ಗುಜರಾತ್​ಗೆ ಹೀನಾಯ ಸೋಲು; ಮೊದಲ ಪಂದ್ಯದಲ್ಲೇ ಆರ್​​ಸಿಬಿಗೆ ರೋಚಕ ಗೆಲುವು

author-image
Ganesh Nachikethu
Updated On
ಗುಜರಾತ್​​​​​ ವಿರುದ್ಧ ಮೊದಲ ಪಂದ್ಯ; ಇಂದು ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಯಾರಿಗೆ ಸ್ಥಾನ?
Advertisment
  • ಮಹಿಳಾ ಪ್ರೀಮಿಯರ್ ಲೀಗ್ 2025ರ ಉದ್ಘಾಟನಾ ಪಂದ್ಯ
  • ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದ ಆರ್​​ಸಿಬಿ
  • 6 ವಿಕೆಟ್‌ಗಳಿಂದ ಪಂದ್ಯ ಗೆದ್ದು ಬೀಗಿದ ಬೆಂಗಳೂರು ಟೀಮ್​​

ಇಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್ 2025ರ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ.

ವಡೋದರಾದ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಗುಜರಾತ್​​​ 201 ರನ್​ಗಳ ಬೃಹತ್​ ಟಾರ್ಗೆಟ್​ ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಆರ್​​ಸಿಬಿ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಸ್ಟಾರ್​​ ಪ್ಲೇಯರ್​ ರಿಚಾ ಘೋಷ್ ಸ್ಫೋಟಕ ಅರ್ಧಶತಕದಿಂದ ಗೆಲುವು ಸಾಧಿಸಿದೆ.

ಆರ್​ಸಿಬಿಗೆ ಓಪನರ್ಸ್​ ಕೈ ಕೊಟ್ರು. ಬ್ಯಾಕ್​ ಟು ಬ್ಯಾಕ್​​ ಬೌಂಡರಿ ಸಿಡಿಸಿದ ಮಂದಾನ ಮಿಂಚಿ ಮರೆಯಾದ್ರು. ಡೇನಿಯಲ್​ ವ್ಯಾಟ್​ 4 ರನ್​ಗಳಿಸಿ ಔಟಾದ್ರು.

ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಎಲ್ಲಿಸ್​ ಪೆರ್ರಿ, ರಾಘ್ವಿ ಬಿಸ್ತ್ ತಂಡಕ್ಕೆ ಆಸರೆಯಾದ್ರು. ಸಿಕ್ಕ ಜೀವದಾನಗಳನ್ನ ಬಳಸಿಕೊಂಡ ಜೋಡಿ, 86 ರನ್​ಗಳ ಜೊತೆಯಾಟವಾಡಿತು. ಅಬ್ಬರದ ಆಟವಾಡಿದ ಎಲ್ಲಿಸ್​ ಪೆರ್ರಿ 27 ಎಸೆತಕ್ಕೆ ಹಾಫ್​ ಸೆಂಚುರಿ ಚಚ್ಚಿದ್ರು.

25 ರನ್​ಗಳಿಸಿ ರಾಘ್ವಿ ಬಿಸ್ತ್​ ಪೆವಿಲಿಯನ್​ ಸೇರಿದ್ರು, 6 ಬೌಂಡರಿ, 2 ಸಿಕ್ಸರ್​ ಸಿಡಿಸಿ ಮಿಂಚಿದ ಪೆರ್ರಿ 34 ಎಸೆತಗಳಲ್ಲಿ 54 ರನ್​ ಸಿಡಿಸಿ ಔಟಾದ್ರು. ಈ ಎರಡು ವಿಕೆಟ್​ ಪತನದ ಬಳಿಕ ನೋಡಿ ಅಸಲಿ ಆಟ ಶುರುವಾಗಿದ್ದು.

ರಿಚಾ ಘೋಷ್​​ ಭರ್ಜರಿ ಬ್ಯಾಟಿಂಗ್​

5ನೇ ವಿಕೆಟ್​ಗೆ ಕ್ರಿಸ್​ನಲ್ಲಿ ಜೊತೆಯಾಟ ರಿಚಾ ಘೋಷ್​, ಕನ್ನಿಕಾ ಅಹುಜಾ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ರು. ಅಬ್ಬರದ ಬ್ಯಾಟಿಂಗ್​ ನಡೆಸಿದ ಯುವ ಜೋಡಿ ಗುಜರಾತ್​ ಬೌಲರ್​ಗಳನ್ನ ಬೆಂಡೆತ್ತಿದ್ರು.

ಮೊದಲ ಎಸೆತದಲ್ಲೇ ಸಿಕ್ಕ ಕ್ಯಾಚ್​ ಡ್ರಾಪ್​ನ ಜೀವದಾನವನ್ನ ಸಮರ್ಥವಾಗಿ ಬಳಸಿಕೊಂಡ ರಿಚಾ ಘೋಷ್​​ ಅಬ್ಬರಿಸಿ ಬೊಬ್ಬಿರಿದ್ರು. ಆಶ್ಲೇ ಗಾರ್ಡನರ್​ ಎಸೆದ 16ನೇ ಓವರ್​ನಲ್ಲಿ 23 ರನ್​​ ಚಚ್ಚಿದ್ರು. ಜಸ್ಟ್​ 23 ಎಸೆತಕ್ಕೆ ಹಾಫ್​ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು.

ಇನ್ನೊಂದು ತುದಿಯಲ್ಲಿದ್ದ ಕನ್ನಿಕಾ ಅಹುಜಾ ಕೂಡ ಗುಜರಾತ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. 13 ಎಸೆತಗಳಲ್ಲಿ 4 ಬೌಂಡರಿ ಸಹಿತ 30 ರನ್​ ಚಚ್ಚಿದ್ರು.

ಇದನ್ನೂ ಓದಿ:ಕೊಹ್ಲಿಗೆ ಕ್ಯಾಪ್ಟನ್ಸಿ ಏಕೆ ನೀಡಲಿಲ್ಲ? ಎಂದು ಬಿಚ್ಚಿಟ್ಟ RCB; ಈ ಬಗ್ಗೆ ಮ್ಯಾನೇಜ್ಮೆಂಟ್​ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment