newsfirstkannada.com

ರಿಚಾ, ಮೇಘನಾ ಅರ್ಧ ಶತಕದ ಅದ್ಭುತ ಆಟ.. ಯುಪಿ ವಾರಿಯರ್ಸ್​ ವಿರುದ್ಧ ಆರ್​ಸಿಬಿಗೆ 2 ರನ್​ಗಳ ಜಯ

Share :

Published February 24, 2024 at 11:13pm

Update February 24, 2024 at 11:16pm

    ಯುಪಿ ವಾರಿಯರ್ಸ್​ನ ಕೈಕಟ್ಟಿಸಿದ ಆಶಾ

    ಆರ್​​ಸಿಬಿ ಪರ 5 ವಿಕೆಟ್​ ಕಿತ್ತ ಸೊಬಾನ ಆಶಾ

    ತವರಿನಲ್ಲಿ 2 ರನ್​ಗಳ ಜಯ ಸಾಧಿಸಿದ ಆರ್​ಸಿಬಿ

ಬೆಂಗಳೂರು: ಇಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಪ್ರೀಮಿಯರ್​ ಲೀಗ್​ ಪಂದ್ಯಾಟದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಯುಪಿ ವಾರಿಯರ್ಸ್​ ತಂಡದ ವಿರುದ್ಧ 2 ರನ್​​​ಗಳ ಜಯ ಸಾಧಿಸಿದೆ.

ಆರಂಭದಲ್ಲಿ ಟಾಸ್​ ವಿನ್​ ಆಗಿ ಫಿಲ್ಡಿಂಗ್​​ ಆಯ್ದುಕೊಂಡ ಯುಪಿ ವಾರಿಯರ್ಸ್​ ತಂಡ ರಾಯಲ್​ ಚಾಲೆಂಜರ್ಸ್​ ತಂಡವನ್ನು ಕಟ್ಟಿಹಾಕಲು ಶ್ರಮಿಸಿತು. ಆದರೆ ಬೆಂಗಳೂರು ಮಹಿಳಾ ಮಣಿಗಳು 20 ಓವರ್​ನಲ್ಲಿ 6 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿದ್ದರು.

ನಂತರ ಬ್ಯಾಟಿಂಗ್​ ಇಳಿದ ಯುಪಿಗೆ ಜಯದ ಹಾದಿ ಸುಗಮವಿದ್ದರು ಅದೃಷ್ಟ ಲಕ್ಷ್ಮೀ ಮಾತ್ರ ಒಳಿಯಲಿಲ್ಲ. ಸುಲಭವಾಗಿ ಪಡೆಯಬೇಕಾದ ಜಯಕ್ಕೆ ಹೋರಾಡಿ ಕೊನೆಗೆ 2 ರನ್​ಗಳನ್ನು ಪೇರಿಸಲಾಗದೆ ಕೊನೆಗೆ ಸೋಲೊಪ್ಪಿಕೊಂಡಿತು.

ಇನ್ನು ಇಂದಿನ ಪಂದ್ಯದಲ್ಲಿ ಆರ್​ಸಿಬಿ ತಂಡದಲ್ಲಿ ರಿಚಾ ಘೋಷ್ 37 ಎಸೆತಕ್ಕೆ​ 12 ಬೌಂಡರಿ​ ಬಾರಿಸುವ ಮೂಲಕ 62 ರನ್​ ಬಾರಿಸಿ ಗಮನಸೆಳೆದರು. ಮೇಘನಾ 44 ಎಸೆತದಲ್ಲಿ 7 ಬೌಂಡರಿ, ಒಂದು ಸಿಕ್ಸ್​ ಸೇರಿ 53 ರನ್ ಬಾರಿಸಿದ್ದಾರೆ. ಅತ್ತ ಯುಪಿ ತಂಡದಲ್ಲಿ ಗ್ರೇಸ್​​ ಹ್ಯಾರಿಸ್​​ 38 ರನ್​ ಬಾರಿಸಿದ್ದಾರೆ. ಶ್ವೇತಾ ಶೇರಾವತ್​ 31 ರನ್​ ಬಾರಿಸಿದ್ದಾರೆ. ಆರ್​ಸಿಬಿ ತಂಡದ ಸೊಬಾನ ಆಶಾ ಯುಪಿ ವಾರಿಯರ್ಸ್​ನ 5 ವಿಕೆಟ್​ ಕಬಳಿಸುವ ಮೂಲಕ ತಂಡಕ್ಕೆ ನೆರವಾದರು.

ರಿಚಾ, ಮೇಘನಾ ಅರ್ಧ ಶತಕದ ಅದ್ಭುತ ಆಟ.. ಯುಪಿ ವಾರಿಯರ್ಸ್​ ವಿರುದ್ಧ ಆರ್​ಸಿಬಿಗೆ 2 ರನ್​ಗಳ ಜಯ

https://newsfirstlive.com/wp-content/uploads/2024/02/RCB.jpg

Load More