newsfirstkannada.com

ಮುಂದಿನ 4 ಪಂದ್ಯ ಗೆದ್ರೆ ಆರ್​​​ಸಿಬಿ ಪ್ಲೇ ಆಫ್​ಗೆ ಹೋಗೋದು ಪಕ್ಕಾ! ಹೇಗೆ ಗೊತ್ತಾ? ಸ್ಟೋರಿ ಓದಿ!

Share :

Published April 28, 2024 at 10:31pm

    ಆರ್​​ಸಿಬಿ ತಂಡಕ್ಕೆ ಗುಜರಾತ್​ ಟೈಟನ್ಸ್​ ತಂಡ ಬರೋಬ್ಬರಿ 201 ರನ್​ ಟಾರ್ಗೆಟ್​

    ಕೇವಲ 16 ಓವರ್​ಗಳಲ್ಲಿ 206 ರನ್​ ಗಳಿಸಿ ಗೆದ್ದು ಬೀಗಿದ ರಾಯಲ್​ ಚಾಲೆಂಜರ್ಸ್​​

    ಮುಂದಿನ 4 ಪಂದ್ಯ ಗೆದ್ರೆ ಆರ್​​ಸಿಬಿ ಟೀಮ್​​​ ಪ್ಲೇ ಆಫ್​ಗೆ ಹೋಗುವುದು ಪಕ್ಕಾ..!

ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್​ ಟೈಟನ್ಸ್​ ವಿರುದ್ಧ ಗೆದ್ದು ಬೀಗಿದೆ. ಜತೆಗೆ ಮುಂದಿನ 4 ಪಂದ್ಯಗಳು ಹೇಗಾದ್ರೂ ಮಾಡಿ ​​ಗೆಲ್ಲಲೇಬೇಕು ಎಂದು ಆರ್​​ಸಿಬಿ ಮುಂದಾಗಿದೆ. ಅದರಲ್ಲೂ ಸುಮಾರು ಭಾರೀ ರನ್​ಗಳಿಂದ ಗೆದ್ದು ರನ್​ ರೇಟ್​ ಹೆಚ್ಚಿಸಿಕೊಂಡರೆ ಪ್ಲೇ ಆಫ್​ಗೆ ಹೋಗೋ ಅವಕಾಶ ಇನ್ನೂ ಇದೆ.

ಪ್ರತಿ ಪಂದ್ಯದಲ್ಲೂ ಆರ್​​ಸಿಬಿ ಟಾಸ್​ ಗೆಲ್ಲಬೇಕು. ಮಿನಿಮಮ್​​​ 220-250 ರನ್​ ಟಾರ್ಗೆಟ್​ ಕೊಡಬೇಕು. ಎಲ್ಲಾ ಪಂದ್ಯಗಳೂ ಕನಿಷ್ಠ 50-100 ರನ್​ಗಳಿಂದ ಗೆಲ್ಲಬೇಕು. ಭಾರೀ ವಿಕೆಟ್​​ ಮತ್ತು ರನ್​ಗಳಿಂದ ಗೆದ್ದರೆ ಆರ್​​​ಸಿಬಿಗೆ ಪ್ಲೇ ಆಫ್​ಗೆ ಹೋಗುವ ಅವಕಾಶ ಇದೆ ಎಂದು ಹೇಳಲಾಗುತ್ತಿದೆ.

ಬ್ಯಾಕ್​ ಟು ಬ್ಯಾಕ್​ 7 ಪಂದ್ಯ ಸೋತಿರೋ ಆರ್​​​ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ತಾನು ಆಡಿರೋ 10 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕ ಪಡೆದುಕೊಂಡಿದೆ. ತಂಡದ ರನ್​ ರೇಟ್​ ಕೂಡ ಸುಧಾರಿಸಿದೆ.

ಈಗಾಗಲೇ ಅರ್ಧ ಸೀಸನ್​ ಮುಗಿದಿದೆ. ಆರ್​​ಸಿಬಿ ಇನ್ನೂ 4 ಪಂದ್ಯಗಳು ಆಡಲಿದ್ದು. 4ಕ್ಕೆ 4 ಗೆಲ್ಲಬೇಕಿದೆ. ಆಗ ಆರ್​​ಸಿಬಿಗೆ ಮತ್ತೆ 8 ಅಂಕ ದೊರೆಯಲಿದ್ದು, ಟೋಟಲ್​​ 14 ಪಾಯಿಂಟ್ಸ್​ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್​​ ಕನ್ಫರ್ಮ್​​. 14 ಅಂಕ ಪಡೆದ್ರೂ ಪ್ಲೇ ಆಫ್​ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್​ ಆಗಿರಲಿದೆ.

ಇದನ್ನೂ ಓದಿ: ಕೊನೇ 10 ಬಾಲ್​​ನಲ್ಲಿ 50 ರನ್​ ಚಚ್ಚಿದ ವಿಲ್​ ಜಾಕ್ಸ್​​.. ತನ್ನ ಅಬ್ಬರದ ಶತಕದ ಬಗ್ಗೆ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ 4 ಪಂದ್ಯ ಗೆದ್ರೆ ಆರ್​​​ಸಿಬಿ ಪ್ಲೇ ಆಫ್​ಗೆ ಹೋಗೋದು ಪಕ್ಕಾ! ಹೇಗೆ ಗೊತ್ತಾ? ಸ್ಟೋರಿ ಓದಿ!

https://newsfirstlive.com/wp-content/uploads/2024/04/RCB_VS-SRH-1.jpg

Load More