newsfirstkannada.com

WPL 2024: ಬರೋಬ್ಬರಿ 16 ವರ್ಷಗಳ ತಪಸ್ಸು; ಕೊನೆಗೂ ಕಪ್​​​​​ ಗೆದ್ದ RCB

Share :

Published March 17, 2024 at 10:37pm

Update March 17, 2024 at 10:48pm

    ಇಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024ರ ಫೈನಲ್‌ ಕದನ

    ಪಿಟಲ್ಸ್ ವಿರುದ್ಧ ಗೆದ್ದು ಬೀಗಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಐಪಿಎಲ್​​ ಕಪ್​ ಗೆಲ್ಲೋ ಆರ್​​ಸಿಬಿಯ 16 ವರ್ಷಗಳ ಕನಸು ನನಸು!

ಇಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024ರ ಫೈನಲ್‌ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಈ ಮೂಲಕ ಐಪಿಎಲ್​​ ಕಪ್​ ಗೆಲ್ಲೋ ಆರ್​​ಸಿಬಿ 16 ವರ್ಷಗಳ ಕನಸು ಕೊನೆಗೂ ನನಸಾಗಿದೆ.

ಹೌದು, ಆರ್​​​ಸಿಬಿ ಮೆನ್​ ಟೀಮ್​ ಕಳೆದ 16 ಸೀಸನ್​ಗಳಲ್ಲೂ ಐಪಿಎಲ್​ ಕಪ್​ ಗೆದ್ದಿಲ್ಲ. ಆದರೀಗ ಮಹಿಳಾ ಆರ್​ಸಿಬಿ ತಂಡ 2ನೇ ಸೀಸನ್​ನಲ್ಲೇ ಕಪ್​ ಗೆದ್ದು ಬರೋಬ್ಬರಿ 16 ವರ್ಷಗಳ ಕಪ್​ ಬರವನ್ನು ನೀಗಿಸಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ.

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಹೈವೋಲ್ಟೇಜ್​​ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್​ ಮಾಡಿತ್ತು. ಕೇವಲ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್​ ಆಲೌಟ್​ ಆಗಿತ್ತು.

ಇನ್ನು, ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಆರ್​​ಸಿಬಿ ಕೇವಲ 19.3 ಓವರ್​ಗಳಲ್ಲೇ 115 ರನ್​ ಗಳಿಸೋ ಮೂಲಕ ಗೆದ್ದು ಬೀಗಿದೆ. ಬರೋಬ್ಬರಿ 8 ವಿಕೆಟ್​ಗಳ ದಾಖಲೆ ಗೆಲುವು ಸಾಧಿಸಿದೆ. ಆರ್​​ಸಿಬಿ ತಂಡದ ಪರ ಕ್ಯಾಪ್ಟನ್​​ ಸ್ಮೃತಿ ಮಂದಾನ 31, ಸೋಫಿ ಡಿವೈನ್​ 34, ಎಲೆಸಿ ಪೆರಿ 35, ರಿಚಾ ಘೋಷ್​​ 17 ರನ್​ ಗಳಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WPL 2024: ಬರೋಬ್ಬರಿ 16 ವರ್ಷಗಳ ತಪಸ್ಸು; ಕೊನೆಗೂ ಕಪ್​​​​​ ಗೆದ್ದ RCB

https://newsfirstlive.com/wp-content/uploads/2024/03/RCB-IPL-Trophy.jpg

Load More