RCB ಗೆಲುವಿನ ಹಿಂದಿನ ಹೀರೋಗಳು ಯಾರು..? ಕಿಂಗ್​ ಕೊಹ್ಲಿ, ಫಿಲ್ ಸಾಲ್ಟ್​ ಅಲ್ಲವೇ ಅಲ್ಲ!

author-image
Bheemappa
Updated On
RCB ಗೆಲುವಿನ ಹಿಂದಿನ ಹೀರೋಗಳು ಯಾರು..? ಕಿಂಗ್​ ಕೊಹ್ಲಿ, ಫಿಲ್ ಸಾಲ್ಟ್​ ಅಲ್ಲವೇ ಅಲ್ಲ!
Advertisment
  • 10 ಪಂದ್ಯಗಳಿಂದ 13 ವಿಕೆಟ್ ಉರುಳಿಸಿರುವ ಆಲ್​ರೌಂಡರ್
  • ಬ್ಯಾಟರ್​ಗಳ ಗೇಮ್​ನಲ್ಲಿ ಬೌಲರ್​ಗಳಿಗೆ ಕ್ರೆಡಿಟ್ ಇದೆಯಾ?
  • RCB ಡಾರ್ಕ್ ಹಾರ್ಸ್ ಎಂದು ಕೊಹ್ಲಿ ಯಾರನ್ನ ಕರೆದಿದ್ದಾರೆ?

ರಾಯಲ್​​​​​ ಚಾಲೆಂಜರ್ಸ್ ಬೆಂಗಳೂರು ತಂಡ ಸೀಸನ್​​-18ರಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿದೆ. ರೆಡ್ ಆರ್ಮಿಯ ನಾಗಾಲೋಟ ಲಾಯಲ್​​ ಫ್ಯಾನ್ಸ್ ಕಾಲರ್ ಮೇಲೆ ಎತ್ಕೊಂಡು ಓಡಾಡುವಂತೆ ಮಾಡಿದೆ. ಫ್ಯಾನ್ಸ್​ ಇದು ನಮ್ಮ ಆರ್​ಸಿಬಿ ಅಂತಾ ಗರ್ವದಿಂದ ಹೇಳುತ್ತಿದ್ದಾರೆ. ಹಾಗಾದ್ರೆ, ಇದಕ್ಕೆಲ್ಲಾ ಕೊಹ್ಲಿ, ಫಿಲ್​ ಸಾಲ್ಟ್​, ಪಡಿಕ್ಕಲ್​ ಮಾತ್ರ ಕಾರಣನಾ ಅಥವಾ ಸಕ್ಸಸ್​ ಹಿಂದಿನ ಈ ಹೀರೋಗಳ ಕಾರಣನಾ?.

ಗೆಲುವು ಆಡಿದ 10ರಲ್ಲಿ 7 ಪಂದ್ಯಗಳಲ್ಲಿ ಗೆಲುವು. ಈ ಸೀಸನ್​ನಲ್ಲಿ ಆರ್​ಸಿಬಿ ಆಡುತ್ತಿರೋ ಆಟಕ್ಕೆ, ಗೆಲುವಿನ ಯಾತ್ರೆಗೆ ಅಭಿಮಾನಿಗಳು ಸಂತಸದಲ್ಲಿ ತೇಲಾಡುತ್ತಿದ್ದಾರೆ. ನಂ.1 ತಂಡವಾಗಿ ಪ್ಲೇ ಆಫ್​ಗೆ ಎಂಟ್ರಿ ನೀಡಲು RCB ತುದಿಗಾಲಿನಲ್ಲಿ ನಿಂತಿದೆ. ಈ ಹಿಂದಿನ 18 ಸೀಸನ್​​ಗಳಲ್ಲಿ ಕಾಣದ ಕನ್ಸಿಸ್ಟೆನ್ಸಿ, ಸಿಗದ ಸಕ್ಸಸ್ ಈ ಸೀಸನ್​​ನಲ್ಲಿ ಆರ್​​ಸಿಬಿಗೆ ಸಿಕ್ಕಿದೆ.

publive-image

RCB ಗೆಲುವಿನ ಹಿಂದೆ ತ್ರಿಮೂರ್ತಿಗಳ ಶ್ರಮ..!

ಸೀಸನ್​-18ರ ಐಪಿಎಲ್​ನಲ್ಲಿ ಆರ್​ಸಿಬಿ ಕಂಪ್ಲೀಟ್​​ ಬದಲಾಗಿದೆ. ಗೇಮ್ ಆಫ್ ಸ್ಟ್ರೈಲ್​ನಲ್ಲಿ ಅಗ್ರೆಸ್ಸಿವ್ ಮೂಡ್ ಇದೆ. ಫೈಟಿಂಗ್ ಸ್ಪಿರಿಟಿ ಕಾಣ್ತಿದೆ. ಸುಲಭಕ್ಕೆ ಮ್ಯಾಚ್​ ಬಿಟ್ಟುಕೊಡದೇ ಹೋರಾಟ ನಡೆಸ್ತಿದೆ. ವಿರಾಟ್ ಕೊಹ್ಲಿ​, ಫಿಲ್ ಸಾಲ್ಟ್​, ದೇವದತ್​ ಪಡಿಕ್ಕಲ್​ ಜಬರ್ದಸ್ತ್​​ ಬ್ಯಾಟಿಂಗ್, ಟಿಮ್ ಡೇವಿಡ್ ಸ್ಫೋಟಕ ಆಟ, ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇವರ ಆಟಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ. ಇವರಂತೇ ಈ ಮೂವರ ಆಟ ಕೂಡ ಸಕ್ಸಸ್​​ನಲ್ಲಿ ಕ್ರೂಶಿಯಲ್​ ರೋಲ್​ ಪ್ಲೇ ಮಾಡಿದೆ.

ಹೇಜಲ್​ವುಡ್​ ಜೋಷ್​​.. RCBಗೆ ಸಕ್ಸಸ್​​.!

ಈ ಸೀಸನ್​ನಲ್ಲಿ ಆರ್​​ಸಿಬಿ ಬೌಲಿಂಗ್​ ಅಟ್ಯಾಕ್​ ಸಖತ್ ಡೆಡ್ಲಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಆಸಿಸ್​ ಮಿಸೈಲ್​ ಜೋಶ್​ ಹೇಜಲ್​ವುಡ್.​ ಪವರ್​ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ಹಾಕುವ ಜೋಶ್​​​​​​, ಡೆತ್ ಓವರ್​ಗಳಲ್ಲಿ ಡೆಡ್ಲಿ ಬೌಲಿಂಗ್ ಮಾಡ್ತಿದ್ದಾರೆ. ವಿಕೆಟ್ ಬೇಕು ಎಂದಾಗ ವಿಕೆಟ್ ಬೇಟೆಯಾಡುವ ಹೇಜಲ್​ವುಡ್​ನ ಆರ್​ಸಿಬಿ ಬೌಲಿಂಗ್ ಅಟ್ಯಾಕ್​ನ ಡೈನೋಸರ್ ಅಂದ್ರೆ ತಪ್ಪಿಲ್ಲ. ರಾಜಸ್ಥಾನ್ ರಾಯಲ್ಸ್​, ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋಲಿನ ಅಂಚಿನಲ್ಲಿದ್ದ ಆರ್​ಸಿಬಿಗೆ ಗೆಲುವಿನ ಗಿಫ್ಟ್​​ ನೀಡಿದ್ದೆ ಜೋಶ್ ಹೇಜಲ್​ವುಡ್​. ಅಂದು ಡೆತ್ ಓವರ್​​ನಲ್ಲಿ ಹಾಕಿದ್ದ ಡೆಡ್ಲಿ ಸ್ಪೆಲ್​ ಗೆಲುವಿಗೆ ಕಾರಣ ಆಯಿತು.

ಸೀಸನ್​​ನಲ್ಲಿ 10 ಪಂದ್ಯಗಳಿಂದ 18 ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ಪಡೆದಿರುವ ಹೇಜಲ್​ವುಡ್​​ 8.44ರ ಎಕಾನಮಿ ಕಾಯ್ದಕೊಂಡಿದ್ದಾರೆ. ವಿಕೆಟ್​ ಬೇಟೆಯ ಜೊತೆಗೆ ಎಕಾನಮಿಕಲ್​ ಸ್ಪೆಲ್​​ ಹಾಕೋ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ.

ಆರ್​ಸಿಬಿಯ ‘ಡಾರ್ಕ್ ಹಾರ್ಸ್’​ ಸುಯಶ್ ಶರ್ಮಾ..!

ಸುಯಾಶ್ ಶರ್ಮಾ ಆರ್​ಸಿಬಿಯ ಡಾರ್ಕ್ ಹಾರ್ಸ್​. ನಾವು ಹೇಳಿದ್ದಲ್ಲ.. ವಿರಾಟ್​​ ಕೊಹ್ಲಿ ಹೇಳಿರುವ ಮಾತಿದು. ಆರ್​ಸಿಬಿಯ ಸ್ಪಿನ್ ಡಿಪಾರ್ಟ್​ಮೆಂಟ್​ ಮೋಸ್ಟ್ ಎಫೆಕ್ಟೀವ್ ಪ್ಲೇಯರ್ ಆಗಿ ಈ ಸುಯಶ್ ಶರ್ಮಾ ಗುರುತಿಸಿಕೊಂಡಿದ್ದಾರೆ. ಆಡಿದ 9 ಪಂದ್ಯದಿಂದ ಕೇವಲ 4 ವಿಕೆಟ್​ ಬೇಟೆಯಾಡಿದ್ದಾರೆ. ಆದ್ರೆ, ಮಿಡಲ್ ಓವರ್​​ಗಳಲ್ಲಿ ಎದುರಾಳಿಗಳ ರನ್​ ಗಳಿಕೆಗೆ ಬ್ರೇಕ್ ಹಾಕ್ತಿದ್ದಾರೆ. ಜಸ್ಟ್ 7.97ರ ಎಕಾನಮಿಯಲ್ಲಿ ರನ್ ನೀಡಿರುವ ಸುಯಶ್​​​​, ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸ್ತಿದ್ದಾರೆ.

ಇದನ್ನೂ ಓದಿ: ಬಿಸಿಸಿಐನ ಕೋರ್ಟ್ ಕಟಕಟೆಗೆ ಎಳೆದುತಂದ ರೋಬೋ ನಾಯಿ, IPLನಲ್ಲಿ ಬಿಗ್​ಬಾಸ್​ಗೆ ಸಂಕಷ್ಟ..!

publive-image

ಕೃನಾಲ್ ಬ್ಯಾಂಗ್ ಬ್ಯಾಂಗ್​.. ಆರ್​ಸಿಬಿ ಕಮಾಲ್​..!

ಇಷ್ಟು ದಿನ ಬೌಲಿಂಗ್​ನಲ್ಲಿ ಕಮಾಲ್ ಮಾಡಿದ್ದ ಕೃನಾಲ್, ಇದೀಗ ಬ್ಯಾಟಿಂಗ್​ನಲ್ಲೂ ವಿಜೃಂಭಿಸಿದ್ದಾರೆ. ಚಿನ್ನಸ್ವಾಮಿಯ ಹೊರಗೆ ಆಡಿದ ಎಲ್ಲಾ ಪಂದ್ಯಗಳ ಗೆಲುವಿನ ಹಿಂದೆ ಕೃನಾಲ್​​ ಕೊಡುಗೆಯಿದೆ. ಎಫೆಕ್ಟೀವ್ ಬೌಲಿಂಗ್​ ಮಾಡ್ತಿರೋ ಕೃನಾಲ್, ಡೆಲ್ಲಿ ಎದುರಿನ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲೂ ಚಮತ್ಕಾರ ಮಾಡಿದ್ದಾರೆ. 10 ಪಂದ್ಯಗಳಿಂದ 13 ವಿಕೆಟ್ ಉರುಳಿಸಿರುವ ಕೃನಾಲ್, 8.62ರ ಏಕಾನಮಿ ಕಾಯ್ದುಕೊಂಡಿದ್ದಾರೆ. ಮೊನ್ನೆ ಡೆಲ್ಲಿ ಎದುರು ಅಜೇಯ 73 ರನ್ ಸಿಡಿಸಿರುವ ಕೃನಾಲ್, ಹೊಸ ಭರವಸೆ ಹುಟ್ಟು ಹಾಕಿದ್ದಾರೆ.

ಟಿ20ಯಂತ ಬ್ಯಾಟರ್​ಗಳ ಗೇಮ್​ನಲ್ಲಿ ಬೌಲರ್​ಗಳಿಗೆ ಕ್ರೆಡಿಟ್ ಸಿಗೋದು ತೀರಾ ಕಡಿಮೆ. ಮ್ಯಾಚ್ ವಿನ್ನರ್​ಗಳಾಗಿ ಮೆರೆದಾಡುವುದು ಆಗೊಮ್ಮೆ ಈಗೊಮ್ಮೆ. ಆದ್ರೆ, ಆರ್​ಸಿಬಿ ಪರ ಪ್ರತಿ ಪಂದ್ಯದಲ್ಲಿ ಇವರು ಇಂಪ್ಯಾಕ್ಟ್​ ಮೂಡಿಸ್ತಿದ್ದಾರೆ. ಈ ಇಂಪ್ಯಾಕ್ಟ್​ಫುಲ್​​ ಪರ್ಫಾಮೆನ್ಸ್​ ಆರ್​ಸಿಬಿ ಗೆಲುವಿನಲ್ಲಿ ಮೇಜರ್ ರೋಲ್​ ಪ್ಲೇ ಮಾಡ್ತಿರುವುದಂತೂ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment