/newsfirstlive-kannada/media/post_attachments/wp-content/uploads/2025/05/RCB-Virat-kohli.jpg)
ಐಪಿಎಲ್ ಸೀಸನ್ 18ರಲ್ಲಿ ಜೆರ್ಸಿ ನಂಬರ್ 18ರದ್ದೇ ಅಬ್ಬರ. ಐಪಿಎಲ್ಗೆ ನಾನೇ ಕಿಂಗ್ ಅನ್ನೋದನ್ನ ವಿರಾಟ್ ಕೊಹ್ಲಿ ಪಂದ್ಯದಿಂದ ಪಂದ್ಯಕ್ಕೆ ನಿರೂಪಿಸ್ತಿದ್ದಾರೆ. ವಿರಾಟನ ವೀರಾವೇಶಕ್ಕೆ ಎದುರಾಳಿಗಳು ಬೆಚ್ಚಿ ಬೀಳ್ತಿದ್ದಾರೆ. ನಿನ್ನೆಯೂ ಅಷ್ಟೇ ಚಿನ್ನಸ್ವಾಮಿ ಅಂಗಳದಲ್ಲಿ ಚೆನ್ನೈನ ಚಿಂದಿ ಉಡಾಯಿಸಿ ಬಿಟ್ರು.
ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ವಿಶ್ವದ ಉಳಿದೆಲ್ಲಾ ಕ್ರಿಕೆಟ್ ಲೀಗ್ಗಳಿಗೂ ಬಾಸ್. ಆದ್ರೆ, ಈ ಐಪಿಎಲ್ ವಿರಾಟ್ ಕೊಹ್ಲಿನೇ ಬಾಸ್. ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಇದ್ಯಲ್ಲ ಇದು ಕೊಹ್ಲಿಯ ಕಿಂಗ್ಡಮ್. ಇಲ್ಲಿ ಕೊಹ್ಲಿಯದ್ದೇ ದರ್ಬಾರ್. ಕೊಹ್ಲಿಯದ್ದೇ ಕಾರುಬಾರ್.
ಕಿಂಗ್ಡಮ್ನಲ್ಲಿ ಘರ್ಜಿಸಿದ ಕಿಂಗ್ ಕೊಹ್ಲಿ ಬೆಚ್ಚಿದ ಚೆನ್ನೈ
ವಿರಾಟ್ ವೀರಾವೇಷ, ಚೆನ್ನೈ ಥಂಡಾ, ಫ್ಯಾನ್ಸ್ಗೆ ಹಬ್ಬ
ಬದ್ಧವೈರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಬ್ಯಾಟಲ್ನಲ್ಲಿ ಕಿಂಗ್ ಕೊಹ್ಲಿ ಅಸಲಿ ತಾಕತ್ತನ್ನ ತೋರಿಸಿದ್ರು. ಅಬ್ಬಾ ಏನ್ ಆಟ ಅದು. ಈ ಸೀಸನ್ ಐಪಿಎಲ್ನಲ್ಲಿ ಕೊಹ್ಲಿಯ ಈ ಅವತಾರವನ್ನ ಯಾರೂ ನೋಡೇ ಇರಲಿಲ್ಲ. ವಿಕೆಟ್ ಮಧ್ಯೆ ಓಡಿಯೇ ರನ್ ಕೊಳ್ಳೆ ಹೋಡಿತಿದ್ದ ವಿರಾಟ್, ಕ್ಲಾಸಿಕ್ ಬೌಂಡರಿಗಳನ್ನ ಬಾರಿಸಿ ರಂಜಿಸ್ತಿದ್ರು. ಆದ್ರೆ, ನಿನ್ನೆ ಕೊಹ್ಲಿಯ ಆಟದ ಶೈಲಿಯೇ ಬದಲಾಗಿ ಬಿಡ್ತು. ವಿರಾಟ್ ವೀರಾವೇಶಕ್ಕೆ ಚೆನ್ನೈ ಬೌಲರ್ಸ್ ಬೆಸ್ತು ಬಿದ್ರು.
ಸ್ಟ್ರೈಕ್ರೇಟ್ ಬಗ್ಗೆ ಪ್ರಶ್ನಿಸಿದವರಿಗೆ ವೀರಾವೇಷದ ಆನ್ಸರ್!
ಈ ಸೀಸನ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಾ ಇದ್ರೂ, ಕೊಹ್ಲಿ ಅಗ್ರೆಸ್ಸಿವ್ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಸ್ಟ್ರೈಕ್ರೇಟ್ ಬಗ್ಗೆ ಪ್ರಶ್ನೆಗಳು ಎದ್ದಿದ್ವು. ನಿನ್ನೆ ಈ ಪ್ರಶ್ನೆಗೆ ವೀರಾವೇಷದ ಆನ್ಸರ್ ಕೊಟ್ರು. ಕಿಂಗ್ಡಮ್ ಚಿನ್ನಸ್ವಾಮಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳನ್ನೆಲ್ಲಾ ಸಿಡಿಸಿ ಫ್ಯಾನ್ಸ್ನ ರಂಜಿಸಿದ್ರು. ಜಸ್ಟ್ 33 ಎಸೆತಗಳಲ್ಲಿ 62 ರನ್ ಚಚ್ಚಿದ ಕೊಹ್ಲಿ ಇನ್ನಿಂಗ್ಸ್ನಲ್ಲಿ 5 ಬೌಂಡರಿ, 5 ಸಿಕ್ಸರ್ಗಳಿದ್ವು. ಅಂದ್ಹಾಗೆ ಕೊಹ್ಲಿಯ ಸ್ಟ್ರೈಕ್ರೇಟ್ ಎಷ್ಟು ಗೊತ್ತಾ ಬರೋಬ್ಬರಿ 187.88.
ಸಿಕ್ಸರ್ ತ್ರಿಶತಕ..! ಆರ್‌ಸಿಬಿಯ ‘ಸಿಕ್ಸರ್ ಕಿಂಗ್’.!
ಚೆನ್ನೈನ ಚಿಂದಿ ಉಡಾಯಿಸಿದ ವಿರಾಟ್ ಕೊಹ್ಲಿ ಸಿಕ್ಸರ್ ಸಿಡಿಸೋದ್ರಲ್ಲಿ ಹೊಸ ದಾಖಲೆ ಬರೆದ್ರು. ಆರ್ಸಿಬಿ ಪರ ಗರಿಷ್ಠ ಸಿಕ್ಸರ್ ಸಿಡಿಸಿ ಸಾಧನೆ ಮಾಡಿದ್ರು. 300 ಸಿಕ್ಸರ್ಗಳ ಗಡಿ ದಾಟಿದ ಆರ್‌ಸಿಬಿಯ ಏಕೈಕ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದ್ರು. 18 ಸೀಸನ್ಗಳಿಂದ ಆರ್ಸಿಬಿ ಪರ ಆಡ್ತಿರೋ ವಿರಾಟ್ ಕೊಹ್ಲಿ ಈವರೆಗೆ 302 ಸಿಕ್ಸರ್ ಚಚ್ಚಿದ ಸಾಧನೆ ಮಾಡಿದ್ದಾರೆ.
ಕಿಂಗ್ ಕೊಹ್ಲಿ ಮುಡಿಗೆ ಆರೆಂಜ್ ಕ್ಯಾಪ್ ಕಿರೀಟ.!
ಈ ಐಪಿಎಲ್ನಲ್ಲಿ ಹೆಚ್ಚು ಹವಾ ಮಾಡ್ತಿರೋದೆ ಯಂಗ್ಸ್ಟರ್ಸ್. ಬೌಲರ್ಗಳ ಮೇಲೆ ದಂಡೆತ್ತಿ ಹೋಗಿ ರಣಾರ್ಭಟ ನಡೆಸ್ತಿದ್ದಾರೆ. ಈ ಯುವ ಆಟಗಾರರ ಜೊತೆಗೆ ಕನ್ಸಿಸ್ಟೆಂಟ್ ಆಟದಿಂದ ಪೈಪೋಟಿಗೆ ಇಳಿದಿದ್ದಾರೆ ವಿರಾಟ್ ಕೊಹ್ಲಿ. ಇನ್ಫ್ಯಾಕ್ಟ್ ನಿನ್ನೆ 500 ರನ್ಗಳ ಗಡಿ ದಾಟಿದ ವಿರಾಟ್ ಈಗ ಆರೆಂಜ್ ಕ್ಯಾಪ್ನ ಒಡೆಯ.
ಇದನ್ನೂ ಓದಿ: ಚೆನ್ನೈ ಬೌಲರ್ಗೆ ವಾರ್ನ್ ಮಾಡಿದ್ರಾ ಕಿಂಗ್ ಕೊಹ್ಲಿ..? ಬಾಲ್ ಎಸೆದಿದ್ದಕ್ಕೆ ಕೋಪಿಸಿಕೊಂಡ ವಿರಾಟ್
505 ರನ್, 63.13 ಸರಾಸರಿ, 7 ಹಾಫ್ ಸೆಂಚುರಿ.!
ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರೂ ಚುಟುಕು ಫಾರ್ಮೆಟ್ನಲ್ಲಿ ಕೊಹ್ಲಿಯ ಖದರ್ ಕಡಿಮೆಯಾಗಿಲ್ಲ. ಈ ಸೀಸನ್ನಲ್ಲಿ ಕೊಹ್ಲಿ ಆಟ ನೋಡಿದವರಲ್ಲಿ ಟಿ20ಗೆ ತುಂಬಾ ಬೇಗ ಗುಡ್ ಬೈ ಹೇಳಿ ಬಿಟ್ರಾ ಅನ್ನೋ ಪ್ರಶ್ನೆ ಹುಟ್ಟದೇ ಇರಲ್ಲ. ಪ್ಲೇಯಿಂಗ್ ಕಂಡಿಷನ್ಸ್ನ ಅರ್ಥ ಮಾಡಿಕೊಂಡು ಮ್ಯಾಚ್ ಸಿಚ್ಯುವೇಶನ್ಗೆ ತಕ್ಕಂತೆ ಕೊಹ್ಲಿ ಅಷ್ಟು ಬೊಂಬಾಟ್ ಬ್ಯಾಟಿಂಗ್ ನಡೆಸ್ತಿದ್ದಾರೆ. ಸೀಸನ್ನಲ್ಲಿ 11 ಇನ್ನಿಂಗ್ಸ್ಗಳನ್ನಾಡಿರೋ ವಿರಾಟ್ ಬರೋಬ್ಬರಿ 63.13ರ ಸರಾಸರಿಯಲ್ಲಿ 505 ರನ್ ಕೊಳ್ಳೆ ಹೊಡೆದಿದ್ದಾರೆ. 7 ಬಾರಿ ಹಾಫ್ ಸೆಂಚುರಿಯ ಗಡಿ ದಾಟಿದ್ದಾರೆ.
9ನೇ ಬಾರಿ 500 ರನ್ ಗಡಿ ದಾಟಿದ ವಿರಾಟ್.!
ಈ ಸೀಸನ್ನಲ್ಲಿ ಮಾತ್ರವಲ್ಲ.. ಐಪಿಎಲ್ ಇತಿಹಾಸದಲ್ಲೇ ಕೊಹ್ಲಿಯಂತಾ ಕನ್ಸಿಸ್ಟೆಂಟ್ ಆಟಗಾರ ಮತ್ತೊಬ್ಬ ಇಲ್ಲ. ಸದ್ಯ 18ನೇ ಸೀಸನ್ ಐಪಿಎಲ್ ಆಡ್ತಿರೋ ವಿರಾಟ್ ಕೊಹ್ಲಿ, ಬರೋಬ್ಬರಿ 9 ಸೀಸನ್ಗಳಲ್ಲಿ 500 ರನ್ ಗಡಿ ದಾಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಬೇರಾವ ಬ್ಯಾಟರ್ ಕೂಡ ಈ ಸಾಧನೆಯನ್ನ ಮಾಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ