ಆರ್​ಸಿಬಿಗೆ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್.. ಇನ್ನೂ ಎಷ್ಟು ಪಂದ್ಯ ಬಾಕಿ ಇದೆ..?

author-image
Ganesh
Updated On
ಆರ್​ಸಿಬಿಗೆ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್.. ಇನ್ನೂ ಎಷ್ಟು ಪಂದ್ಯ ಬಾಕಿ ಇದೆ..?
Advertisment
  • ಫಸ್ಟ್ ಹಾಫ್ ಆಯ್ತು, ಸೆಕೆಂಡ್ ಹಾಫ್ ಗೆದ್ದರಷ್ಟೇ ಪ್ಲೇ-ಆಫ್
  • 7 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದುಕೊಂಡಿರುವ ಆರ್​ಸಿಬಿ
  • ಪಾಯಿಂಟ್​​ ಪಟ್ಟಿಯಲ್ಲೂ ಆರ್​ಸಿಬಿಗೆ ದೊಡ್ಡ ಆಘಾತ

ಐಪಿಎಲ್​ನ ಫಸ್ಟ್​ ಹಾಫ್​​ನಲ್ಲಿ 7 ಪಂದ್ಯಗಳ ಪೈಕಿ ಆರ್​ಸಿಬಿ 4 ರಲ್ಲಿ ಗೆದ್ದು ಬೀಗಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಮುಖಭಂಗ ಆಗಿದೆ.

ಐಪಿಎಲ್​ನಲ್ಲಿ ಫಸ್ಟ್ ಹಾಫ್ ಮುಗಿಸಿರುವ ಆರ್​ಸಿಬಿ ಸೆಕೆಂಡ್ ಹಾಫ್​ನಲ್ಲಿ ಮತ್ತಷ್ಟು ಅಗ್ರೆಸ್ಸಿವ್ ಆಟವಾಡಬೇಕಿದೆ. ಉಳಿದ 7 ಪಂದ್ಯಗಳ ಪೈಕಿ 5 ಗೆದ್ದರಷ್ಟೇ ಆರ್​ಸಿಬಿ ಸೇಫ್​. ಇಲ್ಲದಿದ್ದರೆ ಪ್ಲೇಆಫ್​ ಹಾದಿ ನಿಜಕ್ಕೂ ಹಗ್ಗದ ಮೇಲಿನ ನಡಿಗೆಯೇ.

ಇದನ್ನೂ ಓದಿ: ಇಂದು RCB vs PBKS ಪಂದ್ಯ.. ಈ ಹೈವೋಲ್ಟೇಜ್​ ಮ್ಯಾಚ್​ ಎಷ್ಟು ಗಂಟೆಗೆ, ಎಲ್ಲಿ ನಡೆಯುತ್ತೆ?

publive-image

ಹೀಗಾಗಿ ಮುಂದೆ ನಡೆಯುವ ಎಲ್ಲಾ ಪಂದ್ಯಗಳನ್ನು ಗೆಲುವು ಪಡೆಯುವಲ್ಲಿ ಪ್ಲಾನ್ ರೂಪಿಸಬೇಕಿದೆ. ಅದರಂತೆ ಇಂದು ಪಂಜಾಬ್ ಕಿಂಗ್ಸ್​ ಎದುರಿಸಲಿದೆ. ಚಿನ್ನಸ್ವಾಮಿಯಲ್ಲಿ ಆರ್​ಸಿಬಿಯನ್ನು ಪಂಜಾಬ್ ಮಣಿಸಿತ್ತು. ಇಂದು ಚೆಂಡಿಗಡದಲ್ಲಿ ಪಂದ್ಯ ನಡೆಯುತ್ತಿದೆ.

ಇಷ್ಟು ದಿನ ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ 3 ಒಳಗೆ ಇರುತ್ತಿದ್ದ, ಆರ್​ಸಿಬಿ ದಿಢೀರ್ ಕುಸಿತ ಕಂಡಿದೆ. ಅದಕ್ಕೆ ಕಾರಣ ಮೂರು ಪಂದ್ಯಗಳಲ್ಲಿ ಆಗಿರುವ ಸೋಲು. ಅಂಕಪಟ್ಟಿಯಲ್ಲಿ ಆರ್​ಸಿಬಿ ಐದನೇ ಸ್ಥಾನಕ್ಕೆ ಕುಸಿದಿದ್ದು, ಪ್ಲೆ-ಆಫ್ ದೃಷ್ಟಿಯಿಂದ ಇದು ಆಘಾತಕಾರಿ ವಿಚಾರವಾಗಿದೆ.

ಇದನ್ನೂ ಓದಿ: ಚಂಡೀಗಡಕ್ಕೆ ದಂಡೆತ್ತಿ ಹೋದ RCB; ಇವತ್ತು ಇಬ್ಬರು ಸ್ಟಾರ್​​ ಸಿಡಿದೆದ್ರೆ ಗೆಲುವು ನಮ್ಮದೇ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment