/newsfirstlive-kannada/media/post_attachments/wp-content/uploads/2025/05/DHONI_KOHLI-2.jpg)
ಹೈದ್ರಾಬಾದ್ ವಿರುದ್ಧ ಐಪಿಎಲ್ ಪಂದ್ಯ ಸೋತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇದರಿಂದ ಟಾಪ್- 2 ಸ್ಥಾನ ಕಳೆದುಕೊಳ್ಳುವ ಭೀತಿ ಆರ್ಸಿಬಿ ಪಡೆಯಲ್ಲಿ ಇದೆ. ಆದರೆ ಈಗ ಈ ಸ್ಥಾನ ಪಡೆಯಲು ಮತ್ತೊಂದು ಸುವರ್ಣಾವಕಾಶ ಬೆಂಗಳೂರು ತಂಡಕ್ಕೆ ಒದಗಿ ಬಂದಿದೆ. ಇದರಲ್ಲಿ ಯಶಸ್ಸು ಕಾಣುತ್ತಾ ಎಂದು ಕಾದು ನೋಡಬೇಕಿದೆ. ಏಕೆಂದರೆ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಜಯ ಸಾಧಿಸಲೇಬೇಕಿದೆ.
ಆರ್ಸಿಬಿ ಅಭಿಮಾನಿಗಳು ಪಾರ್ಥಿಸಿದಂತೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಪಡೆದಿದೆ. 83 ರನ್ಗಳ ಅಂತರದಿಂದ ಗೆಲುವು ಪಡೆದು ಚೆನ್ನೈ ಈ ಸೀಸನ್ಗೆ ವಿದಾಯ ಹೇಳಿದೆ. ಇದರ ಜೊತೆಗೆ ಲೀಗ್ನಲ್ಲಿ ಗುಜರಾತ್ ಕೂಡ 14 ಪಂದ್ಯಗಳನ್ನು ಮುಗಿಸಿದ್ದು 18 ಅಂಕಗಳನ್ನು ಮಾತ್ರ ಗಳಿಸಲು ಶಕ್ತವಾಗಿದೆ.
ಇದನ್ನೂ ಓದಿ: ಅಂತಿಮ ಪಂದ್ಯದಲ್ಲಿ ಚೆನ್ನೈಗೆ ಜಯ.. ಸೀಸನ್- 18ಕ್ಕೆ ಗೆಲುವಿನೊಂದಿಗೆ ವಿದಾಯ ಹೇಳಿದ ಧೋನಿ ಪಡೆ!
ಸದ್ಯ ಈ ಸೀಸನ್ನಲ್ಲಿ ಆರ್ಸಿಬಿ 13 ಪಂದ್ಯಗಳಿಂದ 17 ಅಂಕಗಳನ್ನು ಗಳಿಸಿದ್ದು ಎಲ್ಎಸ್ಜಿ ವಿರುದ್ಧದ ಇನ್ನೊಂದು ಪಂದ್ಯ ಬಾಕಿ ಇದೆ. ಈ ಪಂದ್ಯದಲ್ಲಿ ಆರ್ಸಿಬಿ ಜಯ ಸಾಧಿಸಿದರೆ ಒಟ್ಟು 19 ಅಂಕಗಳಿಂದ ಟಾಪ್-2 ಅವಕಾಶ ಇದೆ. ಹೀಗಾಗಿ ಲೀಗ್ನ ಕೊನೆ ಪದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಒಂದು ವೇಳೆ ಸೋತರೆ ಐಪಿಎಲ್ನ ಫೈನಲ್ ಪಂದ್ಯಕ್ಕೆ ಹೋರಾಡಬೇಕಾಗುತ್ತದೆ. ಈ ಹೋರಾಟದದಲ್ಲಿ ಒಂದು ಪಂದ್ಯ ಸೋತರೇ ಟ್ರೋಫಿ ಕನಸು ಮತ್ತೆ ಮುಂದಕ್ಕೆ ಹೋಗಲಿದೆ.
ಐಪಿಎಲ್ನ ಪಾಯಿಂಟ್ ಟೇಬಲ್ನಲ್ಲಿ ಗುಜರಾತ್ ಒಟ್ಟು 14 ಪಂದ್ಯಳಿಂದ 18 ಅಂಕಗಳಿಂದ ಟಾಪ್ನಲ್ಲಿದೆ. ಗುಜರಾತ್ನ ಲೀಗ್ ಮ್ಯಾಚ್ಗಳು ಮುಗಿದ ಕಾರಣ 18 ಅಂಕಗಳೇ ಅಂತಿಮವಾಗಲಿವೆ. ಆದರೆ ಆರ್ಸಿಬಿ ಬಳಿ 17 ಅಂಕಗಳಿಸಿದ್ದು ಇನ್ನೊಂದು ಪಂದ್ಯ ಗೆದ್ದರೇ 19 ಅಂಕದಿಂದ ಟೇಬಲ್ನಲ್ಲಿ ಟಾಪರ್ ಆಗಲಿದೆ. ಫೈನಲ್ ಸುಲಭವಾಗಲಿದೆ. ಇನ್ನು ಪಂಜಾಬ್ ಕಿಂಗ್ಸ್ಗೂ ಒಂದು ಪಂದ್ಯ ಬಾಕಿ ಇದ್ದರೂ ರನ್ ರೇಟ್ ಇಲ್ಲಿ ಗಣನೆಗೆ ಬರುತ್ತದೆ. ಹಾಗಾದರೆ ಆರ್ಸಿಬಿ ಎಲ್ಲ ಅದೃಷ್ಟವೂ ಕೊನೆ ಪಂದ್ಯದ ಮೇಲೆ ನಿಂತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ