newsfirstkannada.com

ಮಳೆ ಬಂದ್ರೂ ಪ್ಲೇ ಆಫ್​ಗೆ ಹೋಗಲಿದೆ ಆರ್​​ಸಿಬಿ.. ಫ್ಯಾನ್ಸ್​​ ಓದಲೇಬೇಕಾದ ಸ್ಟೋರಿ!

Share :

Published May 15, 2024 at 5:58pm

    ಮೇ 18ಕ್ಕೆ ಆರ್​​​ಸಿಬಿ, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ರೋಚಕ ಪಂದ್ಯ

    ಮಳೆ ಬಂದ್ರೂ ಆರ್​​ಸಿಬಿಗೆ ಇದ್ಯಾ ಪ್ಲೇ ಆಫ್​ಗೆ ಹೋಗಲು ಅವಕಾಶ?​​

    ಆರ್​​ಸಿಬಿ ತಂಡದ ಫ್ಯಾನ್ಸ್​ ಓದಲೇಬೇಕಾದ ಪ್ರಮುಖ ಸ್ಟೋರಿ ಇದು!

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭರ್ಜರಿ ಮಳೆಯಾಗುತ್ತಿದೆ. ನಿನ್ನೆ ಇಡೀ ರಾತ್ರಿ ಮಳೆ ಸುರಿದಿದ್ದು, ಈ ವಾರ ಪೂರ್ತಿ ವರುಣನ ಆರ್ಭಟ ಜೋರಾಗಿ ಇರಲಿದೆ. ಈ ಮಧ್ಯೆ ಆರ್​​ಸಿಬಿ, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಡುವೆ ನಡೆಯಲಿರೋ ರೋಚಕ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿ ಎಂದು ವರದಿಯಾಗಿದೆ.

ಪ್ಲೇ ಆಫ್​ಗೆ ಹೋಗಲು ಚೆನ್ನೈ ವಿರುದ್ಧ ಆರ್​​ಸಿಬಿ ಗೆಲ್ಲಲೇಬೇಕಿದೆ. ಚೆನ್ನೈ ತಂಡಕ್ಕೂ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಈ ಪಂದ್ಯ ಹೇಗಾದ್ರೂ ಗೆಲ್ಲಲೇಬೇಕು ಎಂದು ಆರ್​​ಸಿಬಿ ಎಲ್ಲಾ ರೀತಿ ತಯಾರಿ ನಡೆಸಿಕೊಂಡಿದೆ. ತನ್ನ ತವರು ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲೇ ಚೆನ್ನೈ ವಿರುದ್ಧ ರಣಕಹಳೆ ಮೊಳಗಿಸಲು ಮುಂದಾಗಿದೆ.

ಇನ್ನು, ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಆರ್​​ಸಿಬಿ ಪ್ಲೇ ಆಫ್​ ಕನಸು ನುಚ್ಚುನೂರಾಗಲಿದೆ. ಮಳೆಯಿಂದ ಪಂದ್ಯ ರದ್ದಾದ್ರೆ ಆರ್​​ಸಿಬಿಗೆ 1 ಅಂಕ ಸಿಗಲಿದ್ದು, ಇದರಿಂದ ಯಾವುದೇ ಉಪಯೋಗ ಇಲ್ಲ. ಬದಲಿಗೆ ಮಳೆ ನಿಂತರೆ ಎಂದಿನಂತೆ 7:30ಕ್ಕೆ ಪಂದ್ಯ ಆರಂಭವಾಗುತ್ತದೆ. ಒಂದು ವೇಳೆ ಆಗದಿದ್ದರೆ ಪಂದ್ಯದ ಕಟ್‌‌ಆಫ್‌ ಸಮಯ 11:50ರ ವರೆಗೆ ಪಂದ್ಯ ಆಯೋಜಿಸಲು ಸಾಧ್ಯವೇ ಎಂದು ನೋಡುತ್ತಾರೆ. ಒಂದು ವೇಳೆ ಸರಿಯಾದ ಸಮಯದೊಳಗೆ 20 ಓವರ್‌ ಮುಗಿಸಲು ಸಾಧ್ಯವಾಗುವುದಿಲ್ಲ ಎಂದು ಅನಿಸಿದರೆ ಓವರ್‌ ಕಡಿಮೆ ಮಾಡಲಾಗುತ್ತದೆ. ಮಳೆ ಬಂದರೆ DLS ನಿಯಮ, ಜಾರಿಗೆ ಬರುತ್ತದೆ. ಇದರ ಪ್ರಕಾರ ಓವರ್‌ ಕಡಿತದ ಜೊತೆಗೆ ಟಾರ್ಗೆಟ್‌‌ ಸಹ ನೀಡಲಾಗುತ್ತದೆ. ಹೀಗಾದ್ರೂ ಆರ್​​ಸಿಬಿ ಒಟ್ಟು ಗೆಲ್ಲಲೇಬೇಕು. ಆಗ ಮಾತ್ರ ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿಗೆ ಅವಕಾಶ. ಒಂದು ವೇಳೆ ಚೆನ್ನೈಗಿಂತಲೂ ಬೆಂಗಳೂರು ರನ್​ ರೇಟ್​ ಕಡಿಮೆ ಇದ್ರೂ ಹೈದರಾಬಾದ್​ 2ಕ್ಕೆ 2 ಪಂದ್ಯ ಸೋತರೆ ಆರ್​​ಸಿಬಿ ಸುಲಭವಾಗಿ ಪ್ಲೇ ಆಫ್​ಗೆ ಹೋಗಲಿದೆ.

ಇದನ್ನೂ ಓದಿ: ‘ಆರ್​​​ಸಿಬಿ ಸತತ 5 ಪಂದ್ಯ ಗೆಲ್ಲಲು ಈತನೇ ಕಾರಣ’- ಕ್ಯಾಪ್ಟನ್​​ ಫಾಫ್​​ ಡುಪ್ಲೆಸಿಸ್ ಬಿಚ್ಚಿಟ್ಟ ಸತ್ಯ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮಳೆ ಬಂದ್ರೂ ಪ್ಲೇ ಆಫ್​ಗೆ ಹೋಗಲಿದೆ ಆರ್​​ಸಿಬಿ.. ಫ್ಯಾನ್ಸ್​​ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/05/RCB-vs-CSK.jpg

Load More