ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ
ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡ ತೊರೆಯೋದು ಪಕ್ಕಾ!
ಮುಂಬೈ ತೊರೆದು ಆರ್ಸಿಬಿ ತಂಡ ಸೇರಲಿದ್ದಾರಾ ಜಸ್ಪ್ರೀತ್ ಬುಮ್ರಾ?
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭಾರೀ ತಯಾರಿ ನಡೆಯುತ್ತಿದೆ. ಇದೇ ತಿಂಗಳು ಜುಲೈ 31ನೇ ತಾರೀಕು ಬಿಸಿಸಿಐ ಅಧಿಕಾರಿಗಳು ರೀಟೈನ್ ಪಾಲಿಸಿ ಬಗ್ಗೆ ಚರ್ಚೆ ಮಾಡಲು ಐಪಿಎಲ್ ತಂಡಗಳ ಮಾಲೀಕರೊಂದಿಗೆ ಸಭೆ ನಡೆಸಲಿದೆ. ಈ ಮಧ್ಯೆ ಕ್ಯಾಪ್ಟನ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತೊರೆಯೋದು ಪಕ್ಕಾ ಆಗಿದೆ.
ಇನ್ನು, ಮುಂಬೈ ಇಂಡಿಯನ್ಸ್ ತೊರೆದ ಬಳಿಕ ಬುಮ್ರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಲಿದ್ದಾರಾ? ಅನ್ನೋ ಚರ್ಚೆ ನಡೆಯುತ್ತಿದೆ. ಆರ್ಸಿಬಿ ತಂಡವೂ ಬೌಲಿಂಗ್ನಲ್ಲಿ ಭಾರೀ ವೀಕ್ ಆಗಿದ್ದು, ಬುಮ್ರಾ ಬಂದರೆ ಕಪ್ ಗೆಲ್ಲಲು ಸಹಕಾರಿಯಾಗಲಿದೆ. ಹಾಗಾಗಿ ಮೆಗಾ ಆಕ್ಷನ್ನಲ್ಲಿ ಬುಮ್ರಾಗೆ ಆರ್ಸಿಬಿ ಬಿಡ್ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆಯೇ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದರು. ಆಗ ತನ್ನ ಬದಲಿಗೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದಕ್ಕಾಗಿ ಬುಮ್ರಾ ಅಸಮಾಧಾನ ಹೊರಹಾಕಿದ್ದರು. ಅದರಲ್ಲೂ ಬುಮ್ರಾ ಇನ್ಸ್ಟಾಗ್ರಾಂನಲ್ಲಿ “ಮೌನವು ಕೆಲವೊಮ್ಮೆ ಉತ್ತಮ ಉತ್ತರವಾಗಿದೆ” ಎಂದು ಸ್ಟೋರಿ ಹಾಕಿದ್ದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಮುಂಬೈ ತೊರೆದು ಆರ್ಸಿಬಿಗೆ ಬುಮ್ರಾ..?
ಬುಮ್ರಾ ಮುಂಬೈ ಇಂಡಿಯನ್ಸ್ ತೊರೆಯುವುದು ಪಕ್ಕಾ ಆಗಿದೆ. ಗುಜರಾತ್ ಟೈಟನ್ಸ್ ಬುಮ್ರಾ ಅವರನ್ನು ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ. ಇನ್ನೂ ಕೆಲವರು ಆರ್ಸಿಬಿ ಟ್ರೇಡ್ ಮೂಲಕ ಬುಮ್ರಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದೆ ಹೋದಲ್ಲಿ ಮೆಗಾ ಆಕ್ಷನ್ನಲ್ಲೂ ಖರೀದಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಬಾರಿ ಐಪಿಎಲ್ ಹರಾಜಿಗೆ ಮುನ್ನವೇ ಸಾಕಷ್ಟು ಹೈಡ್ರಾಮ ನಡೆಯಲಿದೆ.
ಇದನ್ನೂ ಓದಿ: VIDEO: ‘ಭಾರತದ ಯುವಕರಿಗೆ ಅದು ಹೇಗೆ ಮಾಡೋದು ಎಂದು ಗೊತ್ತಿಲ್ಲ’- 3 ಕಾರಣ ಬಿಚ್ಚಿಟ್ಟ ಯುವತಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ