22 ರನ್​ ನೀಡಿದ ಭುವಿ.. ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಹೇಜಲ್​ವುಡ್ ತಿರುವು ಕೊಟ್ಟ ರೋಚಕತೆ ಹೇಗಿತ್ತು..?

author-image
Ganesh
Updated On
22 ರನ್​ ನೀಡಿದ ಭುವಿ.. ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಹೇಜಲ್​ವುಡ್ ತಿರುವು ಕೊಟ್ಟ ರೋಚಕತೆ ಹೇಗಿತ್ತು..?
Advertisment
  • ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಬೀಗಿದ ಆರ್​ಸಿಬಿ
  • ಬೆಂಗಳೂರು ತಂಡಕ್ಕೆ 11 ರನ್​​ಗಳ ರೋಚಕ ಗೆಲುವು
  • 18ನೇ ಓವರ್​ನಲ್ಲಿ ಆರ್​ಸಿಬಿಗೆ ಆಗಿತ್ತು ಆಘಾತ

ರಾಜಸ್ಥಾನ್ ರಾಯಲ್ಸ್​ ವಿರುದ್ಧ ಆರ್​ಸಿಬಿ ಗೆದ್ದುಬೀಗಿದೆ. ಆ ಮೂಲಕ 18ನೇ ಐಪಿಎಲ್​​ನಲ್ಲಿ ಆರ್​ಸಿಬಿ ತವರು ಅಂಗಳದಲ್ಲಿ ಚೊಚ್ಚಲ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ ಐದು ವಿಕೆಟ್ ಕಳೆದುಕೊಂಡು 205 ರನ್​​ ಗಳಿಸಿತ್ತು.

ಈ ಗುರಿಯನ್ನು ಬೆನ್ನು ಹತ್ತಿದ್ದ ರಾಜಸ್ಥಾನ್ ರಾಯಲ್​ ಟಾಪ್ ಆರ್ಡರ್ ಬ್ಯಾಟ್ಸಮನ್​​ಗಳು ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಆದರೆ 12ನೇ ಓವರ್​ ನಂತರ ಆರ್​ಸಿಬಿ ಬೌಲರ್ಸ್​ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇನ್ನೇನು ತಂಡ ಆರ್​ಸಿಬಿ ಪಾಲಾಗುತ್ತೆ ಅನ್ನುವಷ್ಟರಲ್ಲಿ 18ನೇ ಓವರ್ ಎಸೆಯಲು ಬಂದ ಭುವನೇಶ್ವರ್ ಕುಮಾರ್ ಒಟ್ಟು 22 ರನ್​ ನೀಡಿದರು.

ಇದನ್ನೂ ಓದಿ: ಅಂತೂ, ಇಂತೂ ತವರಿನಲ್ಲಿ ಗೆದ್ದ ಆರ್​ಸಿಬಿ; ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ಪಾಟೀದಾರ್..?

publive-image

ಆ ಮೂಲಕ ಗೆಲುವು ಆರ್​​ಸಿಬಿಯಿಂದ ದೂರ ಆಗಿತ್ತು. 18ನೇ ಓವರ್​ನ ಅಂತ್ಯದ ವೇಳೆ ರಾಜಸ್ಥಾನ್ ರಾಯಲ್ಸ್​ಗೆ ಗಲ್ಲಲು 12 ಬಾಲ್​ನಲ್ಲಿ 18 ರನ್​ಗಳ ಅಗತ್ಯ ಇತ್ತು. ಆದರೆ 19ನೇ ಓವರ್​ ಮಾಡಲು ಬಂದ ಜೋಶ್ ಹೇಜಲ್​ವುಡ್, ಪಂದ್ಯಕ್ಕೆ ರೋಚಕ ತಿರುವು ನೀಡಿದರು.

  • ಮೊದಲ ಬಾಲ್: 19ನೇ ಓವರ್​ನ ಮೊದಲ ಬಾಲ್ ಹಾಕಿದ ಹೇಜಲ್​ವುಡ್ ಕೇವಲ ಒಂದು ರನ್ ನೀಡಿದರು. ಶುಭಂ ದುಬೆ ಅವರು ಒಂದು ರನ್​ಗಳಿಸುವಲ್ಲಿ ಯಶಸ್ವಿಯಾದರು.
  • ಎರಡನೇ ಬಾಲ್: ಎರಡನೇ ಬಾಲ್​ ಎದುರಿಸಲು ಕ್ರೀಸ್​ಗೆ ಬಂದ ಧ್ರುವ್ ಜುರೇಲ್​​ಗೆ ರನ್​​ಗಳಿಸಲು ಸಾಧ್ಯವಾಗಲಿಲ್ಲ.
  • ಮೂರನೇ ಬಾಲ್: ಮೂರನೇ ಬಾಲ್​ನಲ್ಲಿ ಧ್ರುವ್ ಜುರೇಲ್, ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಕ್ಯಾಚ್​ ನೀಡಿ ಪೆವಿಲಿಯನ್​ಗೆ ಹೋದರು. ಇಲ್ಲಿ ಅಂಪೈರ್ ಔಟ್ ನೀಡಿರಲಿಲ್ಲ. ಜಿತೇಶ್ ಶರ್ಮಾ ಅವರ ಕೋರಿಕೆ ಮೇರೆಗೆ ಥರ್ಡ್ ಅಂಪೈರ್​ಗೆ ಕೇಳಲಾಯ್ತು. ಪರಿಶೀಲನೆ ಮಾಡಿದ ಥರ್ಡ್​ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.
  • ನಾಲ್ಕನೇ ಬಾಲ್: ಆಗಷ್ಟೇ ಕ್ರೀಸ್​ಗೆ ಬಂದಿದ್ದ ಅರ್ಚರ್​​, ಬಲವಾಗಿ ಹೊಡೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಬಾಲ್ ನೇರವಾಗಿ ಕ್ಯಾಪ್ಟನ್ ರಜತ್ ಪಾಟೀದರ್​ ಕೈಸೇರುತ್ತೆ.
  • ಐದನೇ ಬಾಲ್: ಐದನೇ ಬಾಲ್ ಎದುರಿಸಲು ಬಂದಿದ್ದ ಹಸರಂಗಗೆ ಯಾವುದೇ ರನ್​ಗಳಿಸಲು ಸಾಧ್ಯವಾಗಲಿಲ್ಲ.
  •  6ನೇ ಬಾಲ್​ನಲ್ಲೂ ಹಸರಂಗ ರನ್ ಕದಿಯುವಲ್ಲಿ ವಿಫಲರಾದರು.

ಅಂತಿಮವಾಗಿ ಹೇಜಲ್​ವುಡ್ ಎರಡು ವಿಕೆಟ್ ಪಡೆದು ಕೇವಲ ಒಂದು ರನ್ ನೀಡಿದರು. ಇದರಿಂದ ಕೊನೆಯ ಓವರ್​ನಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಗೆಲ್ಲಲು 17 ರನ್​ಗಳ ಅಗತ್ಯವಿತ್ತು. ಆದರೆ ಆರ್​​ಸಿಬಿಯ ಯಶ್ ದಯಾಳ 17 ರನ್​ಗಳನ್ನು ಡಿಪೆಂಡ್ ಮಾಡಿಕೊಂಡರು. ಮಾತ್ರವಲ್ಲ ಒಂದು ವಿಕೆಟ್​, ಒಂದು ರನೌಟ್ ಕೂಡ ಆರ್​ಸಿಬಿಗೆ ಸಿಕ್ಕಿತು. ಪರಿಣಾಮ ಅಂತಿಮ ಓವರ್​ನಲ್ಲಿ ದಯಾಳ್ ಕೇವಲ ಐದು ರನ್​ ಮಾತ್ರ ನೀಡಿದರು. ಆರ್​ಸಿಬಿ 11 ರನ್​ಗಳಿಂದ ಗೆದ್ದು ಬೀಗಿತು.

ಇದನ್ನೂ ಓದಿ: ಮ್ಯಾಚ್ ಕೈತಪ್ಪಿ ಹೋಗಿತ್ತು.. ಕೊನೇ 2 ಓವರ್​ನಲ್ಲಿ ರೋಚಕ ತಿರುವು.. RCB ಗೆಲ್ಲಿಸಿದ್ದು ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment