/newsfirstlive-kannada/media/post_attachments/wp-content/uploads/2025/04/VIRAT_KOHLI_RCB_COACH.jpg)
ಆರ್ಸಿಬಿ ಮ್ಯಾಚ್ ಅಂದ್ರೆ ಸಾಕು. ಅಲ್ಲಿ ಕಿಂಗ್ ಕೊಹ್ಲಿಯೇ ಸೆಂಟರ್ ಆಫ್ ಅಟ್ರ್ಯಾಕ್ಷನ್. ಕೊಹ್ಲಿ ಈ ಮ್ಯಾಚ್ ಆಡೇ ಆಡ್ತಾರೇ ಎಂಬ ಎಕ್ಸ್ಪೆಕ್ಟೇಷನ್ ಇದ್ದೇ ಇರುತ್ತೆ. ಆದ್ರೆ, ರಾಜಸ್ಥಾನ್ ರಾಯಲ್ಸ್ ಎದುರು ಈ ಎಕ್ಸ್ಪೆಕ್ಟೇಷನ್ ಉಳಿಸಿಕೊಳ್ಳುವುದು ಕೊಹ್ಲಿಗೆ ನಿಜಕ್ಕೂ ಬಿಗ್ ಚಾಲೆಂಜ್.
ರಾಯಲ್ಸ್ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ಈ ಬಿಗ್ ಬ್ಯಾಟಲ್ಗೆ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ಸಜ್ಜಾಗಿದೆ. ಗೆಲುವೊಂದೇ ಗುರಿಯಾಗಿಸಿಕೊಂಡಿರುವ ಉಭಯ ತಂಡಗಳು, ಟೊಂಕ ಕಟ್ಟಿ ನಿಂತಿವೆ. ಆದ್ರೆ, ಇವತ್ತಿನ ಗೆಲುವು, ಸೋಲಿನ ಲೆಕ್ಕಾಚಾರದ ನಡುವೆ ವಿರಾಟ್ ಕೊಹ್ಲಿ ವರ್ಸಸ್ ರಾಜಸ್ಥಾನ್ ರಾಯಲ್ಸ್ ನಡುವಿನ ಕಾಳಗವೇ ಸೆಂಟರ್ ಆಫ್ ಅಟ್ರ್ಯಾಕ್ಷನ್.
ಕಿಂಗ್ ಕೊಹ್ಲಿಗೆ ರಾಯಲ್ಸ್ ಚಾಲೆಂಜ್..!
ಜೈಪುರದಲ್ಲಿ ನಡೆಯುತ್ತಾ ವಿರಾಟ ದರ್ಶನ..?
ಡೆಲ್ಲಿ ಕ್ಯಾಪಿಟಲ್ಸ್ ಎದುರು ವೈಫಲ್ಯ ಅನುಭವಿಸಿದ್ದ ವಿರಾಟ್, ಇವತ್ತಿನ ರಾಜಸ್ಥಾನ್ ರಾಯಲ್ಸ್ ಎದುರು ಹೋರಾಟಕ್ಕೆ ಸನ್ನದ್ದರಾಗಿದ್ದಾರೆ. ಈ ನಿಟ್ಟಿನಲ್ಲಿ ನೆಟ್ಸ್ನಲ್ಲಿ ಕಸರತ್ತನ್ನೂ ನಡೆಸಿರುವ ವಿರಾಟ್, ಜೈಪುರದಲ್ಲಿ ವಿರಾಟ ರೂಪ ತೋರಲು ಹೊಂಚು ಹಾಕಿ ಕುಳಿತಿದ್ದಾರೆ. ಆದ್ರೆ, ರಾಜಸ್ಥಾನ್ ರಾಯಲ್ಸ್ ಎದುರು ವಿರಾಟ್ ಅಬ್ಬರ ನಡೆಯೋದು ನಿಜಕ್ಕೂ ಸುಲಭದ ಮಾತಲ್ಲ.
ರನ್ಸ್ ಒಕೆ.. ಕೊಹ್ಲಿಗೆ ಸ್ಟ್ರೈಕ್ರೇಟ್ನದ್ದೇ ಪ್ರಾಬ್ಲಂ!
ವಿರಾಟ್, ರಾಜಸ್ಥಾನ್ ರಾಯಲ್ಸ್ ಎದುರು ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಬಿಗ್ ಮ್ಯಾಚ್ ಪ್ಲೇಯರ್ ಎನಿಸಿಕೊಂಡಿರುವ ವಿರಾಟ್ಗೆ, ಯಾವುದೇ ಕಂಡೀಷನ್ಸ್ನಲ್ಲಿ ರನ್ ಕೊಳ್ಳೆ ಹೊಡೆಯೋ ಸಾಮರ್ಥ್ಯವೂ ಇದೆ. ಆದ್ರೆ, ರಾಜಸ್ಥಾನ್ ಎದುರು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಬೇಕಾದ್ರೆ, ಕೊಹ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ. ಇದನ್ನು ಸುಖಾಸುಮ್ಮನೇ ಹೇಳ್ತಿಲ್ಲ. ರಾಜಸ್ಥಾನ್ ರಾಯಲ್ಸ್ ಎದುರಿನ ಅಂಕಿಅಂಶಗಳೇ ಹೇಳ್ತಿವೆ.
ರಾಜಸ್ಥಾನ್ ಎದುರು ವಿರಾಟ್ ಕೊಹ್ಲಿ!
ರಾಜಸ್ಥಾನ್ ರಾಯಲ್ಸ್ ಎದುರು 31 ಪಂದ್ಯಗಳನ್ನಾಡಿರುವ ವಿರಾಟ್, 764 ರನ್ ಗಳಿಸಿದ್ದಾರೆ. ಈ ಪೈಕಿ 4 ಅರ್ಧಶತಕ, 1 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, 120.12ರ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಜೈಪುರದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್!
ಜೈಪುರದಲ್ಲಿ ಇದೇ 9 ಪಂದ್ಯಗಳನ್ನಾಡಿರುವ ವಿರಾಟ್, 262 ರನ್ ಗಳಿಸಿದ್ದಾರೆ. ಈ ಪೈಕಿ ಒಂದೇ ಒಂದು ಶತಕ ಸಿಡಿಸಿದ್ದಾರೆ. 113.91ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಆದ್ರೆ, ಕೊಹ್ಲಿಯ ಸ್ಟ್ರೈಕ್ರೇಟ್ನದ್ದೇ ಚಿಂತೆಗೆ ದೂಡಿದೆ.
ರಾಜಸ್ಥಾನ್ ಎದುರು ಒಟ್ಟು 120.12ರ ಸ್ಟ್ರೈಕ್ರೇಟ್ ಹೊಂದಿರುವ ಕೊಹ್ಲಿ, ಜೈಪುರದಲ್ಲಿ 113.91ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಇದು ಆಲ್ಮೋಸ್ಟ್ ಏಕದಿನ ಶೈಲಿಯ ಬ್ಯಾಟಿಂಗ್ ಅನ್ನೇ ಪ್ರತಿಬಿಂಬಿಸ್ತಿದೆ. ಇದು ಸಹಜವಾಗೇ ವಿರಾಟ್, ಆರ್ಆರ್ ಎದುರು ಇವತ್ತು ಅಬ್ಬರಿಸ್ತಾರಾ ಎಂಬ ಪ್ರಶ್ನೆಯ ಹುಟ್ಟಿಗೂ ಕಾರಣವಾಗಿದೆ. ಇನ್ಫ್ಯಾಕ್ಟ್ ಇದಕ್ಕೆ ಮತ್ತೊಂದು ಕಾರಣವೂ ಇದೆ.
ವಿರಾಟ್ಗೆ ಸಂದೀಪ್ ಶರ್ಮಾನೇ ಬಿಗ್ ಥ್ರೆಟ್..!
ಆ ಇಬ್ಬರ ಬ್ಯಾಟಲ್ ಗೆದ್ದರಷ್ಟೇ ಆಗ್ತಾರೆ ವಿನ್ನರ್..!
ಆರಂಭಿಕನಾಗಿ ಬರುವ ವಿರಾಟ್ ಕೊಹ್ಲಿ, ಆರ್ಸಿಬಿಯ ಬಿಗ್ ಮ್ಯಾಚ್ ವಿನ್ನರ್ ಅನ್ನೋದ್ರಲ್ಲಿ ನೋ ಡೌಟ್. ಆದ್ರೆ, ಈ ಮ್ಯಾಚ್ ವಿನ್ನರ್ ಕೊಹ್ಲಿಗೆ ಸಂದೀಪ್ ಶರ್ಮಾ ಎಂಬ ಕಂಟಕವೊಂದು ಆರ್ಆರ್ ತಂಡದಲ್ಲಿ ಕಾದಿದೆ. ಐಪಿಎಲ್ನಲ್ಲಿ ಅತಿ ಹೆಚ್ಚು 7 ಬಾರಿ ಕೊಹ್ಲಿಯನ್ನು ಖೆಡ್ಡಾಗೆ ಸಂದೀಪ್ ಶರ್ಮಾ ಬೀಳಿಸಿದ್ದಾರೆ. ಹೀಗಾಗಿ ಪವರ್ ಪ್ಲೇನಲ್ಲಿ ವಿರಾಟ್, ಸಂದೀಪ್ರ ಸ್ವಿಂಗರ್ಗಳನ್ನು ಸಮರ್ಥವಾಗಿ ಎದುರಿಸಬೇಕಿದೆ.
ಇದನ್ನೂ ಓದಿ: 40 ಬಾಲ್‌ಗೆ 100 ಸಂಭ್ರಮ.. ಅಭಿಷೇಕ್ ಶರ್ಮಾ ಚೀಟಿಯಲ್ಲಿ ಬರೆದಿದ್ದೇನು? ಏನಿದರ ವಿಶೇಷ ಗೊತ್ತಾ?
ಸಂದೀಪ್ ಶರ್ಮಾ ಮಾತ್ರವಲ್ಲ. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಸಹ ವಿರಾಟ್ ಕೊಹ್ಲಿ ಪಾಲಿಗೆ ಬಿಗ್ಗೆಸ್ಟ್ ಥ್ರೆಟ್ ಅನ್ನೋದನ್ನ ಮರೆಯುವಂತಿಲ್ಲ. ಯಾಕಂದ್ರೆ, ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ಮಾಡೋ ಜೋಫ್ರಾರ ಘಾತುಕ ಎಸೆತಗಳಿಗೆ ಎದೆಯೊಡ್ಡಿ ನಿಲ್ಲಬೇಕಿದೆ. ಇಲ್ಲ ವಿರಾಟ್, ವೀರಾವೇಶಕ್ಕೆ ಫುಲ್ ಸ್ಟಾಫ್ ಫಿಕ್ಸ್.
ಪ್ರತಿ ಸ್ಟೇಡಿಯಂನಲ್ಲಿ ರನ್ ಗಳಿಸಿರುವ ಮಾಡ್ರನ್ ಡೇ ಲೆಜೆಂಡ್, ಆರ್ಆರ್ ಎದುರು ಪರದಾಡಿರಬಹುದು. ಆದ್ರೆ, ಕೊಹ್ಲಿ ಎಂಬ ಸಿಡಿಗುಂಡು ಸಿಡಿದ್ರೆ, ಆರ್ಆರ್ ಖಲ್ಲಾಸ್ ಆಗೋದ್ರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ