newsfirstkannada.com

RCBvsRR: ಭಯೋತ್ಪಾದಕರೆಂಬ ಶಂಕೆ, ನಾಲ್ವರ ಬಂಧನ.. ಆರ್​ಸಿಬಿ ಅಭ್ಯಾಸ ರದ್ದು

Share :

Published May 22, 2024 at 2:44pm

Update May 22, 2024 at 2:47pm

    ಇಂದು ಆರ್​ಸಿಬಿ ಮತ್ತು ರಾಜಸ್ಥಾನ್​ ರಾಯಲ್ಸ್​ ಹಣಾಹಣಿ

    ಕೊಹ್ಲಿಗೆ ಭದ್ರತಾ ಬೆದರಿಕೆ.. ಶಂಕೆ ಮೇರೆಗೆ ನಾಲ್ವರು ಅರೆಸ್ಟ್​

    ಬಂಧಿತರ ಅಡಗು ತಾಣ ಪತ್ತೆ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪೊಲೀಸರು

RCBvsRR: ರಾಯಲ್​ ಚಾಲೆಂಜರ್​ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ಇಂದು ಎಲಿಮಿನೇಟೆಡ್​ ಪಂದ್ಯ ನಡೆಯಲಿಕ್ಕಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಆರ್​ಸಿಬಿ ಕುರಿತಾದ ಕೆಲವು ಸಂಗತಿ ಹೊರಬಿದ್ದಿದೆ.

ಆರ್​ಸಿಬಿ ಸುದ್ದಿಗೋಷ್ಠಿಯನ್ನ ರದ್ದುಗೊಳಿಸಿದೆ ಎಂಬ ಮಾತುಗಳು ಕೇಳಿಬಂದಿದೆ. ಜೊತೆಗೆ ಆರ್​ಸಿಬಿ ಅಭ್ಯಾಸವನ್ನು ರದ್ದು ಗೊಳಿಸಿದೆ ಎನ್ನಲಾಗುತ್ತಿದೆ.

ಆರ್​ಸಿಬಿ ಮಂಗಳವಾರದಂದು ಗುಜರಾತ್​​ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಬೇಕಾಗಿತ್ತು. ಆದರೆ ಯಾವುದೇ ಕಾರಣವನ್ನು ಬಿಚ್ಚಿಡದೆ ಆರ್​ಸಿಬಿ ಅಭ್ಯಾಸವನ್ನು ರದ್ದುಗೊಳಿಸಿತು. ಅತ್ತ ರಾಜಸ್ಥಾನ್​ ತಂಡ ಅಭ್ಯಾಸವನ್ನು ಮುಂದುವರೆಸಿತು. ವಿರಾಟ್​ ಕೊಹ್ಲಿಗೆ ಭದ್ರತಾ ಬೆದರಿಕೆ ಇರುವ ಕಾರಣ ಆರ್​ಸಿಬಿ ಸುದ್ದಿಗೋಷ್ಟಿ ನಡೆಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: RCB vs RR ಎಲಿಮಿನೇಟರ್ ಪಂದ್ಯ ಮಳೆಯಿಂದ ವಾಶ್​ಔಟ್ ಆಗುತ್ತಾ.. ಸ್ಟೇಡಿಯಂ ಸುತ್ತ ಹೇಗಿದೆ ವಾತಾವರಣ?

ಗುಜರಾತ್​ ಪೊಲೀಸರು ಸೋಮವಾರದಂದು ಭಯೋತ್ಪಾದಕರು ಎಂಬ ಶಂಕೆ ಮೇಲೆ ನಾಲ್ವರನ್ನು ಅರೆಸ್ಟ್​ ಮಾಡಿದ್ದರು. ಗುಜರಾತ್​​ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದರು. ವಿಚಾರಣೆ ನಡೆಸಿದ ಬಳಿಕ ಬಂಧಿತರ ಅಡುಗು ತಾಣವನ್ನು ಪತ್ತೆಹಚ್ಚಿದ್ದಾರೆ. ಬಂಧಿತರಿಂದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCBvsRR: ಭಯೋತ್ಪಾದಕರೆಂಬ ಶಂಕೆ, ನಾಲ್ವರ ಬಂಧನ.. ಆರ್​ಸಿಬಿ ಅಭ್ಯಾಸ ರದ್ದು

https://newsfirstlive.com/wp-content/uploads/2024/05/VIRAT_KOHLI_BATTING_1.jpg

Load More