/newsfirstlive-kannada/media/post_attachments/wp-content/uploads/2025/05/JITESH_SHARMA-1.jpg)
ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಲೀಗ್​ನ ಕೊನೆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಹಾಗೂ ನಾಯಕ ಜಿತೇಶ್ ಶರ್ಮಾ ಅವರ ಅದ್ಭುತವಾದ ಅರ್ಧಶತಕದಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್ ರೋಚಕ ಗೆಲುವು ಪಡೆದಿದೆ. ಈ ಮೂಲಕ ಪಾಯಿಂಟ್​ ಟೇಬಲ್​ನಲ್ಲಿ ಆರ್​ಸಿಬಿ 2ನೇ ಸ್ಥಾನಕ್ಕೆ ಏರಿದೆ. 19 ಅಂಕ ಹಾಗೂ ರನ್​ರೇಟ್​ನಿಂದಲೂ ಆರ್​ಸಿಬಿ ಈ ಸ್ಥಾನ ಪಡೆದಿದೆ.
ಲಕ್ನೋದ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ನಾಯಕ ಜಿತೇಶ್ ಶರ್ಮಾ ಟಾಸ್ ಗೆದ್ದು ಎದುರಾಳಿ ಲಕ್ನೋ ಸೂಪರ್ ಜೇಂಟ್ಸ್​ ತಂಡವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಲಕ್ನೋದ ಓಪನರ್​ಗಳಾದ ಮಿಚೆಲ್ ಮಾರ್ಷ್, ಮ್ಯಾಥ್ಯೂ ಬ್ರೀಟ್ಜ್ಕೆ ಒಳ್ಳೆಯ ಆರಂಭ ಪಡೆಯಲಿಲ್ಲ. ಕೇವಲ 14 ರನ್​ಗೆ ಮ್ಯಾಥ್ಯೂ ವಿಕೆಟ್​ ಒಪ್ಪಿಸಿದರು. ಇವರ ನಂತರ ಬಂದ ರಿಷಭ್ ಪಂತ್, ಆರ್​​ಸಿಬಿ ಬೌಲರ್​ಗಳ ಮೇಲೆ ಒತ್ತಡ ಏರಿದರು.
/newsfirstlive-kannada/media/post_attachments/wp-content/uploads/2025/05/rishabh_pant-2.jpg)
ಇನ್ನೊಂದೆಡೆ ಓಪನರ್​ ಮಿಚೆಲ್ ಮಾರ್ಷ್​ ಭರ್ಜರಿ ಬ್ಯಾಟಿಂಗ್ ಮುಂದುವರೆಸಿ ಕೇವಲ 37 ಬಾಲ್​ಗಳನ್ನು 4 ಬೌಂಡರಿ ಹಾಗೂ 5 ಸಿಕ್ಸರ್​ಗಳಿಂದ 67 ರನ್​ ಸಿಡಿಸಿ ಔಟ್ ಆದರು. ಬ್ಯಾಟಿಂಗ್​ನಲ್ಲಿ ಸುಧಾರಣೆ ಕಂಡ ರಿಷಭ್ ಪಂತ್​, ಆರ್​ಸಿಬಿ ಬೌಲರ್​ಗಳ ಮೇಲೆ ಎರಗಿದರು. ಕೇವಲ 54 ಎಸೆತಗಳನ್ನು ಎದುರಿಸಿದ ಪಂತ್, 10 ಬೌಂಡರಿ ಹಾಗೂ 6 ಸಿಕ್ಸರ್​ಗಳಿಂದ ಸೆಂಚುರಿ ಬಾರಿಸಿದರು. ಈ ಪಂದ್ಯದಲ್ಲಿ ಒಟ್ಟು 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್​​ಗಳಿಂದ 118 ರನ್​ ಬಾರಿಸಿ ಅಜೇಯರಾಗಿದರು. ಇದರಿಂದ ಲಕ್ನೋ ತಂಡ 20 ಓವರ್​ಗಳಲ್ಲಿ 3 ವಿಕೆಟ್​ಗೆ 228 ರನ್​ಗಳ ಬೃಹತ್​​ ಟಾರ್ಗೆಟ್ ನೀಡಿತ್ತು.
ಈ ದೊಡ್ಡ ಮೊತ್ತದ ರನ್​ಗಳ ಹಿಂದೆ ಬಿದ್ದ ಆರ್​ಸಿಬಿ ಓಪನರ್​ ಬ್ಯಾಟರ್ಸ್​ ಉತ್ತಮ ಆರಂಭವೇನೋ ಪಡೆದುಕೊಂಡರು. ವಿರಾಟ್​ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಫಿಲ್ ಸಾಲ್ಟ್​ 30 ರನ್​ಗೆ ಬ್ಯಾಟಿಂಗ್ ಮುಗಿಸಿದರು. ಇವರ ಬೆನ್ನಲ್ಲೇ ರಜತ್ ಪಾಟಿದಾರ್​ ಕೇವಲ 14 ರನ್​ಗೆ ಪೆವಿಲಿಯನ್​ಗೆ ನಡೆದರು. ರಜತ್​ ಹಿಂದೆಯೇ ಲೈಮ್ ಲಿವಿಂಗ್​ಸ್ಟೋನ್​ ಡಕೌಟ್​ ಆಗಿದ್ದು ಆರ್​ಸಿಬಿ ಫ್ಯಾನ್ಸ್ ಬೇಸರಕ್ಕೆ ಕಾರಣವಾಯಿತು.
/newsfirstlive-kannada/media/post_attachments/wp-content/uploads/2025/05/SALT_KOHLI-1.jpg)
ಒಂದು ಕಡೆ ಸತತ ವಿಕೆಟ್​ ಹೋಗುತ್ತಿದ್ದರೂ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್​ ಕೊಹ್ಲಿ, ಲಕ್ನೋ ವಿರುದ್ಧ ಅರ್ಧಶತಕ ಬಾರಿಸಿಯೇ ಬಿಟ್ಟರು. ಪಂದ್ಯದಲ್ಲಿ ಒಂದು ಸಿಕ್ಸರ್​ ಬಾರಿಸದೇ 10 ಬೌಂಡರಿ ಸಮೇತ 27 ಬಾಲ್​ಗಳಲ್ಲಿ ಅರ್ಧಶತಕ ಸಿಡಿಸಿದರು. ವಿರಾಟ್ ಕೊಹ್ಲಿ 54 ರನ್​ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದಾಗ ಆಯುಷ್​ ಬದೋನಿಗೆ ಕ್ಯಾಚ್​ ಕೊಟ್ಟು ಔಟ್ ಆದರು.
ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ನಾಯಕ ಜಿತೇಶ್ ಶರ್ಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಜಿತೇಶ್ ಶರ್ಮಾ ಪಂದ್ಯದಲ್ಲಿ ಕೇವಲ 21 ಬಾಲ್​ಗಳಲ್ಲಿ 6 ಬೌಂಡರಿ ಹಾಗೂ 3 ಮನಮೋಹಕ ಸಿಕ್ಸರ್​ಗಳಿಂದ ಹಾಫ್​ಸೆಂಚುರಿ ಬಾರಿಸಿದರು. ಜಿತೇಶ್​ ಶರ್ಮಾ ಅವರು ಆರ್​ಸಿಬಿಗೆ ನಾಯಕನಾಗಿದ್ದ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಖುಷಿ ಪಟ್ಟರು. ಜಿತೇಶ್​ ಶರ್ಮಾ ಒಟ್ಟು 33 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್​ಗಳಿಂದ 85 ರನ್​ ಬಾರಿಸಿ ಅಜೇಯರಾದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ 5 ಬೌಂಡರಿಗಳಿಂದ 41 ರನ್​ ಸಿಡಿಸಿ ಆರ್​ಸಿಬಿಗೆ ನೆರವಾದರು. ಇದರಿಂದ ಆರ್​ಸಿಬಿ 18.4 ಓವರ್​ಗಳಲ್ಲಿ 4 ವಿಕೆಟ್​​ 230 ರನ್​ ಗಳಿಸಿ ಜಯಭೇರಿ ಬಾರಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us