/newsfirstlive-kannada/media/post_attachments/wp-content/uploads/2025/04/RCB-RR-Jaipur-match-today.jpg)
ಇವತ್ತು ಐಪಿಎಲ್ ಪ್ರಿಯರಿಗೆ ಡಬಲ್ ಧಮಾಕಾ. ಅದರಲ್ಲೂ RCB ಫ್ಯಾನ್ಸ್‌ಗೆ ಮತ್ತೊಂದು ಸೂಪರ್ ಸಂಡೇ ಪಂದ್ಯ ಭರ್ಜರಿ ಮನರಂಜನೆಗೆ ಕಾದಿದೆ.
ಚಿನ್ನಸ್ವಾಮಿಯಲ್ಲೇ ಸತತ 2 ಪಂದ್ಯಗಳನ್ನ ಸೋತು ಮುಖಭಂಗ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಇದೀಗ ಪಿಂಕ್ ಸಿಟಿ ಜೈಪುರದಲ್ಲಿ ಘರ್ಜಿಸೋಕೆ ಸಿದ್ಧವಾಗಿದೆ. ಇಂದು ಮಧ್ಯಾಹ್ನ 3.30ಕ್ಕೆ RR ವಿರುದ್ಧ RCB ಪಂದ್ಯ ಆರಂಭವಾಗಲಿದೆ.
ಕಳೆದ ಪಂದ್ಯದ ಸೋಲನ್ನ ಮರೆಯಲು ಸಜ್ಜಾಗಿರೋ ಆರ್ಸಿಬಿ, ಇಂದು ರಾಜಸ್ಥಾನ್ ರಾಯಲ್ಸ್ ತಂಡವನ್ನ ಅವರದ್ದೇ ನೆಲದಲ್ಲಿ ಮಣಿಸಿ, ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಲು ಹೊರಟಿದೆ.
ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ನ ಯುವ ಪಡೆ, ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಇಂದು ಬೆಂಗಳೂರು ತಂಡವನ್ನ ಮಣಿಸಲು ಪ್ರತ್ಯೇಕ ಪ್ಲಾನ್ ಮೂಲಕ ಕಣಕ್ಕಿಳಿಯಲು ಸಜ್ಜಾಗಿದೆ.
ಇದನ್ನೂ ಓದಿ: 246 ರನ್ಗಳ ಬಿಗ್ ಟಾರ್ಗೆಟ್ ಚೇಸ್ ಮಾಡಿದ SRH.. IPL ಇತಿಹಾಸದಲ್ಲೇ ಹೊಸ ದಾಖಲೆ
ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನ!
ಐಪಿಎಲ್ 18ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿದೆ. 8 ಅಂಕದೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದ್ರೆ, ಗುಜರಾತ್ ಟೈಟಾನ್ಸ್ 2ನೇ ಸ್ಥಾನ ಕಾಯ್ದುಕೊಂಡಿದೆ. ಲಕ್ನೋ ಹಾಗೂ ಕೊಲ್ಕತ್ತಾ 3 ಮತ್ತು 4ನೇ ಸ್ಥಾನದಲ್ಲಿದ್ರೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ 5ನೇ ಸ್ಥಾನವನ್ನು ತಲುಪಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಹಾಗೂ ಚೆನ್ನೈ ತಂಡಗಳು ಸೋಲಿನ ಸುಳಿಯಲ್ಲಿ ಸಿಲುಕಿದ್ದು, ಕೊನೆಯ 9 ಹಾಗೂ 10ನೇ ಸ್ಥಾನಕ್ಕೆ ಕುಸಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ