Advertisment

ಅನುಮತಿ ಇಲ್ಲದೇ ಕೊಹ್ಲಿ ಪರ್ಫ್ಯೂಮ್ ಸ್ಪ್ರೇ.. RCB ಯಂಗ್ ಪ್ಲೇಯರ್ ವರ್ತನೆಗೆ ಎಲ್ರೂ ಶಾಕ್!

author-image
Bheemappa
Updated On
ಅನುಮತಿ ಇಲ್ಲದೇ ಕೊಹ್ಲಿ ಪರ್ಫ್ಯೂಮ್ ಸ್ಪ್ರೇ.. RCB ಯಂಗ್ ಪ್ಲೇಯರ್ ವರ್ತನೆಗೆ ಎಲ್ರೂ ಶಾಕ್!
Advertisment
  • ಬ್ಯಾಗ್​ನಿಂದ ಪರ್ಫ್ಯೂಮ್ ತೆಗೆದುಕೊಂಡು ಸ್ಪ್ರೇ ಮಾಡಿಕೊಂಡ
  • ಎಲ್ಲರ ಮುಂದೆಯೇ ವಿರಾಟ್ ಕೊಹ್ಲಿ ಬ್ಯಾಗ್ ಓಪನ್ ಮಾಡಿದ
  • ಕ್ಯಾಪ್ಟನ್​ ರಜತ್ ಪಾಟಿದಾರ್ ನೋಡ್ತಿದ್ದರೂ ಡೋಂಟ್ ಕೇರ್​..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಸದ್ಯ ಚೆನ್ನೈನ ಪ್ರವಾಸದಲ್ಲಿದ್ದು ಎಲ್ಲ ಆಟಗಾರರು ಸಖತ್ ಮಸ್ತಿ ಮಾಡುತ್ತಿದ್ದಾರೆ. ಈ ಸಲ ಆರ್​ಸಿಬಿ ತಂಡದಲ್ಲಿ ಕೆಲ ಯಂಗ್ ಪ್ಲೇಯರ್​​ಗಳು ಸ್ಥಾನ ಪಡೆದಿದ್ದು ಅವರು ಮಾಡುವ ಚೇಷ್ಟೆಗೆ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರು ಫುಲ್ ಶಾಕ್ ಆಗಿದ್ದಾರೆ. ಏಕೆಂದರೆ ಯುವ ಪ್ಲೇಯರ್ ಒಬ್ಬ ಯಾವುದೇ ಅನುಮತಿ ಪಡೆಯದೇ ಕೊಹ್ಲಿ ಪರ್ಫ್ಯೂಮ್ ಬಳಸಿದ್ದಾರೆ.

Advertisment

ಕೋಲ್ಕತ್ತಾ ವಿರುದ್ಧದ ಉದ್ಘಾಟನಾ ಪಂದ್ಯದ ಬಳಿಕ ಎಲ್ಲರೂ ಒಟ್ಟಿಗೆ ಕುಳಿತಿರುವಾಗ ಯುವ ಆಟಗಾರ ಸ್ವಸ್ತಿಕ್ ಚಿಕಾರ, ನೇರ ಹೋಗಿ ವಿರಾಟ್ ಕೊಹ್ಲಿಯ ಬ್ಯಾಗ್​ನ ಜಿಪ್ ತೆಗೆದಿದ್ದಾರೆ. ಬಳಿಕ ಅದರಲ್ಲಿರುವ ಪರ್ಫ್ಯೂಮ್ ತೆಗೆದುಕೊಂಡು ಬಾಡಿಗೆ ಸ್ಪ್ರೇ ಮಾಡಿಕೊಂಡಿದ್ದಾರೆ. ಹೀಗೆ ಮಾಡುವಾಗ ಸ್ವಸ್ತಿಕ್ ಚಿಕಾರ ಯಾರದ್ದೇ ಅನುಮತಿ ಪಡೆದಿಲ್ಲ.

ಇದನ್ನೂ ಓದಿ: KL ರಾಹುಲ್​ ಬ್ಯಾಟಿಂಗ್ ಇಮಿಟೇಟ್​ಗೆ ನಕ್ಕು.. ನಕ್ಕು ಸುಸ್ತಾದ ಡೆಲ್ಲಿ ಪ್ಲೇಯರ್ಸ್, ಮುಂದಿನ ಪಂದ್ಯ ಆಡ್ತಾರಾ ಕನ್ನಡಿಗ?

publive-image

ಅದರಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಗ್ ಮುಟ್ಟಬೇಕು ಎಂದರೆ ಎಲ್ಲರೂ ಒಮ್ಮೆ ಯೋಚನೆ ಮಾಡುತ್ತಾರೆ. ಇಲ್ಲವಾದರೆ, ಕೊಹ್ಲಿ ಅವರನ್ನು ಕೇಳಿ ತಮಗೆ ಬೇಕಾದ ವಸ್ತುವನ್ನು ತೆಗೆದುಕೊಳ್ಳುತ್ತಾರೆ. ಆದರೆ ಯಂಗ್ ಪ್ಲೇಯರ್ ಸ್ವಸ್ತಿಕ್ ಚಿಕಾರ ಒಮ್ಮೆಗೆ ಕೊಹ್ಲಿ ಬಳಸುವ ಪರ್ಫ್ಯೂಮ್ ಅನ್ನೇ ಬಳಕೆ ಮಾಡಿದ್ದಾರೆ.

Advertisment

ವಿರಾಟ್ ಕೊಹ್ಲಿ ಅವರ ಬ್ಯಾಗ್​ ಮುಟ್ಟುತ್ತಿದ್ದಂತೆ ನಾಯಕ ರಜತ್ ಪಾಟೀದಾರ್ ಸೇರಿದಂತೆ ಉಳಿದ ಆಟಗಾರರು ಸ್ವಸ್ತಿಕ್ ಚಿಕಾರ ಮುಖ ನೋಡಿದ್ದಾರೆ. ಏನ್ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸ್ವಸ್ತಿಕ್ ಚಿಕಾರ, ವಿರಾಟ್ ಕೊಹ್ಲಿ ನಮ್ಮ ದೊಡ್ಡ ಅಣ್ಣ. ಪರ್ಫ್ಯೂಮ್ ಅನ್ನು ಚೆಕ್ ಮಾಡಿ ಚೆನ್ನಾಗಿದೆಯಾ, ಇಲ್ವಾ ಅಂತ ನೋಡುತ್ತಿದ್ಧೇನೆ ಎಂದು ಹೇಳಿದ್ದಾರೆ. ಇದರಿಂದ ಅಲ್ಲೇ ಇದ್ದ ವಿರಾಟ್ ಕೊಹ್ಲಿ ಹಾಗೂ ಉಳಿದ ಎಲ್ಲ ಆಟಗಾರರು ಜೋರಾಗಿ ನಕ್ಕಿದ್ದಾರೆ.


">March 26, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment