ನಾಳೆ ಆರ್​ಸಿಬಿ ಪಂದ್ಯ.. ಬಲಿಷ್ಠ ಪ್ಲೇಯಿಂಗ್-11ನಲ್ಲಿ ಯಾರೆಲ್ಲ ಆಡ್ತಾರೆ..?

author-image
Ganesh
Updated On
ನಾಳೆ ಆರ್​ಸಿಬಿಗೆ ಬಿಗ್​ ಡೇ.. ಲುಂಗಿ, ಬೆಥೆಲ್ ಇಲ್ಲ, ಬಲಿಷ್ಠ ತಂಡದಲ್ಲಿ ಯಾರೆಲ್ಲ ಇರಬಹುದು..?
Advertisment
  • ನಾಳೆ ಹೈದರಾಬಾದ್ ವಿರುದ್ಧ ಆರ್​ಸಿಬಿ ಮ್ಯಾಚ್
  • ಲಕ್ನೋದ ಎಕನಾ ಮೈದಾನದಲ್ಲಿ ನಡೆಯಲಿದೆ
  • ನಾಳಿನ ಪಂದ್ಯ ಆರ್​​ಸಿಬಿಗೆ ತುಂಬಾನೇ ಮುಖ್ಯವಾಗಿದೆ

ಐಪಿಎಲ್​​ನ ಲೀಗ್ ಹಂತದಲ್ಲಿ ಅಂತಿಮಘಟ್ಟ ತಲುಪಿರುವ ಆರ್​ಸಿಬಿ ನಾಳೆ ಲಕ್ನೋದಲ್ಲಿ ಸನ್ ರೈಸರ್ಸ್​ ಹೈದರಾಬಾದ್ ವಿರುದ್ಧ ಆಡಲಿದೆ. ಪಾಯಿಂಟ್​​ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಪಾಡಿಕೊಳ್ಳಲು ಆರ್​ಸಿಬಿಗೆ ನಾಳಿನ ಪಂದ್ಯ ತುಂಬಾನೇ ಮುಖ್ಯವಾಗಿದೆ.

ಇದನ್ನೂ ಓದಿ: ‘ಸರ್ಪ್ರೈಸ್ ಕೊಡ್ತೀನಿ ಕಣ್ಣು ಮುಚ್ಚಿಕೋ ಅಂದ, ಆಮೇಲೆ ನೋಡಿದ್ರೆ..’ ನಟ ಮನು ಬಗ್ಗೆ ಸಂತ್ರಸ್ತೆ ಮತ್ತಷ್ಟು ಆರೋಪ

ಈಗಾಗಲೇ 12 ಪಂದ್ಯಗಳನ್ನು ಆಡಿರುವ ಆರ್​ಸಿಬಿ 8 ಮ್ಯಾಚ್​ನಲ್ಲಿ ಗೆದ್ದು, 17 ಅಂಕದೊಂದಿಗೆ ಪಾಯಿಂಟ್ಸ್​ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್​ಸಿಬಿ ಮುಂದೆ ನಾಳೆ ನಡೆಯುವ ಪಂದ್ಯ ಸೇರಿ ಒಟ್ಟು ಎರಡು ಲೀಗ್ ಹಂತದ ಪಂದ್ಯಗಳಿವೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ, ಆರ್​ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಅಲಂಕರಿಸಲಿದೆ. ಹೀಗಾಗಿ ನಾಳೆ ನಡೆಯಲಿರುವ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ಇದನ್ನೂ ಓದಿ: ಕೈಕೊಟ್ಟ ಜಕೊಬ್ ಬೆಥಲ್.. ಆರ್​ಸಿಬಿಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್​ ಎಂಟ್ರಿ..!

ಆದರೆ ಆರ್​​ಸಿಬಿ ತನ್ನ ಪ್ಲೇಯಿಂಗ್​-11ನಲ್ಲಿ ಯಾರನ್ನೆಲ್ಲ ಆಡಿಸಲಿದೆ ಅಂತಾ ಕುತೂಹಲ ಮೂಡಿಸಿದೆ. ಸಂಭಾವ್ಯ ಆಟಗಾರರ ಯಾರು ಅಂತಾ ನೋಡೋದಾದರೆ, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್ (ಕ್ಯಾಪ್ಟನ್), ಜಿತೇಶ್ ಶರ್ಮಾ, ಟಿಮ್ ಡೆವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಲುಂಗಿ ಎನ್​ಗಿಡಿ ಆಡುವ ಸಾಧ್ಯತೆ ಇದೆ.

ಸನ್​ ರೈಸರ್ಸ್ ಹೈದರಾಬಾದ್ ಬಗ್ಗೆ ಮಾತನ್ನಾಡೋದಾದರೆ, ಈಗಾಲೇ ಟೂರ್ನಿಯಿಂದ ಹೊರಬಿದ್ದಿದೆ. ಆಡಿರುವ 12 ಪಂದ್ಯಗಳಲ್ಲಿ 4 ಮ್ಯಾಚ್ ಗೆದ್ದು ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಹೀಗಾಗಿ ಹೈದರಾಬಾದ್ ತಂಡಕ್ಕೆ ನಾಳಿನ ಪಂದ್ಯ ಮಹತ್ವದ್ದಾಗಿಲ್ಲ.

ಇದನ್ನೂ ಓದಿ: ಹವಾಮಾನ ಇಲಾಖೆಯಿಂದ ಮತ್ತೆ ಎಚ್ಚರಿಕೆ.. ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment