Advertisment

RCB vs PBKS ನಡುವಿನ ಜಿದ್ದಾಜಿದ್ದಿ ಹೇಗಿದೆ.. ಹೆಚ್ಚು ಬಾರಿ ಮ್ಯಾಚ್​ ಗೆದ್ದವರು ಯಾರು?

author-image
Bheemappa
Updated On
RCB vs PBKS ನಡುವಿನ ಜಿದ್ದಾಜಿದ್ದಿ ಹೇಗಿದೆ.. ಹೆಚ್ಚು ಬಾರಿ ಮ್ಯಾಚ್​ ಗೆದ್ದವರು ಯಾರು?
Advertisment
  • ಈ ಮೊದಲು ಪಂಜಾಬ್ ವಿರುದ್ಧ ಆರ್​ಸಿಬಿ ಎಷ್ಟು ಪಂದ್ಯ ಗೆದ್ದಿದೆ?
  • ಆರ್​ಸಿಬಿಗೆ ಇಬ್ಬರು ಮಾಜಿ ಆಟಗಾರರೇ ವಿರೋಧಿಗಳು ಆಗುತ್ತಾರೆ
  • ತವರಿನಲ್ಲಿ ಗೆಲುವೊಂದೇ ಎದುರು ನೋಡುತ್ತಿರುವ ಆರ್​ಸಿಬಿ ತಂಡ

ಅತಿ ಕೆಡಿಮೆ ರನ್​ಗೆ ಕೆಕೆಆರ್ ತಂಡವನ್ನು ಸೋಲಿಸಿದ ಖುಷಿಯಲ್ಲಿರುವ ಪಂಜಾಬ್ ತಂಡ ಗೆಲುವು ನಮ್ಮದೇ ಎಂದು ಕಣಕ್ಕೆ ಇಳಿಯುತ್ತಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನ ಪಿಚ್ ಆಗಿದ್ದರಿಂದ ಕೊಂಚ ಭಯದಲ್ಲೇ ಚಿನ್ನಸ್ವಾಮಿ ಪಿಚ್​ಗೆ ಎಂಟ್ರಿಕೊಡುತ್ತಿದೆ. ಎರಡು ಪಂದ್ಯಗಳನ್ನು ತವರಿನಲ್ಲಿ ಸೋತ ಹಣೆಪಟ್ಟಿ ಕಟ್ಟಿಕೊಂಡ ಆರ್​ಸಿಬಿ ಸಿಹಿ ಸುದ್ದಿ ನೀಡಬೇಕಿದೆ. ಈ ಎಲ್ಲದರ ನಡುವೆ ಪಂಜಾಬ್ ಹಾಗೂ ಬೆಂಗಳೂರು ನಡುವಿನ ಈ ಹಿಂದಿನ ಫೈಟ್​ ಹೇಗಿದೆ ಎಂದರೆ..

Advertisment

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಗೆಲುವಿನ ಅಕೌಂಟ್ ಓಪನ್ ಮಾಡಬೇಕಿದೆ. ಎರಡು ಪಂದ್ಯಗಳ ಕಹಿ ಇಂದಿನ ಪಂದ್ಯದಲ್ಲಿ ಸಿಹಿ ಆಗಿ ಪರಿವರ್ತನೆ ಆಗಬೇಕಿದೆ. ಅಭಿಮಾನಿಗಳು ಕೂಡ ಇದನ್ನೇ ಎದುರು ನೋಡುತ್ತಿದ್ದಾರೆ. ಕ್ಯಾಪ್ಟನ್​ ರಜತ್ ಪಾಟಿದಾರ್ ಕಳೆದ 2 ಪಂದ್ಯಗಳಲ್ಲಿ ಚಿನ್ನಸ್ವಾಮಿಯಲ್ಲಿ ಟಾಸ್​ ಸೋತಿರುವುದು ತಂಡಕ್ಕೆ ಮೊದಲ ಸೋಲು ಎನ್ನಬಹುದು.

ಇದನ್ನೂ ಓದಿ: ತವರಲ್ಲಿ ಕನ್ನಡಿಗನಿಗೆ ಬಿಗ್ ಶಾಕ್ ಕೊಡುತ್ತಾ RCB.. ಮನೋಜ್​ಗೆ ಸಿಗುತ್ತಾ ಅವಕಾಶ?

publive-image

ಇನ್ನು ಪಂಜಾಬ್ ಹಾಗೂ ಬೆಂಗಳೂರಿನ ನಡುವಿನ ಪೈಪೋಟಿ ಬಗ್ಗೆ ಮಾಹಿತಿ ಈ ಮುಂದಿನಂತೆ ಇದೆ. ಈ ವರೆಗೆ ಆರ್​ಸಿಬಿ ಮತ್ತು ಪಂಜಾಬ್ ಒಟ್ಟು 33 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಆರ್​ಸಿಬಿ 16 ಪಂದ್ಯಗಳಲ್ಲಿ ಗೆಲುವು ಪಡೆದಿದ್ರೆ ಪಂಜಾಬ್ ತಂಡ 17 ಬಾರಿ ವಿಜಯ ಪತಾಕೆ ಹಾರಿಸಿದೆ. ಆದರೆ 2024 ಸೇರಿದಂತೆ ಕಳೆದ ಮೂರು ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೇ ಪಂಜಾಬ್ ವಿರುದ್ಧ ಆರ್​ಸಿಬಿಯೇ ಗೆಲುವು ಪಡೆದಿದೆ.

Advertisment

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಆಟಗಾರರು ಅಂದುಕೊಂಡಷ್ಟು ಸುಲಭವಾಗಿ ಪಂದ್ಯ ಇರುವುದಿಲ್ಲ. ಏಕೆಂದರೆ ಎದುರಾಳಿ ಪಂಜಾಬ್ ಕೂಡ ಬಲಿಷ್ಠ ಆಟಗಾರರನ್ನು ಹೊಂದಿದೆ. ಇದರಲ್ಲಿ ಆರ್​ಸಿಬಿ ತಂಡದಲ್ಲಿ ಈ ಮೊದಲು ಆಡಿದ್ದ ಮ್ಯಾಕ್ಸ್​ವೆಲ್ ಹಾಗೂ ಯಜುವೇಂದ್ರ ಚಹಲ್ ಇದ್ದಾರೆ. ಈ ಇಬ್ಬರ ಮಾರಕ ಸ್ಪಿನ್​ ಬೌಲಿಂಗ್​ ಆರ್​ಸಿಬಿ ಗೆಲುವಿಗೆ ಅಡ್ಡಿಯಾಗುವ ಸಂಭವ ಇದೆ. ಜೊತೆಗೆ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಅವರ ಗೇಮ್ ಪ್ಲಾನ್​ ಹಾಗೂ ಬ್ಯಾಟಿಂಗ್​​ಗೆ ಕಡಿವಾಣ ಹಾಕಿ, ಆರ್​ಸಿಬಿ ಗೆಲುವಿನ ಕಡೆಗೆ ಹೋಗಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment