Advertisment

ಬೆಂಗಳೂರಲ್ಲಿ ಆರ್​ಸಿಬಿ ಮುಂದಿನ ಮ್ಯಾಚ್​ ರದ್ದು.. ಮತ್ತೆ ಎಲ್ಲಿ ನಡೆಯುತ್ತೆ..?

author-image
Ganesh
Updated On
ಬೆಂಗಳೂರಲ್ಲಿ ಆರ್​ಸಿಬಿ ಮುಂದಿನ ಮ್ಯಾಚ್​ ರದ್ದು.. ಮತ್ತೆ ಎಲ್ಲಿ ನಡೆಯುತ್ತೆ..?
Advertisment
  • ಮೇ 23 ರಂದು ಹೈದರಾಬಾದ್ ವಿರುದ್ಧ ಪಂದ್ಯ
  • ಬೆಂಗಳೂರಲ್ಲೂ ಅಲ್ಲ, ಹೈದರಬಾದ್​​ನಲ್ಲೂ ಮ್ಯಾಚ್ ನಡೆಯಲ್ಲ
  • ಐಪಿಎಲ್​​ನಿಂದ ಮಹತ್ವದ ನಿರ್ಧಾರ ಪ್ರಕಟವಾಗಿದೆ

ಮೇ 23 ರಂದು ಬೆಂಗಳೂರು ಮತ್ತು ಸನ್ ರೈಸರ್ಸ್​ ಹೈದರಾಬಾದ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ನಿಗದಿಯಂತೆ ಈ ಪಂದ್ಯವು ಬೆಂಗಳೂರಲ್ಲಿ ನಡೆಯಬೇಕಿತ್ತು. ಆದರೆ ಬೆಂಗಳೂರಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಲಕ್ನೋಗೆ ಶಿಫ್ಟ್ ಮಾಡಲಾಗಿದೆ.

Advertisment

ಇದನ್ನೂ ಓದಿ: ಸ್ಪಿನ್ನರ್ ದಿಗ್ವೇಶ್ ರಾಥಿಗೆ ಬಿಗ್​ ಶಾಕ್; ಅಭಿಷೇಕ್ ಜತೆ ವಾಗ್ವಾದ.. IPL ಮ್ಯಾಚ್​ನಿಂದ ಅಮಾನತು

ಹವಾಮಾನ ಇಲಾಖೆ ಮಳೆ ಸುರಿಯುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಲಕ್ನೋದ ಎಕನಾ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೇ 17 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತ ವಿರುದ್ಧ ಪಂದ್ಯವಿತ್ತು. ಆದರೆ ಮಳೆಯಿಂದಾಗಿ ನಡೆಸಲು ಸಾಧ್ಯವಾಗಲಿಲ್ಲ. ಪಂದ್ಯ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಾಯಿಂಟ್ಸ್ ಹಂಚಿಕೊಂಡವು.

ಈ ರೀತಿ ಮತ್ತೆ ಆಗಬಾರದು ಅನ್ನೋ ಉದ್ದೇಶದಿಂದ ಬೆಂಗಳೂರಿನ ಪಂದ್ಯವನ್ನು ಲಕ್ನೋಗೆ ಶಿಫ್ಟ್ ಮಾಡಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್​ ಜೊತೆ ಬೆಂಗಳೂರು ತಂಡ ಮೇ 27 ರಂದು ಪಂದ್ಯ ನಡೆಯಲಿದೆ. ಇನ್ನು, ಐಪಿಎಲ್ ಅಂತಿಮಘಟ್ಟ ತಲುಪಿದ್ದು, ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ. ಜೂನ್ 3 ರಂದು ಫೈನಲ್ ಮ್ಯಾಚ್ ನಡೆಯಲಿದೆ.

Advertisment

ಇದನ್ನೂ ಓದಿ: ಪ್ಲೇ-ಆಫ್ ಎಂಟ್ರಿ ಖುಷಿಯಲ್ಲಿ ಮೈಮರೆತರೆ ಕಷ್ಟ.. ಆರ್​ಸಿಬಿ ಮುಂದಿನ ಪಂದ್ಯ ಯಾವಾಗ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment