newsfirstkannada.com

ಪವರ್​ ಪ್ಲೇನಲ್ಲಿ RCBಗೆ ಬೇಕಿದೆ ಪವರ್ ಫುಲ್ ಆಟ.. ಈ ಸ್ಟಾರ್​ ಪ್ಲೇಯರ್​​ನಿಂದ ಮಾತ್ರ ಅದು ಸಾಧ್ಯ!

Share :

Published May 22, 2024 at 9:56am

    ಈ ಬಿಗ್​ ಗೇಮ್​ನಲ್ಲಿ ಈ ಆಟನಗಾರನ ಆಟ ಆರ್​ಸಿಬಿಗೆ ವರದಾನ

    ಹಳಿ ತಪ್ಪಿದ ರಾಜಸ್ಥಾನ ರಾಯಲ್ಸ್​ಗೆ ಗೆಲುವಿನ ಕನವರಿಕೆ ಕಾಡುತ್ತಿದೆ

    ಎಲಿಮಿನೇಟರ್ ಮ್ಯಾಚ್ ಗೆಲ್ಲಲೇಬೇಕಾದ ಒತ್ತಡದಲ್ಲಿ RCB, RR

ಇಂದು ಐಪಿಎಲ್ ಅಖಾಡದಲ್ಲಿ ನಡೆಯುತ್ತಿರೋದು ರಾಯಲ್ಸ್​ ಫೈಟ್. ಇಬ್ಬರ ಗುರಿಯೂ ಗೆಲುವೊಂದೇ. ಆದ್ರೆ, ಈ ಗೆಲುವಿನ ಹಾದಿಯೇ ಕಷ್ಟ. ಸೀಸನ್​ನ ಮೊದಲ ಪಂದ್ಯದಿಂದ ಇದೀಗ ಎಲಿಮಿನೇಟರ್​ ಪಂದ್ಯಕ್ಕೆ ಸಜ್ಜಾಗಿರುವ ಇವರಿಬ್ಬರ ಕಥೆಯೇ ಡಿಫ್ರೆಂಟ್ ಆಗಿದೆ. ಇಂದಿನ ಎಲಿಮಿನೇಟರ್​ ಕಾದಾಟದಲ್ಲಿ ಇವರಿಬ್ಬರಲ್ಲಿ ಯಾರು ಎಲಿಮಿನೇಟ್​ ಆಗ್ತಾರೆ, ಯಾರು ಕ್ವಾಲಿಫೈ ಆಗ್ತಾರೆ ಅನ್ನೋದೆ ಕುತೂಹಲ.

ಈ ಕಪ್​ ನಮ್ದೇ ಅನ್ನೋಕೆ ಜಸ್ಟ್​ ಮೂರೇ 3 ಹೆಜ್ಜೆಯಷ್ಟೇ ಬಾಕಿ. ಆದ್ರೆ, ಈ ಕಪ್​ ನಮ್ದಾಗಬೇಕು ಅಂದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ರಾಯಲ್ ಆಟವಾಡಬೇಕಿದೆ. ಗೆಲುವಿನ ನಾಗಲೋಟ ಮುಂದುವರಿಸಬೇಕಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿಗೆ ಎದುರಾಗ್ತಿರೋದು ರಾಜಸ್ಥಾನ್ ರಾಯಲ್​​​. ಈ ಸವಾಲನ್ನ ಮೆಟ್ಟಿನಿಲ್ಲಬೇಕಿದೆ.

ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗ್ತಿವೆ. ಈ ಹೈಟೆನ್ಶನ್ ಮ್ಯಾಚ್​ಗೆ ಅಹ್ಮದಾಬಾದ್​ನ ನಮೋ ಸ್ಟೇಡಿಯಂ ಸಜ್ಜಾಗಿದೆ. ಇಂದಿನ ಕದನದಲ್ಲಿ ಗೆದ್ದು ಕ್ವಾಲಿಫೈಯರ್-2ಗೆ ಅರ್ಹತೆ ಗಿಟ್ಟಿಸುವ ಲೆಕ್ಕಚಾರ ಉಭಯ ತಂಡಗಳದ್ದಾಗಿದೆ.

ಎಲಿಮಿನೇಟರ್​ ಹಣಾಹಣಿಯಲ್ಲಿ RCB ಫೇವರಿಟ್​..!

ಇಂದಿನ ಎಲಿಮಿನೇಟರ್ ಮ್ಯಾಚ್​ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಆರ್​ಸಿಬಿ ಹಾಗೂ ರಾಜಸ್ಥಾನ್ ಸಿಲುಕಿವೆ. ಈ ಡು ಆರ್ ಡೈ ಕದನಲ್ಲಿ ಆರ್​ಸಿಬಿ ಹಾಟ್ ಫೇವರಿಟ್ ಆಗಿ ಕಣಕ್ಕಿಳಿಯುತ್ತಿದೆ. ಸತತ 6 ಗೆಲುವುಗಳೊಂದಿಗೆ ಪ್ಲೇ-ಆಫ್​ಗೆ ಪ್ರವೇಶಿಸಿರುವ ಆರ್​ಸಿಬಿ, ನಮೋ ಸ್ಟೇಡಿಯಂನಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಆದ್ರೆ, ಕಳೆದ 5 ಪಂದ್ಯಗಳಿಂದ ಗೆಲುವನ್ನೇ ಕಾಣದ ರಾಜಸ್ಥಾನ್​​​​​​​​ ರಾಯಲ್ಸ್​ ತಂಡದಲ್ಲಿ ಆತ್ಮವಿಶ್ವಾಸ ಕೊರತೆಯಿದೆ. ಬಲಾಬಲದ ಲೆಕ್ಕಾಚಾರದಲ್ಲೂ ಆರ್​ಸಿಬಿ ಒಂದೆಜ್ಜೆ ಮುಂದಿದೆ.

ಆರ್​ಸಿಬಿ ಸ್ಟ್ರೆಂಥ್​

ಆರ್​ಸಿಬಿಯ ಪರ ವಿರಾಟ್ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಫಾಫ್ ಜೊತೆ ಉತ್ತಮ ಅಡಿಪಾಯ ಹಾಕಿಕೊಡ್ತಿರುವ ಇವರು, ಆರ್​ಸಿಬಿ ಸಕ್ಸಸ್​ನ ಮೊದಲ ಮೆಟ್ಟಿಲಾಗಿದ್ದಾರೆ. ರಜತ್ ಸ್ಥಿರ ಪ್ರದರ್ಶನ ನೀಡ್ತಿದ್ರೆ, ಗ್ರೀನ್ ಹಾಗೂ ಮ್ಯಾಕ್ಸಿಯ ಆಲ್​ರೌಂಡರ್ ಆಟ ತಂಡಕ್ಕೆ ಬೋನಸ್ ಸಿಕ್ಕಿದೆ. ಡಿಕೆ ಫಿನಿಷರ್ ರೋಲ್​ ಜೊತೆ ಸಿರಾಜ್, ಪರ್ಗುಸನ್, ಯಶ್ ದಯಾಳ್ ಅದ್ಭುತ ದಾಳಿ ಸಂಘಟಿಸುತ್ತಿದ್ದಾರೆ. ಇದಲ್ಲಕಿಂತ ಮಿಗಿಲಾಗಿ ಸಂಘಟಿತ ಆಟದ ಜೊತೆ ಅದ್ಭುತ ಫೀಲ್ಡಿಂಗ್ ತಂಡಕ್ಕೆ ಬಲ ಹೆಚ್ಚಿಸಿದೆ.

ನೋಡೋಕೆ ಆರ್​​ಸಿಬಿ ಆರ್​ಆರ್​​ಗಿಂತ ಹೆಚ್ಚು ಬಲಿಷ್ಠವಾಗೇ ಇದೆ. ಆದ್ರೂ, ಕೆಲ ವೀಕ್​ನೆಸ್​​ಗಳು ಆರ್​​ಸಿಬಿ ಪಾಳೆಯದಲ್ಲಿವೆ.

ಆರ್​ಸಿಬಿ ವೀಕ್ನೆಸ್

ನಾಯಕ ಫಾಫ್ ಅಸ್ಥಿರ ಪ್ರದರ್ಶನ ತಲೆ ನೋವಾಗಿದೆ. ಜೊತೆಗೆ ಇಡೀ ತಂಡ ಟಾಪ್​-3 ಮೇಲೆಯೇ ಅವಲಂಬಿತವಾಗಿದೆ. ಇದರ ಜೊತೆ ಮಿಡಲ್ ಆರ್ಡರ್​ನ ಹೆಚ್ಚು ನಂಬಿಕೊಳ್ಳುವಂತಿಲ್ಲ. ಕ್ರೂಶಿಯಲ್ ಟೈಮ್​ನಲ್ಲಿ ಬೌಲರ್​ಗಳು ಕೈಕೊಡುವ ಭೀತಿ ಇದ್ದೇ ಇದೆ. ಇನ್ನು ಗೆಲುವಿನ ಅತಿಯಾದ ಆತ್ಮವಿಶ್ವಾಸವೂ ಮುಳುವಾಗುವ ಟೆನ್ಶನ್ ಇದ್ದೇ ಇದೆ.

ಆರ್​​ಸಿಬಿಯಂತೆ ಎದುರಾಳಿ ರಾಜಸ್ಥಾನ್​ ರಾಯಲ್ಸ್​ ತಂಡದಲ್ಲೂ ಸ್ಟ್ರೆಂಥ್​ & ವೀಕ್​ನೆಸ್​ ಇದ್ದೇ ಇದೆ. ಆ ಪ್ಲಸ್​ -ಮೈನಸ್​ ಅಂಶಗಳನ್ನ ನೋಡೋದಾದ್ರೆ.,

ಆರ್​​​ಆರ್​ ಸ್ಟ್ರೆಂಥ್ & ವಿಕ್ನೇಸ್

ರಾಜಸ್ಥಾನ್ ರಾಯಲ್ಸ್​ ಪರ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಧ್ರವ್ ಜುರೇಲ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಇದರ ಜೊತೆ ಸಂಜು ನಾಯಕತ್ವದ ಜೊತೆಗೆ ಸಂಗಕ್ಕಾರ ಮಾರ್ಗದರ್ಶನ ತಂಡಕ್ಕಿದೆ. ವೆಸ್ಟ್ ಇಂಡೀಸ್​ನ ಶಿಮ್ರಾನ್ ಹೇಟ್ಮೆಯರ್, ರೋವ್​ಮನ್​​ ಪೋವೆಲ್ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ಶಕ್ತಿಯಾಗಿದೆ. ಅನುಭವಿ ಟ್ರೆಂಟ್ ಬೋಲ್ಟ್​, ಸಂದೀಪ್ ಶರ್ಮಾ, ಚಹಲ್​​, ಅಶ್ವಿನ್​ರಂಥ ಚಾಣಕ್ಷ ಬೌಲಿಂಗ್ ಪಡೆ ಇದೆ. ಇದೆಲ್ಲ ಸ್ಟ್ರೆಂಥ್​ ಆದ್ರೆ, ಆರಂಭಿಕ ಯಶಸ್ವಿ ಜೈಸ್ವಾಲ್ ಅಸ್ಥಿರ ಪ್ರದರ್ಶನ, ಜೋಸ್ ಬಟ್ಲರ್ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗಿದೆ. ಸತತ ಸೋಲುಗಳಿಂದ ಕಂಗ್ಗೆಟ್ಟಿರುವ ಆರ್​ಆರ್​, ಹೈ ಪ್ರೆಶರ್ ಗೇಮ್​ನಲ್ಲಿ ಪರ್ಫಾಮ್ ಮಾಡುತ್ತಾ ಅನ್ನೋ ಪ್ರಶ್ನೆ ಇದ್ದೇ ಇದೆ.

ಐಪಿಎಲ್​ನಲ್ಲಿ ಆರ್​ಆರ್​, ಆರ್​ಸಿಬಿ ಕಥೆ ವಿಭಿನ್ನ

ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ಆರ್‌ಆರ್​​ ತಂಡಗಳ ಕಥೆ.. ನಿಜಕ್ಕೂ ತದ್ವಿರುದ್ಧ. ಮೊದಲ 9 ಪಂದ್ಯಗಳಲ್ಲಿ ರಾಜಸ್ಥಾನ​, ಬರೋಬ್ಬರಿ 8 ಪಂದ್ಯಗಳಲ್ಲಿ ಗೆದ್ದು, ಒಂದರಲ್ಲಿ ಮಾತ್ರ ಸೋತಿತ್ತು. ಅಷ್ಟು ಸಾಲಿಡ್​ ಫಾರ್ಮ್ನಲ್ಲಿದ್ದ ರಾಜಸ್ಥಾನ್​, ವಿಚಿತ್ರ ಎಂಬಂತೆ ಮೇ ತಿಂಗಳದಲ್ಲಿ ಒಂದು ಪಂದ್ಯ ಗೆದ್ದಿಲ್ಲ. ಆಡಿದ 5 ಪಂದ್ಯಗಳ ಪೈಕಿ 4ರಲ್ಲಿ ಸೋಲುಂಡಿದ್ದು, ಕೊನೆಯ ಪಂದ್ಯ ಮಳೆಗೆ ಬಲಿಯಾಯ್ತು.

ಆರ್​ಸಿಬಿ ಕಥೆ ಉಲ್ಟಾ​.. ಮೊದಲ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಜಯಿಸಿದ್ದ ಆರ್​​ಸಿಬಿ, ನಂತರ ಫಿನಿಕ್ಸ್​ನಂತೆ ಮೇಲೇಳ್ತು. ಅತ್ತ ಆರ್​ಆರ್​ ಗೆದ್ದಾಗ ಸೋತಿದ್ದ ಆರ್​ಸಿಬಿ, ಆರ್​ಆರ್​ ಸೋಲಿನ ಸುಳಿಯಲ್ಲಿ ಸಿಕ್ಕಾಗ ಗೆದ್ದು ಬೀಗಿತ್ತು. ಇಂಟ್ರೆಸ್ಟಿಂಗ್ ಅಂದ್ರೆ, ಮೇ ತಿಂಗಳಲ್ಲಿ ಸೋಲಿಲ್ಲದ ಸರದಾರನಾಗಿ ಆರ್​​ಸಿಬಿ ಮುನ್ನುಗ್ಗಿದ್ರೆ, ಆರ್​ಆರ್​ ಗೆಲುವನ್ನೇ ಕಾಣದಂತಾಗಿದೆ. ಹೀಗಾಗಿ ನಂಬರ್ ಗೇಮ್​ ಆಟದಲ್ಲಿ ಆರ್​ಸಿಬಿ ಗೆದ್ದೇ ಗೆಲ್ಲುತ್ತೆ ಅನ್ನೋದು ಫ್ಯಾನ್ಸ್​ ಲೆಕ್ಕಚಾರ.

37 ಸಿಕ್ಸರ್​ಗಳ ಪೈಕಿ 20 ಸಿಕ್ಸರ್​​​ಗಳು ಪವರ್ ಪ್ಲೇನಲ್ಲಿ ಬಂದಿವೆ

ಪ್ರಸಕ್ತ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಆಟವೇ ಆರ್​ಸಿಬಿಗೆ ವರವಾಗಿದೆ. ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವಾಡ್ತಿರುವ ಕೊಹ್ಲಿ, 161.79ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ವಿರಾಟ್​ ಸಿಡಿಸಿರುವ 37 ಸಿಕ್ಸರ್​ಗಳ ಪೈಕಿ 20 ಸಿಕ್ಸರ್​​​ಗಳು ಪವರ್ ಪ್ಲೇನಲ್ಲಿ ಬಂದಿವೆ. ಈ ಅಲ್ಟ್ರಾ ಅಗ್ರೆಸ್ಸಿವ್ ಬ್ಯಾಟಿಂಗ್, ಆರ್​ಸಿಬಿ ಗೆಲುವಿನಲ್ಲಿ ಬಿಗ್ ಇಂಪ್ಯಾಕ್ಟ್​ ಮೂಡಿಸಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ.

ಇಂದಿನ ಎಲಿಮಿನೇಟರ್ ಮ್ಯಾಚ್​ ಬ್ಯಾಟ್ ಆ್ಯಂಡ್ ಬಾಲ್ ನಡುವಿನ ಹೋರಾಟ ಅಂತಾನೇ ಬಿಂಬಿತವಾಗಿದೆ. ನಮೋ ಅಂಗಳದಲ್ಲಿ ಯಾರು ಪ್ರೆಷರ್​ನ ಡೀಲ್ ಮಾಡ್ತಾರೋ ಅವರಿಗೆ ಗೆಲುವಿನ ಹಾರ ಫಿಕ್ಸ್. ಎಲಿಮಿನೇಟ್​ ಯಾರಾಗ್ತಾರೆ, ಕ್ವಾಲಿಫೈಯರ್​ಗೆ ಕ್ವಾಲಿಫೈ ಯಾರಾಗ್ತಾರೆ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪವರ್​ ಪ್ಲೇನಲ್ಲಿ RCBಗೆ ಬೇಕಿದೆ ಪವರ್ ಫುಲ್ ಆಟ.. ಈ ಸ್ಟಾರ್​ ಪ್ಲೇಯರ್​​ನಿಂದ ಮಾತ್ರ ಅದು ಸಾಧ್ಯ!

https://newsfirstlive.com/wp-content/uploads/2024/05/RCB_TEAM-1-1.jpg

Load More