/newsfirstlive-kannada/media/post_attachments/wp-content/uploads/2025/06/RCB_US.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ವಿರುದ್ಧ ಜಯಭೇರಿ ಬಾರಿಸುತ್ತಿದ್ದಂತೆ ಕರ್ನಾಟಕ ಸೇರಿದಂತೆ ವಿಶ್ವದೆಲ್ಲೆಡೆ ಸೆಲೆಬ್ರೆಷನಲ್ ಮಾಡಲಾಗಿದೆ. ಸುದೀರ್ಘ ಕಾಲದ ಕನಸೊಂದಕ್ಕೆ ರಜತ್ ನೇತೃತ್ವದ ತಂಡ ಬಿಗ್ ಬ್ರೇಕ್ ಹಾಕಿದೆ. ಆರ್ಸಿಬಿಗೆ ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ಎಲ್ಲಿಯೇ ಹೋದರೂ ಫ್ಯಾನ್ಸ್ ಇದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ತಂಡ ಗೆಲ್ಲುತ್ತಿದ್ದಂತೆ ಅಮೆರಿಕದಲ್ಲೂ ಕನ್ನಡಿಗರು ಸಂಭ್ರಮ ಪಟ್ಟಿದ್ದಾರೆ.
ಅಮೆರಿಕದ ಸಿಯಾಟಲ್‌ನಲ್ಲೂ ಕನ್ನಡಿಗರು ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯನ್ನ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಕಪ್ ತನ್ನದಾಗಿಸಿಕೊಂಡಿದ್ದು, ತನ್ನ 18 ವರ್ಷಗಳ ಕನಸನ್ನು ಕೊನೆಗೂ ನನಸು ಮಾಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಸಿಯಾಟಲ್ ನಗರದಲ್ಲಿ ಇರುಂತಹ ಎಲ್ಲ ಕನ್ನಡಿಗರು ಉತ್ಸಾಹದಿಂದ ಒಂದೆಡೆ ಸೇರಿ ಸೆಲೆಬ್ರೆಷನ್ ಮಾಡಿದ್ದಾರೆ.
ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯ ಸಾಧಿಸಿದರೂ ದೂರದ ಅಮೆರಿಕದ ಸಿಯಾಟಲ್ನಲ್ಲಿರುವ ಕನ್ನಡಿಗರು ಮಾವಳ್ಳಿ ಟಿಫೀನ್ ಸೆಂಟರ್ನಲ್ಲಿ ಒಟ್ಟಿಗೆ ಸೇರಿ ಚಿಯರ್ ಅಪ್ ಮಾಡಿದ್ದಾರೆ. ಜೊತೆಗೆ ಘೋಷಣೆ ಕೂಡ ಕೂಗಿದ್ದಾರೆ. ಈ ಸಲ ಕಪ್ ನಮ್ದು.. ಮುಂದಿನ ಸಲ ಕಪ್ ಕೂಡ ನಮ್ದೇ ಎಂದು ಕೂಗಿದ್ದಾರೆ. ಆರ್‌ಸಿಬಿ ಜೆರ್ಸಿ ಧರಿಸಿಕೊಂಡು ಸಾಲಾಗಿ ಕುಳಿತಿರುವ ಕನ್ನಡಿಗರು ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಎಂದು ಹೇಳಿ ಬಳಿಕ ಮಸಾಲೆ ದೋಸೆಯನ್ನು ಸಂತಸದಿಂದ ಸವಿದಿದ್ದಾರೆ.
ಇದನ್ನೂ ಓದಿ:ಟ್ರೋಫಿ ಮೇಲಿದ್ದನ್ನ ಓಪನ್ ಮಾಡಿದ ಕಿಂಗ್ ಕೊಹ್ಲಿ.. ಒಳಗೆ ನೋಡಿ ಸಾಲ್ಟ್, ವಿರಾಟ್ ಫುಲ್ ನಗು! -Video
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ಟೀಮ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಸ್ವೀಕರಿಸಿದ್ದ ಎದುರಾಳಿ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 184 ರನ್‌ಗಳನ್ನು ಮಾತ್ರ ಗಳಿಸಿತು. ಇದರಿಂದ ಕೇವಲ 6 ರನ್ಗಳಿಂದ ಟ್ರೋಫಿಯಿಂದ ವಂಚಿತ ಆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ