/newsfirstlive-kannada/media/post_attachments/wp-content/uploads/2025/04/VIRAT_KOHLI_RAJAT.jpg)
ಆರ್ಸಿಬಿಯ ಕಣ್ಣು ಇಂದು ಟಾಪ್-2 ಸ್ಥಾನದ ಮೇಲಿದೆ. ಅತ್ತ ಕಳೆದುಕೊಳ್ಳೋಕೆ ಏನೂ ಇಲ್ಲ ಅಂತಿರೋ ಸನ್ರೈಸರ್ಸ್ ಹೈದ್ರಾಬಾದ್ ಆರ್ಸಿಬಿಗೆ ಮತ್ತೊಮ್ಮೆ ವಿಲನ್ ಆಗೋಕೆ ರೆಡಿಯಾಗಿದೆ. ಈಗಾಗಲೇ ಲಕ್ನೋ ತಂಡದ ಪ್ಲೇ ಆಫ್ ಕನಸನ್ನ ನುಚ್ಚು ನೂರು ಮಾಡಿರೋ ಹೈದ್ರಾಬಾದ್ ಇದೀಗ ಆರ್ಸಿಬಿಯನ್ನೂ ಕಾಡಲು ಸಜ್ಜಾಗಿದೆ. ಈ ಐವರ ಪವರ್ಕಟ್ ಮಾಡದಿದ್ರೆ, ಆರ್ಸಿಬಿಗೆ ಸಂಕಷ್ಟ ತಪ್ಪಿದ್ದಲ್ಲ.
IPL ಸೆಕೆಂಡ್ ಹಾಫ್ನ ಮತ್ತೊಂದು ಮೆಗಾ ಕದನಕ್ಕೆ ಕೌಟ್ಡೌನ್ ಶುರುವಾಗಿದೆ. ಟಾಪ್ 2 ಸ್ಥಾನದ ಮೇಲೆ ಕಣ್ಣಿಟ್ಟಿರೋ ಆರ್ಸಿಬಿ, ಕಳೆದುಕೊಳ್ಳೋಕೆ ಏನೂ ಇಲ್ಲ ಅಂತಿರೋ ಸನ್ರೈಸರ್ಸ್ ಹೈದ್ರಾಬಾದ್ ಲಕ್ನೋದಲ್ಲಿ ಅದೃಷ್ಟ ಪರೀಕ್ಷೆಗೆ ಇಳೀತಿವೆ. ಸಾಲಿಡ್ ಪರ್ಫಾಮೆನ್ಸ್ ನೀಡಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿರೋ ಆರ್ಸಿಬಿ ಏನೋ ಗೆಲ್ಲೋ ಆತ್ಮವಿಶ್ವಾಸದ ಅಲೆಯಲ್ಲಿದೆ. ಆದ್ರೆ, ಈಗಾಗಲೇ ಲಕ್ನೋ ಪ್ಲೇ ಕನಸನ್ನ ನುಚ್ಚು ನೂರು ಮಾಡಿರೋ ಹೈದ್ರಾಬಾದ್, ಟಾಪ್ 2 ಸ್ಥಾನದ ಕನಸು ಕಾಣ್ತಿರೋ ಆರ್ಸಿಬಿಗೆ ಶಾಕ್ ಕೊಡೋ ಲೆಕ್ಕಾಚಾರದಲ್ಲಿದೆ. ಆರ್ಸಿಬಿ ಇಂದು ಗೆದ್ದು ಬೀಗಬೇಕಂದ್ರೆ ಈ ಐವರ ಪವರ್ ಕಟ್ ಮಾಡಲೇಬೇಕಿದೆ.
ಅಭಿಷೇಕ್ ಶರ್ಮಾ ಸೆಟಲ್ ಆದ್ರೆ ‘ರನ್ ಅಭೀಷೇಕ’ ಪಕ್ಕಾ.!
ಅಭಿಷೇಕ್ ಶರ್ಮಾ.. ಈ ಸೀಸನ್ನಲ್ಲಿ ಹೈದ್ರಾಬಾದ್ ತಂಡದ ಟಾಪ್ ರನ್ ಸ್ಕೋರರ್.! ಕಳೆದ 2 ಪಂದ್ಯಗಳಿಂದಂತೂ ವಿಸ್ಪೋಟಕ ಬ್ಯಾಟಿಂಗ್ ನಡೆಸಿರೋ ಅಭಿಷೇಕ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಪವರ್ ಪ್ಲೇನಲ್ಲಿ ಪವರ್ಫುಲ್ ಬ್ಯಾಟಿಂಗ್ ನಡೆಸೋ ಅಭಿಷೇಕ್ ಶರ್ಮಾ ಸೆಟಲ್ ಆದ್ರೆ, ಲಕ್ನೋನ ಬ್ಯಾಟಿಂಗ್ ಟ್ರ್ಯಾಕ್ನಲ್ಲಿ ರನ್ಅಭಿಷೇಕ ಮಾಡಿ ಬಿಡ್ತಾರೆ. ಈ ಯಂಗ್ ಬ್ಯಾಟರ್ಗೆ ಸೆಟಲ್ ಆಗೋಕೆ ಅವಕಾಶವನ್ನೇ ನೀಡ್ಬಾರ್ದು.
ಸಾಮರ್ಥ್ಯ ನಿರೂಪಿಸೋ ಛಲದಲ್ಲಿ ಇಶಾನ್ ಕಿಶನ್.!
11.25 ಕೋಟಿಗೆ ಈ ಸೀಸನ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಸೇರಿದ ಇಶಾನ್ ಕಿಶನ್ ಮೊದಲ ಪಂದ್ಯದಲ್ಲೇ ಸ್ಪೋಟಕ ಶತಕ ಸಿಡಿಸಿದ್ರು. ಆ ಬಳಿಕ ಫುಲ್ ಸೈಲೆಂಟ್ ಆಗಿದ್ದಾರೆ. ಸತತ ವೈಫಲ್ಯ ಕಂಡಿರೋ ಇಶಾನ್ ಕಿಶನ್, ಟೂರ್ನಿ ಅಂತ್ಯಕ್ಕೂ ಮುನ್ನ ತನ್ನ ಸಾಮರ್ಥ್ಯ ನಿರೂಪಿಸೋ ಛಲದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಲಕ್ನೋ ಎದುರು ಡಿಸೆಂಟ್ ಇನ್ನಿಂಗ್ಸ್ ಕಟ್ಟಿ ರಿಧಮ್ ಕಂಡುಕೊಂಡಿರೋ ಕಿಶನ್, ಆರ್ಸಿಬಿಗೆ ಥ್ರೆಟ್ ಆಗೋ ಸಾಧ್ಯತೆಯಿದೆ.
‘ಕಿಲ್ಲರ್ ಕ್ಲಾಸೆನ್’.! ಡೆತ್ ಓವರ್ಗಳಲ್ಲಿ ಡೇಂಜರ್.!
ಕಿಲ್ಲರ್ ಕ್ಲಾಸೆನ್ ಈ ಸೀಸನ್ನಲ್ಲಿ ಇಡೀ ಸೀಸನ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಸಂಕಷ್ಟಕ್ಕೆ ಸಿಲುಕಿದಾಗೆಲ್ಲಾ ಕ್ರಿಸ್ ಕಚ್ಚಿ ನಿಂತಿದ್ದಾರೆ. ಈ ಸೀಸನ್ನಲ್ಲಿ ಕನ್ಸಿಸ್ಟೆಂಟ್ ಆಟವನ್ನಾಡ್ತಿರೋ ಹೆನ್ರಿಚ್ ಕ್ಲಾಸೆನ್ ಡೆತ್ ಓವರ್ಗಳಲ್ಲಿ ಡೇಂಜರಸ್ ಬ್ಯಾಟಿಂಗ್ ನಡೆಸಿದ್ದಾರೆ. ಸೀಸನ್ 18ರಲ್ಲಿ ಅಂತಿಮ ಓವರ್ಗಳಲ್ಲಿ 223.80ರ ರನ್ಕೊಳ್ಳೆ ಹೊಡೆದಿರೋ ಕ್ಲಾಸೆನ್, ಜೋಶ್ ಹೇಜಲ್ವುಡ್ ಇಲ್ಲದ ಬೌಲಿಂಗ್ ವಿಭಾಗಕ್ಕೆ ಸವಾಲಾಗಲಿದ್ದಾರೆ.
ಪವರ್ಫುಲ್ ಪ್ಯಾಟ್ ಕಮಿನ್ಸ್ ಆರಂಭದ ಥ್ರೆಟ್.!
ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಸನ್ರೈಸರ್ಸ್ ಹೈದ್ರಾಬಾದ್ ಪಡೆಯ ಶಕ್ತಿ. ಚಾಣಾಕ್ಷ ನಾಯಕತ್ವ ಒಂದೆಡೆಯಾದ್ರೆ, ಪವರ್ಫುಲ್ ಬೌಲಿಂಗ್ ಇನ್ನೊಂದೆಡೆ. ಹೊಸ ಬಾಲ್ನೊಂದಿಗೆ ದಾಳಿಗಿಳಿಯೋ ಪ್ಯಾಟ್ ಕಮಿನ್ಸ್, ಬ್ಯಾಟ್ಸ್ಮನ್ಗಳಿಗೆ ಟ್ರಬಲ್ ಮಾಡ್ತಾರೆ. ಇಂದಿನ ಪಂದ್ಯದಲ್ಲಿ ಆರ್ಸಿಬಿಯ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿಗೆ ಇರೋ ದೊಡ್ಡ ಸವಾಲೇ ಈ ಕಮಿನ್ಸ್.! ಕಮಿನ್ಸ್ ಎದುರಿನ ಬ್ಯಾಟಲ್ ಗೆದ್ರೆ, ಆರ್ಸಿಬಿಗೆ ಗುಡ್ ಸ್ಟಾರ್ಟ್ ಸಿಕ್ಕಂತೆ, ಅರ್ಧ ಪಂದ್ಯವನ್ನೂ ಗೆದ್ದಂತೆ.!
ಇದನ್ನೂ ಓದಿ:RCB ಬೌಲಿಂಗ್ ಓಕೆ.. ಬ್ಯಾಟಿಂಗ್ನಲ್ಲಿ ಇಂದು ಕ್ಯಾಪ್ಟನ್, ವಿಕೆಟ್ ಕೀಪರ್ ಸಿಡಿದೇಳಬೇಕು!
ಮಿಡಲ್ ಆರ್ಡರ್ ಬ್ಯಾಟಿಂಗ್ಗೆ ಹರ್ಷಲ್ ಸವಾಲು.!
ಈ ಹಿಂದೆ ಆರ್ಸಿಬಿಯಲ್ಲಿದ್ದ ಹರ್ಷಲ್ ಪಟೇಲ್ ಈಗ ಹೈದ್ರಾಬಾದ್ ತಂಡದಲ್ಲಿದ್ದಾರೆ. ಈ ಸೀಸನ್ನಲ್ಲಿ ಹೈದ್ರಾಬಾದ್ನ ಮೋಸ್ಟ್ ಸಕ್ಸಸ್ಪುಲ್ ಬೌಲರ್ ಅನಿಸಿರೋ ಹರ್ಷಲ್ 15 ವಿಕೆಟ್ ಬೇಟೆಯಾಡಿದ್ದಾರೆ. ಸ್ಲೋವರ್ ಕಟ್ಟರ್ ಎಕ್ಸಪರ್ಟ್ ಹರ್ಷಲ್, ಮಿಡಲ್ ಓವರ್ಗಳಲ್ಲಿ ಎದುರಾಳಿ ತಂಡಗಳ ರನ್ಗಳಿಕೆಗೆ ಬ್ರೇಕ್ ಹಾಕೋದ್ರಲ್ಲಿ ನಿಸ್ಸೀಮ. ಇಂದಿನ ಪಂದ್ಯದಲ್ಲೂ ಆರ್ಸಿಬಿ ಮಿಡಲ್ ಆರ್ಡರ್ ಬ್ಯಾಟಿಂಗ್ಗೆ ಹರ್ಷಲ್ ಸವಾಲಾಗಲಿದ್ದಾರೆ.
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರೋ ಸನ್ರೈಸರ್ಸ್ ಹೈದ್ರಾಬಾದ್ ಸದ್ಯ ಫುಲ್ ಕೇರ್ ಫ್ರೀ. ಗೆದ್ರೂ ಅಷ್ಟೇ.. ಸೋತ್ರೂ ಅಷ್ಟೇ.. ಕಳೆದುಕೊಳ್ಳೋಕೆ ಏನೂ ಇಲ್ಲ. ಮೊದಲೇ ಫಿಯರ್ಲೆಸ್ & ಅಗ್ರೆಸ್ಸಿವ್ ಬ್ರ್ಯಾಂಡ್ ಆಫ್ ಕ್ರಿಕೆಟ್ಗೆ ಹೆಸರುವಾಸಿಯಾಗಿರೋ ಸನ್ರೈಸರ್ಸ್ ಹೈದ್ರಾಬಾದ್ ಆರ್ಸಿಬಿಗೆ ಇಂದು ಥ್ರೆಟ್ ಆಗೋ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರ್ಸಿಬಿ ಎಚ್ಚರಿಕೆಯ ಆಟವಾಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ