್​ಫುಲ್​ ಪರ್ಫಾಮೆನ್ಸ್​ ನೀಡಿದ್ರೆ ಡೌಟೇ ಬೇಡ ಕಪ್​ ನಮ್ದೇ!

ಇದನ್ನೂ ಓದಿ: ಪಂಜಾಬ್​ಗೆ ನೀರು ಕುಡಿಸಿದ ಸಾಲ್ಟ್.. ಪವರ್​ ಪ್ಲೇನಲ್ಲೇ ಪವರ್​ ಕಟ್ ಆಗಿದ್ದು ಹೇಗೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment