/newsfirstlive-kannada/media/post_attachments/wp-content/uploads/2025/04/RCB-8.jpg)
ಕೊಲ್ಕತ್ತಾದಲ್ಲಿ ಕಮಾಲ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಚಿಂದಿ ಉಡಾಯಿಸಿತ್ತು. ಬ್ಯಾಕ್ ಟು ಬ್ಯಾಕ್ ಗೆಲುವಿನೊಂದಿಗೆ ತವರಿಗೆ ಆಗಮಿಸಿದ ರಾಯಲ್ ಚಾಲೆಂಜರ್ಸ್, ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿತ್ತು. ಆರ್ಸಿಬಿ ಲಾಯಲ್ ಫ್ಯಾನ್ಸ್ ಕೂಡ ಗುಜರಾತ್ಗೆ ಗುನ್ನಾ ನೀಡುತ್ತೆ ಅಂತಾನೇ ಭರವಸೆ ಇಟ್ಟಿದ್ದರು. ಆ ಭರವಸೆ ಚಿನ್ನಸ್ವಾಮಿಯಲ್ಲಿ ಹುಸಿಯಾಗಿದೆ. ಆರ್ಸಿಬಿಯ ವೀಕ್ನೆಸ್ ಕೂಡ ಬಟಾಬಯಲಾಗಿದೆ.
ಕೈ ಕೊಟ್ಟ ಟಾಪ್ ಆರ್ಡರ್..
ಮೊದಲ ಎರಡು ಪಂದ್ಯಗಳಲ್ಲಿ ಆರ್ಸಿಬಿಗೆ ಸಾಲಿಡ್ ಸ್ಟಾರ್ಟ್ ಸಿಕ್ಕಿತ್ತು. ಗುಜರಾತ್ ಎದುರಿನ ಪಂದ್ಯದಲ್ಲಿ ಇದೆಲ್ಲವೂ ಉಲ್ಟಾ ಆಯ್ತು. 2ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ, ದೇವದತ್ತ್ ಪಡಿಕ್ಕಲ್, ಫಿಲ್ ಸಾಲ್ಟ್ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಸೇರಿದ್ರು.
ಆಗ ನಾಯಕ ರಜತ್ ಪಾಟಿದಾರ್, ಸಂಕಷ್ಟದಲ್ಲಿದ್ದ ತಂಡದ ಕೈಹಿಡಿಯಬೇಕಿತ್ತು. ಠುಸ್ ಪಟಾಕಿಯಾಗಿ ಪೆವಿಲಿಯನ್ ಸೇರಿದರು. ನಯಾ ಫಿನಿಷರ್ ಅಂತಾನೇ ಗುರುತಿಸಿಕೊಂಡಿದ್ದ ಜಿತೇಶ್ ಶರ್ಮಾ ಕೆಲ ಕಾಲ ಹೋರಾಡಿದ್ರು. ಬೇಜಾಬ್ದಾರಿಯುತ ಶಾಟ್ ಬಾರಿಸಿ ಔಟಾದ್ರು. ಆ ಸಂದರ್ಭದಲ್ಲಿ ಬಿಗ್ ಹಿಟ್ ಬಾರಿಸೋದಕ್ಕಿಂತ ವಿಕೆಟ್ ಕಾಯ್ದುಕೊಳ್ಳೋದೇ ಮುಖ್ಯವಾಗಿತ್ತು.
ಒಂದೇ ನಾಣ್ಯ.. ಎರಡು ಮುಖ!
ಕಳೆದ 3 ಪಂದ್ಯಗಳಲ್ಲಿ ಇವರಿಬ್ಬರ ಆಟ ಮೂರಕ್ಕೇರಿಲ್ಲ. ಆರಕ್ಕಿಳಿದಿಲ್ಲ. ದೇವದತ್ ಪಡಿಕ್ಕಲ್ ಆಡಿದ ಮೂರೂ ಪಂದ್ಯಗಳಿಂದಲೂ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಂತಿಲ್ಲ. ಜಿತೇಶ್ ಶರ್ಮಾ ಆಟ ಇದಕ್ಕಿಂತ ಹೊರತಾಗಿಲ್ಲ.
ಇದನ್ನೂ ಓದಿ: ಅಬ್ ಕಿ ಬಾರ್ 300 ಎಂದ ತಂಡಕ್ಕೆ ಹ್ಯಾಟ್ರಿಕ್ ಸೋಲು.. IPL ಇತಿಹಾಸದಲ್ಲಿ ಕೆಟ್ಟ ದಾಖಲೆ..!
ಒನ್ ಮ್ಯಾಚ್ ಕಾ ಹೀರೋ ಪಾಂಡ್ಯ
ಆಲ್ರೌಂಡರ್ ಕೃನಾಲ್ ಪಾಂಡ್ಯ ಆಟ ಒಂದು ಪಂದ್ಯಕ್ಕೆ ಸೀಮಿತವಾದಂತಿದೆ. ಕೊಲ್ಕತ್ತಾದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದ ಕೃನಾಲ್, ಕಳೆದ ಎರಡೂ ಪಂದ್ಯಗಳಿಂದ ವಿಕೆಟ್ ಲೆಸ್ ಆಗಿದ್ದಾರೆ. ಬೆಂಗಳೂರಲ್ಲಿ ಬರೋಬ್ಬರಿ 11.30ರ ಏಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. 3 ಪಂದ್ಯಗಳಿಂದ ಬ್ಯಾಟ್ನಿಂದ ಬಂದಿರೋದು ಜಸ್ಟ್ ಐದೇ ಐದು ರನ್ ಮಾತ್ರ. ಈ ಆಟಕ್ಕೆ ತಂಡದಲ್ಲಿ ಹೊಸ ಸಮಸ್ಯೆ ಸೃಷ್ಟಿಸಿದೆ.
ಪವರ್ ಪ್ಲೇನಲ್ಲಿ ಮಾತ್ರ ಬೌಲರ್ಸ್ ಜೋಶ್
ಆರ್ಸಿಬಿ ಬೌಲಿಂಗ್ ಅಟ್ಯಾಕ್. ಈ ಹಿಂದಿಗಿಂತ ಬೆಸ್ಟ್ ಅನ್ನೋದ್ರಲ್ಲಿ ಡೌಟಿಲ್ಲ. ಚಿನ್ನಸ್ವಾಮಿ ಅಂಗಳದಲ್ಲಿ ನ್ಯೂ ಬಾಲ್ನಲ್ಲಿ ಟ್ರಬಲ್ ಮಾಡಿದ ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ ನಂತರ ಜಾದೂ ಮಾಡಲಿಲ್ಲ. ಚಿನ್ನಸ್ವಾಮಿಯ ಸಣ್ಣ ಗ್ರೌಂಡ್ನಲ್ಲಿ ಬೌಂಡರಿ ಸೇವ್ ಮಾಡಬೇಕಿದ್ದ ರಸಿಕ್ ಸಲಾಂ, ಬ್ಯಾಟರ್ಗಳ ಜೋಶ್ ಹೆಚ್ಚಿಸುವಂತೆ ಬೌಲಿಂಗ್ ಮಾಡಿದ್ರು.
ಶಾರ್ಟ್ ಬೌಂಡರಿಯ ಚಿನ್ನಸ್ವಾಮಿಯಲ್ಲಿ ಬೌಲರ್ಗಳ ಪಾತ್ರವೇ ನಿರ್ಣಾಯಕ. ಇದೇ ಪಿಚ್ನಲ್ಲಿ ಗುಜರಾತ್ ಟೈಟನ್ಸ್ ಬೌಲರ್ಗಳು ಟೈಟ್ ಸ್ಪೆಲ್ ಹಾಕಿದ್ರು. ಆರ್ಸಿಬಿ ಬೌಲರ್ಗಳು ಈ ವಿಚಾರದಲ್ಲಿ ಎಡವಿದ್ರು. ಗುಜರಾತ್ ಎದುರಿನ ಸೋಲಿಗೆ ಬೌಲರ್ಗಳನ್ನ ಬ್ಲೇಮ್ ಮಾಡೋಕಾಗಲ್ಲ ನಿಜ. ಈ ಸ್ವಲ್ಪ ಎಫರ್ಟ್ ಹಾಕಬೇಕಿತ್ತು.
ಇದನ್ನೂ ಓದಿ: ಸಿಕ್ಸರ್ ಮೂಲಕವೇ ಡೀಲ್ ಮಾಡಿದ ಅಯ್ಯರ್, ರಿಂಕು ಸಿಂಗ್.. SRH ಪಡೆಯನ್ನು ಖೆಡ್ಡಾಗೆ ಬೀಳಿಸಿದ್ದು ಹೇಗೆ..?
ತಂಡದಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಬೇಕಿತ್ತು. ಸ್ಪಿನ್ನರ್ ಇದ್ದಿದ್ರೆ ಅದರ ಇಂಪ್ಯಾಕ್ಟ್ ಏನಾಗಿರೋದು ಅನ್ನೋದು ಗುಜರಾತ್ ಟೈಟನ್ಸ್ ನೋಡಿದ್ರೆ ಅರ್ಥವಾಗುತ್ತೆ. ಆರ್ಸಿಬಿಗೆ ಮಿಡಲ್ ಓವರ್ಗಳಲ್ಲಿ ಮೂಗುದಾರ ಹಾಕಿದ್ದೆ ಸ್ಪಿನ್ನರ್ ಸಾಯಿ ಕಿಶೋರ್. ಸ್ಪಿನ್ನರ್ ಆಯ್ಕೆ ವಿಚಾರದಲ್ಲೂ ಆರ್ಸಿಬಿ ಎಡವಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ಪಿನ್ನರ್ಗೆ ಮಣೆ ಹಾಕಬೇಕಿತ್ತು.
ನಿಜವಾದ ಚಿನ್ನಸ್ವಾಮಿ ಕಂಟಕ..!
ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೋಮ್ ಫೇವರ್ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಚಿನ್ನಸ್ವಾಮಿಯ ಹೋಮ್ ಗ್ರೌಂಡ್ಗೆ ಹೋಲಿಸಿದ್ರೆ, ಅವೇ ಕಂಡೀಷನ್ಸ್ನಲ್ಲೇ ಆರ್ಸಿಬಿ ಹೆಚ್ಚು ವಿನ್ನಿಂಗ್ ಪರ್ಸೆಟೇಜ್ ಹೊಂದಿದೆ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಈ ಸೀಸನ್ನ WPLನಲ್ಲಿ ಆರ್ಸಿಬಿಯ ವುಮೆನ್ಸ್ ಟೀಮ್, ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ ಗೆದ್ದು ಭಾರೀ ನಿರೀಕ್ಷೆ ಮೂಡಿಸಿತ್ತು. ತವರಿನಂಗಳದಲ್ಲಿ ಕಂಡ ಸತತ ಸೋಲುಗಳು ಪ್ಲೇ ಆಫ್ ರೇಸ್‌ನಿಂದಲೇ ಹೊರ ಬೀಳುವಂತೆ ಮಾಡಿತ್ತು. ಇದೀಗ ಆರ್ಸಿಬಿ ಮೆನ್ಸ್ ತಂಡವೂ ಇದೇ ರೀತಿ ಆರಂಭ ಪಡೆದಿದೆ. ಹೊಸ ಆತಂಕವೂ ಸೃಷ್ಟಿಯಾಗಿದೆ.
ಇದನ್ನೂ ಓದಿ: ಮತ್ತೆ ಸಿಡಿದೇಳಬೇಕಿದೆ ಸಿಡಿಲಬ್ಬರದ ಬ್ಯಾಟರ್.. ಐಪಿಎಲ್ನಲ್ಲಿ ನಿರಂತರ ವಿಫಲತೆ ಕಾಣುತ್ತಿರುವುದೇಕೆ ಹಿಟ್ಮ್ಯಾನ್?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್