/newsfirstlive-kannada/media/post_attachments/wp-content/uploads/2025/05/SUYASH_SHARMA_RCB.jpg)
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್ನಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 9 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರಿದೆ. ಆರ್ಸಿಬಿಯ ಈ ಸಕ್ಸಸ್ನ ಸೂತ್ರದಾರರಲ್ಲಿ ಒಬ್ಬರು ಸುಯಶ್ ಶರ್ಮಾ. ಈ ಸುಯಶ್ ಶರ್ಮಾ ಈ ಸೀಸನ್ನಲ್ಲಿ ಆಡ್ತಿರೋದು ಆರ್ಸಿಬಿಯ ಅದೃಷ್ಟ. ಅದ್ಯಾಕೆ ಅಂತೀರಾ?.
ಪಂಜಾಬ್ ಕಿಂಗ್ಸ್ಗೆ ಪವರ್ ಫುಲ್ ಪಂಚ್ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 4ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿದೆ. ಮುಲ್ಲನ್ಪುರಲ್ಲಿ ಮ್ಯಾಜಿಕಲ್ ಸ್ಪೆಲ್ ಮಾಡಿದ ಸುಯಶ್ ಶರ್ಮಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದರು. 3 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಕಬಳಿಸಿದ್ದ ಸುಯಶ್, ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಬೆನ್ನಲುಬನ್ನೇ ಮುರಿದರು.
ಸೆಟ್ ಬ್ಯಾಕ್ ಟು ಕಮ್ಬ್ಯಾಕ್ ಕಥೆಯೇ ರೋಚಕ..!
2023, 2024ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಸುಯಶ್, ಸೀಸನ್-18ರ ಮೆಗಾ ಹರಾಜಿನಲ್ಲಿ ಬರೋಬ್ಬರಿ 2.60 ಕೋಟಿ ರೂಪಾಯಿಗೆ ಆರ್ಸಿಬಿ ತಂಡದ ಪಾಲಾಗಿದ್ದರು. ಇವತ್ತು ಆರ್ಸಿಬಿಯ ಮ್ಯಾಚ್ ವಿನ್ನರ್ ಆಗಿರುವ ಸುಯಶ್, ಈ ಸೀಸನ್ ಆರಂಭಕ್ಕೂ ಮುನ್ನ ಟೂರ್ನಿಯಿಂದಲೇ ಹೊರಬೀಳೋ ಆತಂಕಕ್ಕೆ ಸಿಲುಕಿದ್ರು.
ಸುಯಶ್ ಶರ್ಮಾಗೆ ಕಳೆದ ಕೆಲ ವರ್ಷಗಳಿಂದ ಇಂಜುರಿ ಕಾಡಿತ್ತು. ಕೆಕೆಆರ್ ಪರ ಹಿಂದಿನ 2 ವರ್ಷಗಳ ಕಾಲ ಇಂಜಕ್ಷನ್ ತೆಗೆದುಕೊಂಡೇ ಸುಯಶ್ ಐಪಿಎಲ್ ಆಡಿದ್ದರು. ಕನಿಷ್ಠ ಪಕ್ಷ ಆ ನೋವು ಏನು ಅನ್ನೋದು ಸಹ ಸುಯಶ್ಗೆ ತಿಳಿದಿರಲಿಲ್ಲ. ಅಸಾಧ್ಯ ನೋವನ್ನ ಆಟಕ್ಕಾಗಿ ಸಹಿಸಿಕೊಂಡಿದ್ದ ಸುಯಶ್ ಶರ್ಮಾಗೆ ಕೊನೆಗೆ ನೆರವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.
ಒಂದಲ್ಲ.. ಮೂರು ಭಾಗದಲ್ಲಿ ಹರ್ನಿಯಾ ಸಮಸ್ಯೆಯನ್ನ ಸುಯಶ್ ಶರ್ಮಾ ಎದುರಿಸ್ತಾ ಇದ್ರು. ಭಾರತದಲ್ಲಿ ಎಲ್ಲೂ ಇದಕ್ಕೆ ಟ್ರೀಟ್ಮೆಂಟ್ ಸಿಕ್ಕಿರಲಿಲ್ಲ. ಈ ಹಿಂದೆ ಸುಯಶ್ ಪ್ರತಿನಿಧಿಸ್ತಾ ಇದ್ದ ಫ್ರಾಂಚೈಸಿ ಕೂಡ ಇದರ ಬಗ್ಗೆ ತಲೆ ಕೆಡಿಕೊಂಡಿರಲಿಲ್ಲ. ಸೀಸನ್ ಆರಂಭಕ್ಕೂ ಮುನ್ನ ನಡೆದ ಕ್ಯಾಂಪ್ನಲ್ಲೇ ಈ ಸಮಸ್ಯೆ ಬಗ್ಗೆ ಗಮನ ವಹಸಿದ ಆರ್ಸಿಬಿ ಟ್ರೀಟ್ಮೆಂಟ್ಗೆ ನೆರವಾಯಿತು.
ಆರ್ಸಿಬಿ ನನಗೆ ಸರ್ಜರಿಗಾಗಿ ಲಂಡನ್ಗೆ ಕಳುಹಿಸಿತು. ನಾನು ಆರ್ಸಿಬಿ ಫಿಸಿಯೋ ಜೇಮ್ಸ್ ಪೈಪಿರನ್ನ ಲಂಡನ್ನಲ್ಲಿ ಭೇಟಿಯಾದೆ. ಅವರು, ಕುಟುಂಬ ನನ್ನ ಫ್ಯಾಮಿಲಿ ಮೆಂಬರ್ನಂತೆ ನೋಡಿಕೊಂಡರು. ನನಗೆ ಮೊದಲ ಪಂದ್ಯವಾಡುವ ನಂಬಿಕೆಯೂ ಇರಲಿಲ್ಲ. ನನಗೆ ದೊಡ್ಡ ಸರ್ಜರಿಯಾಗಿದೆ. ಮೂರ್ನಾಲ್ಕು ಮ್ಯಾಚ್ ಆಡುತ್ತೇನೆ ಎಂದು ಹೇಳಿದ್ದೆ. ಆದ್ರೆ, ಪೈಪಿ ಮತ್ತು ಫ್ಯಾಮಿಲಿ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರು. ನಾನು ಆರ್ಸಿಬಿ ಫ್ರಾಂಚೈಸಿಗೆ ಋಣಿಯಾಗಿದ್ದೇನೆ. ನಾನು ಐಪಿಎಲ್ಗೂ ಮುನ್ನ 3 ತಿಂಗಳ ಬೆಡ್ ರೆಸ್ಟ್ನಲ್ಲಿದ್ದೆ. 2 ವಾರಗಳ ಮುನ್ನ ಬೌಲಿಂಗ್ ಅಭ್ಯಾಸ ಶುರು ಮಾಡಿದೆ.
ಸುಯಶ್ ಶರ್ಮಾ, ಆರ್ಸಿಬಿ ಸ್ಪಿನ್ನರ್
ಆಪರೇಶನ್ ಬಳಿಕ ಎಲ್ಲವೂ ಸರಿಯಾಗಲಿಲ್ಲ. ವಿಶ್ರಾಂತಿ ಪಡೆದು ಬೌಲಿಂಗ್ ಅಭ್ಯಾಸ ಶುರು ಮಾಡಿದಾಗ ಸುಯಶ್ ಶರ್ಮಾ, ರನ್ ಅಪ್ ಕೂಡ ಸರಿ ಇರಲಿಲ್ಲ. ಆಗ ಬೌಲಿಂಗ್ ಕೋಚ್ ಸುಯಶ್ ನೆರವಿಗೆ ನಿಂತಿದ್ದರು. ಕ್ರಮೇಣ ಸುಧಾರಿಸಿಕೊಂಡ ಸುಯಶ್ ಐಪಿಎಲ್ಗೂ ಮುನ್ನ ರಿಧಮ್ ಕಂಡುಕೊಂಡರು. ಅಂದ್ಹಾಗೆ ಈ ಇಂಜುರಿ ಮಾತ್ರವಲ್ಲ, ವೈಯಕ್ತಿಕವಾಗಿ ಜೀವನದಲ್ಲೂ ಕಳೆದ ಕೆಲ ವರ್ಷಗಳಿಂದ ಮೇಲಿಂದ ಮೇಲೆ ಸಮಸ್ಯೆ ಎದುರಿಸಿದ್ದಾರೆ.
ಕ್ಯಾನ್ಸರ್ನಿಂದ ತಂದೆ ಸಾವು, ಕೋವಿಡ್ ವೇಳೆ ಕೋಚ್ ನಿಧನ..!
ಸುಯಶ್ ಜೀವನ ನಿಜಕ್ಕೂ ಸುಲಭದಿರಲಿಲ್ಲ. 2021ರ ಬಳಿಕ ಕಡುಕಷ್ಟದಲ್ಲೇ ಸುಯಶ್ ಜೀವನ ಸಾಗಿ ಬಂದಿದೆ. ಕೋವಿಡ್ ವೇಳೆ ಬಾಲ್ಯದ ಕೋಚ್ ಕಳೆದುಕೊಂಡರು. 2021ರಲ್ಲಿ ತಂದೆಯನ್ನು ಕಳೆದುಕೊಂಡರು. ಇದೀಗ ಇಡೀ ಕುಟುಂಬದ ಜವಾಬ್ದಾರಿಯನ್ನ ಸುಯಶ್ ಹೊತ್ತಿದ್ದಾರೆ.
ನನ್ನ ತಾಯಿ ಶಿಕ್ಷಕಿ, ನನ್ನ ತಂದೆಯ ಫ್ಯಾಕ್ಟರಿ ಇತ್ತು. ಆದರೆ ತಂದೆ ಕ್ಯಾನ್ಸರ್ನಿಂದ 2 ವರ್ಷದ ಹಿಂದೆ ನಿಧನರಾದರು. ನನಗೆ ಸುರೇಶ್ ಬತ್ರಾ ಕೋಚ್ ಇದ್ದರು. ವಿರಾಟ್ ಭಾಯ್ಗಿದ್ದವರೆ, ನನಗೂ ಬಾಲ್ಯದ ತರಬೇತುದಾರರಿದ್ದರು. ಅವರು ನಾಲ್ಲೈದು ವರ್ಷ ತರಬೇತಿ ನೀಡಿದರು. 2021ರಲ್ಲಿ ಕೋವಿಡ್ ವೇಳೆ ಸಾವನ್ನಪ್ಪಿದರು. ನಂತರ ನನ್ನ ಸ್ನೇಹಿತ ನನಗೆ ತರಬೇತಿ ನೀಡಿದರು..
ಸುಯಶ್ ಶರ್ಮಾ, ಆರ್ಸಿಬಿ ಸ್ಪಿನ್ನರ್
ಇದನ್ನೂ ಓದಿ:RCB ಟ್ರೋಫಿ ಗೆದ್ದೇ ಗೆಲ್ಲುತ್ತೆ.. ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಏನ್ ಹೇಳಿದರು?
ಕಳೆದ ಕೆಲ ವರ್ಷಗಳಿಂದ ಮೇಲೆ ಮೇಲೆ ಐಪಿಎಲ್ ಆಡುವ ಕನಸನ್ನ ಬಿಡಲಿಲ್ಲ. ಛಲದ ಹೋರಾಟ ನಡೆಸಿ ಐಪಿಎಲ್ ಆಡೋ ಕನಸು ನನಸಾಗಿಸಿಕೊಂಡ ಸುಯಶ್, ಕೆಕೆಆರ್ ಟ್ರೋಫಿ ಗೆಲ್ಲುವಲ್ಲೂ ಮಹತ್ವದ ಪಾತ್ರ ನಿರ್ವಹಿಸಿದ್ರು. ಇದೀಗ ಹರಾಜಿನಲ್ಲಿ ದುಡ್ಡು ಕೊಟ್ಟು ಖರೀದಿ ಮಾಡಿದ್ದಲ್ಲದೇ ವೈಯಕ್ತಿಕವಾಗಿಯೂ ನೆರವಾದ ಆರ್ಸಿಬಿಗೆ ಸುಯಷ್ ಈಗ ಕಪ್ ಗೆಲ್ಲಿಸಿಕೊಡೋ ಪಣತೊಟ್ಟಿದ್ದಾರೆ.
ನನಗೆ ಒಂದು ಗುರಿಯಿದೆ. ನಿಜವಾಗಿಯೂ ಈ ವರ್ಷ ಕಪ್ ಗೆಲ್ಲಿಸುವುದೇ ನನ್ನ ಗುರಿ. ಇದಕ್ಕಿಂತ ನನಗೆ ಬೇಱವ ಗುರಿಯಿಲ್ಲ.
ಸುಯಶ್ ಶರ್ಮಾ, ಆರ್ಸಿಬಿ ಸ್ಪಿನ್ನರ್
ಅನಾರೋಗ್ಯದ ಸಮಯದಲ್ಲಿ ಕೈ ಹಿಡಿದ ಆರ್ಸಿಬಿಗೆ ಕಪ್ ಗೆಲ್ಲಿಸುವ ಗುರಿ ಹೊಂದಿರುವ ಸುಯಶ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಂತೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಟೂರ್ನಿಯುದ್ದಕ್ಕೂ ಆರ್ಸಿಬಿ ಹೀರೋ ಆಗಿರೋ ಸುಯಶ್, ಕ್ವಾಲಿಫೈಯರ್ನಲ್ಲಿ ಕಮಾಲ್ ಮಾಡಿದ್ದಾರೆ. ಫೈನಲ್ಗೂ ಮುನ್ನ ಸಾಲಿಡ್ ಆಟವಾಡಿರುವ ಸುಯಶ್, ನಮೋ ಮೈದಾನದಲ್ಲಿ ಇಂತಹದ್ದೇ ಪ್ರದರ್ಶನ ನೀಡಿದ್ರೆ, ಆರ್ಸಿಬಿ ಕಪ್ ಗೆಲ್ಲುವುದರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ