/newsfirstlive-kannada/media/post_attachments/wp-content/uploads/2025/03/RAJAT-2.jpg)
ಆರ್ಸಿಬಿ ವಿರುದ್ಧ ಸಿಎಸ್ಕೆ 50 ರನ್ಗಳ ಹೀನಾಯ ಸೋಲನ್ನು ಕಂಡಿದೆ. ಗೆಲುವಿನ ದೊಡ್ಡ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಭಾರೀ ಬೇಸರ ಆಗಿದೆ. ಸೋಲಿನ ನೋವಿನಲ್ಲೂ ಧೋನಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಪಂದ್ಯ ಮುಗಿದ ಬೆನ್ನಲ್ಲೇ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್.. ನಾವು ನೀಡಿದ ಟಾರ್ಗೆಟ್ ಉತ್ತಮವಾಗಿತ್ತು. ಇಲ್ಲಿ ಬಾಲ್ ತುಂಬಾ ನಿಧಾನವಾಗಿ ಬರುತ್ತಿತ್ತು, ಇದರಿಂದ ಬ್ಯಾಟರ್ಗಳು ರನ್ ಗಳಿಸೋದು ಸುಲಭ ಇರಲಿಲ್ಲ. ಚೆಪಾಕ್ (Chepauk)ನಲ್ಲಿ ಚೆನ್ನೈ ವಿರುದ್ಧ ಆಡೋದು ಯಾವಾಗಲು ವಿಶೇಷವಾಗಿರುತ್ತದೆ. ಯಾಕೆಂದರೆ ಇಲ್ಲಿನ ಅಭಿಮಾನಿಗಳು.
ಕೇವಲ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲ, ಅವರವರ ಹೋಮ್ಗ್ರೌಂಡ್ನಲ್ಲಿ ಆಡೋದು ತುಂಬಾನೇ ವಿಶೇಷವಾಗಿರುತ್ತೆ. ನಮ್ಮ ಟಾರ್ಗೆಟ್ ಸುಮಾರು 200 ರನ್ಗಳಾಗಿತ್ತು. ಅಷ್ಟು ರನ್ ಚೇಸ್ ಮಾಡೋದು ಸುಲಭ ಇಲ್ಲವೆಂದು ನಮಗೆ ಗೊತ್ತಿತ್ತು. ಅದಕ್ಕೆ ಪ್ರತಿಬಾಲ್ಗೂ ಹೊಡೆಯಬೇಕು ಅನ್ನೋದು ನನ್ನ ಗುರಿಯಾಗಿತ್ತು.
ಇದನ್ನೂ ಓದಿ: CSK ಅಭಿಮಾನಿಗಳ ಹೃದಯವನ್ನೂ ಗೆದ್ದ RCB ಕ್ಯಾಪ್ಟನ್; ‘ನೀವು ಇಷ್ಟವಾದ್ರಿ’ ಅಂತಾ ಬಹುಪರಾಕ್..! ವಿಡಿಯೋ
ನಾವು ಬ್ಯಾಟಿಂಗ್ ಲೈನ್ಅಪ್ನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಕಳೆದ ಬಾರಿಯ ಪಂದ್ಯದಲ್ಲಿದ್ದ ಲೈನ್ಅಪ್ ಅನ್ನೇ ಮುಂದುವರಿಸಿದೇವು. ಟ್ರ್ಯಾಕ್, ಸ್ಪಿನ್ನರ್ಗಳಿಗೆ ಸ್ನೇಹಿಯಾಗಿತ್ತು. ಅದಕ್ಕೆ ನಾವು ಸ್ಪಿನ್ನರ್ಗಳನ್ನು ಬೇಗ ತರೋದಕ್ಕೆ ನಿರ್ಧರಿಸಿದೇವು. ಲಿಯಾಮ್ ಲಿವಿಂಗ್ಸ್ಟೋನ್ ಅದ್ಭುತವಾಗಿ ಬೌಲಂಗ್ ಮಾಡಿದರು. ಅದೊಂದು ಗೇಮ್ ಚೆಂಜಿಂಗ್ ಮೂಮೆಂಟ್. ಹೇಜಲ್ವುಡ್ ಅವರ ಮೊದಲ ಓವರ್ನಲ್ಲಿ ಗೇಮ್ ಚೆಂಜಿಂಗ್ ಪ್ರದರ್ಶನ ನೀಡಿದರು. ಇನ್ನಿಂಗ್ಸ್ನ ಪವರ್ಪ್ಲೇನ್ನಲ್ಲಿ 2 ರಿಂದ ಮೂರು ವಿಕೆಟ್ ಪಡೆದುಕೊಂಡಿದ್ದೇವೆ ಎಂದು ಭಾವಿಸುತ್ತೇನೆ. ಇದು ನಿಜಕ್ಕೂ ಅದ್ಭುತ ಎಂದರು. ಆ ಮೂಲಕ ಬೌಲರ್ಗಳಿಗೆ ಪಾಟೀದಾರ್ ಗೆಲುವಿನ ಕ್ರೆಡಿಟ್ ನೀಡಿದರು.
ಇದನ್ನೂ ಓದಿ: CSK ಸೋಲಿಸಿದ್ದು ಆಯ್ತು.. ಆರ್ಸಿಬಿ ಮುಂದಿನ ಟಾರ್ಗೆಟ್ ಯಾರು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್