newsfirstkannada.com

RCBvsCSK: ಮೇ18 ಆರ್​ಸಿಬಿಗೆ ಅದೃಷ್ಟದ ದಿನ.. ಯಾಕಂದ್ರೆ ಇಲ್ಲಿವರೆಗೆ ಆಡಿರುವ ಎಲ್ಲಾ ಪಂದ್ಯ ಬೆಂಗಳೂರು ಪಾಲು

Share :

Published May 16, 2024 at 8:54am

Update May 16, 2024 at 9:37am

    ಆರ್​ಸಿಬಿಗೂ ಮೇ18ಕ್ಕೂ ದೊಡ್ಡ ಅದೃಷ್ಟದ ನಂಟಿದೆ

    ಮೇ18ರಂದು ಚೆನ್ನೈ ವಿರುದ್ಧ ಗೆಲ್ಲೋದು ಪಕ್ಕಾ? ಯಾಕಂದ್ರೆ ಈ ಸ್ಟೋರಿ ಓದಿ

    ಮೇ18ರಂದು ಕೊಹ್ಲಿ ತುಂಬಾನೇ ಆ್ಯಕ್ಟೀವ್​.. ಶತಕ, ಅರ್ಧ ಶತಕ ಬಾರಿಸದೆ ಇರಲ್ಲ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸದ್ಯ ಇರೋದು ಒಂದೇ ಕನಸು. ಅದು ಪ್ಲೇಆಫ್​ಗೆ ಹೋಗ್ಬೇಕು ಈ ಬಾರಿ ಕಪ್​ ನಮ್ದೇ ಅನ್ಬೇಕು. ಸದ್ಯ ತಂಡದ ಎಲ್ಲರ ಕಣ್ಣು ಮುಂದಿನ ಪಂದ್ಯದ ಮೇಲಿದೆ. ಚೆನ್ನೈ ಮೇಲೆ ಸಮರ ಸಾರಲು ಆರ್​ಸಿಬಿ ಕಲಿಗಳು ರೆಡಿಯಾಗಿದ್ದಾರೆ. ಇನ್ನು ‘ನಾನಾ ನೀನಾ’ ಅನ್ನೋದಷ್ಟೇ ಬಾಕಿ.

ಡೆಲ್ಲಿ ವಿರುದ್ಧ ಜಯ ಸಾಧಿಸಿದ್ದ ಆರ್​ಸಿಬಿ ತಂಡಕ್ಕೆ ಚೆನ್ನೈ ವಿರುದ್ಧ ಗೆಲುವು ಸಾಧಿಸುವ ಬೆಟ್ಟದಷ್ಟು ಕನಸನ್ನು ಇಟ್ಟುಕೊಂಡಿದೆ. ಅಂದಹಾಗೆಯೇ ಮೇ 18ರಂದು ಚಿನ್ನಸ್ವಾಮಿ ಮೈದಾನದಲ್ಲೇ ಆರ್​ಸಿಬಿ ಮತ್ತು ಚೆನ್ನೈ ತಂಡ ಎದುರು ಬದುರಾಗುತ್ತಿವೆ. ಅಚ್ಚರಿ ಸಂಗತಿ ಈ ಬಾರಿ ಆರ್​ಸಿಬಿ ತಂಡ ರುತುರಾಜ್​ ಗಾಯಕ್ವಾಡ್​ ತಂಡದ ವಿರುದ್ಧ ಜಯ ಸಾಧಿಸುವ ಬಹುಪಾಲು ಅಂಶ ಎದ್ದು ಕಾಣುತ್ತಿದೆ. ಇದಕ್ಕೆ  ದಿನಾಂಕ, ಆ ದಿನ ವಿಶೇಷತೆ ಮತ್ತು ಇತಿಹಾಸವೇ ಕಾರಣವಾಗಿದೆ.

ಆಡಿರುವ ಎಲ್ಲಾ ಪಂದ್ಯ ಆರ್​ಸಿಬಿ ಪಾಲು

ನಂಬ್ತಿರೋ ಬಿಡ್ತಿರೋ.. ಆರ್​ಸಿಬಿ ಮೇ18ರಂದು ಆಡಿದ ಬಹುಪಾಲು ಪಂದ್ಯಗಳು ಜಯ ಸಾಧಿಸಿವೆ. ಮಾತ್ರವಲ್ಲದೆ, ಇತಿಹಾಸ ಕೂಡ ಮತ್ತೆ ಅದನ್ನೇ ಮತ್ತೆ ನೆನಪಿಸಿದೆ. ಮಾಹಿತಿಯಂತೆ, ವಿರಾಟ್​ ಕೊಹ್ಲಿ ಜೆರ್ಸಿ ನಂಬರ್​​ 18 ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದರ ಜೊತೆಗೆ ಮೇ18ರಂದು ಆರ್​​​ಸಿಬಿ ಆಡಿದ ಯಾವ ಪಂದ್ಯವನ್ನು ಕಳೆದುಕೊಂಡಿಲ್ಲ.

ಯಾವ ಪಂದ್ಯವೂ ಸೋತಿಲ್ಲ

ಇಲ್ಲಿಯವರೆಗೆ ಆರ್​ಸಿಬಿ ತಂಡ ಮೇ18ರಂದು ಒಟ್ಟು ನ4 ಪಂದ್ಯವನ್ನು ಆಡಿದೆ. ಆದರೆ ಆಡಿರುವ ಯಾವ ಪಂದ್ಯದಲ್ಲೂ ಸೋತಿಲ್ಲ. ಹಾಗಾಗಿ ಇದು ಚೆನ್ನೈ ತಂಡಕ್ಕೆ ದೊಡ್ಡ ಸವಾಲಾಗಿದೆ.

ಸಿಎಸ್​ಕೆ, ಹೈದರಾಬಾದ್​ ತಂಡವನ್ನು ಮಣ್ಣು ಮುಕ್ಕಿಸಿದ ದಿನ

ಮೊದಲ ಬಾರಿಗೆ ಮೇ18ರಂದು ಸಿಎಸ್​ಕೆ ವಿರುದ್ಧ ಆಡಿದ್ದರು. ಎರಡನೇ ಬಾರಿಗೂ ಚೆನ್ನೈ ತಂಡವೇ ಆರ್​ಸಿಬಿಗೆ ಎದುರಾಳಿಯಾಗಿ ಸಿಕ್ಕಿತ್ತು. ಎರಡು ಬಾರಿಯೂ ಆರ್​ಸಿಬಿ ಗೆದ್ದಿತ್ತು. 3ನೇ ಬಾರಿಗೆ ಪಂಜಾಬ್​ ಜೊತೆ ಸವಾಲೆಸೆದು ಗೆದ್ದು ಬೀಗಿತ್ತು. ಕಳೆದ ವರ್ಷ ಕೂಡ ಮೇ18ರಂದು ಹೈದರಾಬಾದ್​ ತಂಡ ಎದುರಾಗಿತ್ತು. ಆ ಪಂದ್ಯದಲ್ಲಿ ಬೆಂಗಳೂರಿಗರ ನೆಚ್ಚಿನ ತಂಡ ಜಯ ಸಾಧಿಸಿತ್ತು.

ಕೊಹ್ಲಿ ಮೇ18ರಂದು ಆ್ಯಕ್ಟೀವ್​

ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ಮೇ18 ರಂದು ಕೊಹ್ಲಿ ಹೆಚ್ಚು ಆ್ಯಕ್ಟೀವ್​ ಆಗಿ ಇರುತ್ತಾರೆ. ಅದರಲ್ಲೂ ರನ್​ ಬಾರಿಸುವ ಗುರಿಯನ್ನು ಹೊಂದಿರುತ್ತಾರೆ. ಮೇ18ರಂದು ಕೊಹ್ಲಿ ಆಡಿರುವ ಪಂದ್ಯದಲ್ಲಿ ಕೊಹ್ಲಿ ಒಂದೆರಡು ಶತಕ ಮತ್ತು ಅರ್ಧ ಶತಕ ಬಾರಿಸಿದ ಉದಾಹರಣೆಗಳು ಜಾಸ್ತಿ ಇವೆ.

ಮಳೆ ಬಂದ್ರೆ ಕಷ್ಟ

ಹವಾಮಾನ ಇಲಾಖೆ ಬೆಂಗಳೂರಿನಾದ್ಯಂತ ಇನ್ನು ಒಂದು ವಾರಗಳ ಕಾಲ ಮಳೆ ಸುರಿಯುವ ಮುನ್ಸೂಚನೆ ಇದೆ ಎಂದಿದೆ. ಆದರೆ ಆರ್​ಸಿಬಿ ಮತ್ತು ಚೆನ್ನೈ ವಿರುದ್ಧ ಶನಿವಾರದಂಣದು ಪಂದ್ಯ ನಡೆಯಲಿಕ್ಕಿದೆ. ಆದರೆ ಮಳೆಯ ಉಪಟಳವಿರದಿರಲಿ ಎಂಬುದು ಅಭಿಮಾನಿಗಳ ಮನದಾಸೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCBvsCSK: ಮೇ18 ಆರ್​ಸಿಬಿಗೆ ಅದೃಷ್ಟದ ದಿನ.. ಯಾಕಂದ್ರೆ ಇಲ್ಲಿವರೆಗೆ ಆಡಿರುವ ಎಲ್ಲಾ ಪಂದ್ಯ ಬೆಂಗಳೂರು ಪಾಲು

https://newsfirstlive.com/wp-content/uploads/2024/05/RCB-3.jpg

Load More