/newsfirstlive-kannada/media/post_attachments/wp-content/uploads/2024/02/RAM_CHARAN.jpg)
ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್, ಆರ್ಆರ್ಆರ್ ಸಿನಿಮಾ ಖ್ಯಾತಿಯ ನಟ ರಾಮ್ ಚರಣ್ 2ನೇ ಬಾರಿಗೆ ತಂದೆಯಾಗುತ್ತಿದ್ದಾರಾ? ಅಪೊಲೊ ಆಸ್ಪತ್ರೆಗಳಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಪತ್ನಿ ಉಪಾಸನಾ ಕಮಿನೇನಿ ಕೊನಿಡೆಲಾ ಅವರು ಮಾತನಾಡಿದ್ದಾರೆ. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ದಂಪತಿ ಈಗ ಎರಡನೇ ಮಗುವಿನ ಕುರಿತು ಹಿಂಟ್ ಕೊಟ್ಟಿದ್ದಾರೆ.
ಮದುವೆ ಆಗಿ 11 ವರ್ಷದ ನಂತರ ಚೊಚ್ಚಲ ಮಗುವಿಗೆ ಜನ್ಮ ಕೊಟ್ಟಿದ್ದ ಉಪಾಸನಾ ರಾಮ್ ಚರಣ್, 2ನೇ ಮಗು ಪಡೆಯುವುದರ ಬಗ್ಗೆ ಮಾತಾಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಉಪಾಸನಗೆ ಎರಡನೇ ಮಗುವಿನ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಉಪಾಸನ, ಲೇಟ್ ಆಗಿ ಮಗು ಪಡೆಯಬೇಕು ಎನ್ನುವುದು ನಮ್ಮ ಯೋಜನೆ ಆಗಿತ್ತು. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ನನ್ನ ಆರೋಗ್ಯ ನನಗೆ ಮುಖ್ಯ. ವೈದ್ಯರು ಸಲಹೆ ಕೊಟ್ಟರೇ ಎರಡನೇ ಮಗು ಪಡೆಯೋಕೆ ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.
ರಾಮ್ಚರಣ್ ಸದ್ಯ ಆರ್ಸಿ ಸೇರಿದಂತೆ ಇನ್ನೇರಡು ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾಗಿ 11 ವರ್ಷಗಳ ಬಳಿಕ ರಾಮ್ ಚರಣ್ ತಂದೆಯಾಗಿದ್ದಾರೆ. ಮೊಮ್ಮಗಳು ಕ್ಲೀಂಕಾರ ಕೊನಿಡೆಲಾ ಎತ್ತುಕೊಂಡು ಅಜ್ಜ ಮೆಗಾಸ್ಟಾರ್ ಚಿರಂಜೀವಿ ಅವರು ಸಂತೋಷ ಪಟ್ಟರು. ಸದ್ಯ ಮೆಗಾ ದಂಪತಿ ಮಗಳ ಲಾಲನೆ-ಪಾಲನೆಯಲ್ಲಿ ತೊಡಗಿದ್ದಾರೆ. ಮುದ್ದು ಕ್ಲೀಂಕಾರಳನ್ನ ನೋಡಿಕೊಳ್ಳಲಯ ಮುಂಬೈನಿಂದ ಆಯಾಳನ್ನು ಕರೆಯಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ