/newsfirstlive-kannada/media/post_attachments/wp-content/uploads/2024/05/Modi-stadium.jpg)
RCBvsRR: ಇಂದು ರಾಯಲ್​ ಚಾಲೆಂಜರ್ಸ್​ ಮತ್ತು ರಾಜಸ್ಥಾನ್​ ರಾಯಲ್ಸ್​ಗೆ ಎಲಿಮಿನೇಟೆಡ್​ ಪಂದ್ಯ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಸಂಜೆ 7.30ಕ್ಕೆ ಇತ್ತಂಡಗಳು ಮೈದಾನಕ್ಕಿಳಿಯಲಿದೆ. ಆದರೆ ಮೋದಿ ಸ್ಟೇಡಿಯಂ ಪಿಚ್​​ ರಿಪೋರ್ಟ್​ ನೋಡಿದರೆ. ಇತ್ತಂಡಗಳಲ್ಲಿ ಯಾವುದು ಗೆಲ್ಲಬಹುದು ಎಂಬ ಅಂದಾಜು ಸಿಗಲಿದೆ.
ಪಿಚ್​ ರಿಪೋರ್ಟ್​
ನರೇಂದ್ರ ಮೋದಿ ಮೈದಾನ ಬ್ಯಾಟಿಂಗ್​​ ಮಾಡಲು ಯೋಗ್ಯವಾಗಿದೆ. ಈ ಬಾರಿ ಐಪಿಎಲ್​​ನಲ್ಲಿ ಹಲವು ಆಟಗಾರ ಇಲ್ಲಿ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಮಾತ್ರವಲ್ಲದೆ, ನಿಧಾನಗತಿಯ ಬೌಲಿಂಗ್​ಗೆ ಈ ಪಿಚ್​ ಯೋಗ್ಯವಾಗಿದೆ.
/newsfirstlive-kannada/media/post_attachments/wp-content/uploads/2023/11/Narendra_Modi_stadium.jpg)
ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಅದರ ಮೂಲಕ ಎದುರಾಲಿಯನ್ನು ಹಿಡಿದಿಡಲು ಪ್ರಯತ್ನಿಸಲಿದ್ದಾರೆ. ಹೆಚ್ಚಿಗೆ ರನ್​ ಬಾರಿಸದಂತೆ ಬೌಲಿಂಗ್​ ಮೂಲಕ ಕಟ್ಟಿಹಾಕಲು ಯತ್ನಿಸುವ ಸಾಧ್ಯತೆಗಳಿವೆ.
ಇನ್ನು ಇತ್ತಂಡಗಳು ದೆಸೆ, ದಿಕ್ಕು ಈ ಪಿಚ್​ನಲ್ಲಿ ಹೇಗೆ ಬೇಕಾದರೂ ಬದಲಾಗಬಹುದು. ಪಿಚ್​ ಮಾಹಿತಿ ನೋಡಿದಾಗ ಇಂದು ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡದ ಪೈಕಿ ಯಾರು ಗೆಲ್ಲಬಹುದು ಎಂಬ ನಿರೀಕ್ಷೆ ಮನದಟ್ಟಾಗಬಹುದು. ಆದರೂ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಮತ್ತು ಚಾಹಲ್​ಗೆ ಈ ಪಿಚ್ ಸಹಾಯವಾಗಬಹುದು ಎಂಬ ಮಾತುಗಳನ್ನು ಅನೇಕರು ಆಡುತ್ತಿದ್ದಾರೆ. ಕೊಹ್ಲಿಗೆ ಬ್ಯಾಟಿಂಗ್​ಗೆ ಇದು ಯೋಗ್ಯವಾದರೆ, ಅತ್ತ ಚಾಹಲ್​ ಸ್ಪಿನ್​ ಮೋಡಿ ನಡೆಯುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: VIDEO: ಗಂಡನಿಂದಲೇ ‘ಭಜರಂಗಿ’ ಸಿನಿಮಾ ನಟಿಯ ಭೀಕರ ಹತ್ಯೆ.. ಇದು ಪ್ರೀ ಪ್ಲಾನ್ ಮರ್ಡರ್ ಎಂದ ಪ್ರತ್ಯಕ್ಷದರ್ಶಿ
ವಾತಾವರಣ ಹೇಗಿದೆ?
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ವಾತವರಣವು ಸ್ವಚ್ಛವಾಗಿದ್ದು, ಆಕಾಶವು ಶುಭ್ರ ನೀಲಿಯಿಂದ ಕೂಡಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಮಳೆಯ ಬರುವ ನಿರೀಕ್ಷೆ ತೀರಾ ಕಡಿಮೆಯಿದೆ. ಅಂದರೆ ಮಳೆ ಬರುವುದಿಲ್ಲ, ಅಡ್ಡಿ ಪಡಿಸುವುದಿಲ್ಲ ಎಂದು ವರದಿಯಾಗಿದೆ.
/newsfirstlive-kannada/media/post_attachments/wp-content/uploads/2024/05/RCB-38.jpg)
ತಾಪಮಾನ 31c-32c ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.ಹಗಲು ಬಿಸಿಲಿನಿಂದ ಕೂಡಿದ್ದು, ಬೆಚ್ಚಗಿನ ಸಂಜೆಯಲ್ಲಿ ಇತ್ತಂಡಗಳು ಮೈದಾನಕ್ಕೆ ಇಳಿಯಲಿದ್ದಾರೆ.
ಇನ್ನು ನರೇಂದ್ರ ಮೋದಿ ಸ್ಟೇಡಿಯಂ ದೇಶದ ಅತಿ ದೊಡ್ಡ ಕ್ರೀಡಾಂಗಣವಾಗಿದೆ. ಅನೇಕ ಅಭಿಮಾನಿಗಳು ಇದರಲ್ಲಿ ಸೇರುವಂತೆ ಸ್ಟೇಡಿಯಂ ನಿರ್ಮಿಸಲಾಗಿದೆ. ಹಾಗಾಗಿ ಇಂದಿನ ಪಂದ್ಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us