newsfirstkannada.com

ಬೀದಿಗೆ ಬಂದ ಕೋಟ್ಯಾಧೀಶ್ವರ.. ಉದ್ಯಮಿಗೆ ಕೋಟ್ಯಾಂತರ ಆಸ್ತಿ ಲಪಟಾಯಿಸಿದ ಗ್ಯಾಂಗ್!

Share :

Published January 18, 2024 at 8:00pm

Update January 18, 2024 at 7:50pm

    ರಿಯಲ್ ಎಸ್ಟೇಟ್ ಉದ್ಯಮಿಗೆ ಸಂಕಷ್ಟ ಪರಿಸ್ಥಿತಿ

    ಕೋಟ್ಯಾಧೀಶನಾಗಿದ್ದವನ ಬದುಕು ಬೀದಿಗೆ ಬಿತ್ತು

    ಸಹಾಯ ಮಾಡ್ತೀನಿ ಅಂದೋರು ಮೋಸ ಮಾಡಿದ್ರು!

ಬೆಂಗಳೂರು: ಕೊರೊನಾ ಟೈಮ್​ನಲ್ಲಿ ಲಕ್ಷಾಂತರ ಉದ್ಯಮಿಗಳು ಬೀದಿಗೆ ಬಿದ್ದಿದ್ರು. ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಎಲ್ಲವೂ ಕೈ ಕೊಟ್ಟಿತ್ತು. ಇಲ್ಲೊಬ್ಬ ರಿಯಲ್ ಎಸ್ಟೇಟ್ ಉದ್ಯಮಿಗೆ ಸಹಾಯ ಮಾಡ್ತೀನಿ ಅಂತಾ ಬಂದೋರು ಅವ್ರ ಆಸ್ತಿಯನ್ನೇ ಲಪಟಾಯಿಸಿದ್ದಾರಂತೆ. ಕೋಟ್ಯಾಧೀಶನಾಗಿದ್ದ ಉದ್ಯಮಿ ಸದ್ಯ ಬೀದಿಯಲ್ಲಿ ನಿಂತು ಗೋಳಾಡೋ ಸ್ಥಿತಿ ಬಂದಿದೆ.

ಒಂದು ಕಾಲದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ.. ಆದ್ರೆ ಈಗ ಕೈಯಲ್ಲಿ ಏನೂ ಇಲ್ಲ.. ಲಕ್ಷ-ಕೋಟಿಗಳಲ್ಲಿ ಫ್ಲ್ಯಾಟ್ಗಳನ್ನ ಸೇಲ್ ಮಾಡ್ತಿದ್ದ ಇವ್ರು ಒಂದ್ಕಡೆ ಕೊರೊನಾ ಹೊಡೆತ ಬಿದ್ದಿದ್ರೆ.. ಮತ್ತೊಂದು ಕಡೆ ಇವ್ರು ನಂಬಿರೋರೇ ಮೋಸ ಮಾಡ್ತಿದ್ದಾರಂತೆ.

ಬೀದಿಗೆ ಬಿತ್ತು ರಿಯಲ್ ಎಸ್ಟೇಟ್ ಉದ್ಯಮಿ ಬದುಕು

ಸಿವಿಲ್ ಇಂಜಿನಿಯರ್ ಬಿಲ್ಡರ್ ಆಗಿದ್ದ ಅಶೋಕ್ ಶಿವರಾಜ್ ಗೋನಿ ಫ್ಲ್ಯಾಟ್ಗಳನ್ನ ಸೇಲ್ ಮಾಡ್ತಿದ್ರು. ಕೊರೊನಾ ನಂತ್ರ ಆರ್ಥಿಕ ಹೊಡೆತ ಬಿದ್ದು ಯಾವುದೇ ಫ್ಲಾಟ್ಗಳು ಸೇಲ್ ಆಗಿರಲಿಲ್ಲ. ಇದ್ರಿಂದ ಕೆಲವೊಂದಿಷ್ಟು ಕಡೆ ಅಶೋಕ್ ಸಾಲ ಕೂಡ ಮಾಡಿದ್ರು. ಇವರ ಹತ್ತಿರ 15 ವರ್ಷದಿಂದ ಕಾರ್ತಿಕ್ ಅನ್ನೋರು ಕೆಲಸ ಮಾಡ್ತಿದ್ದ. ಫ್ಲ್ಯಾಟ್ ಸೇಲ್ ಮಾಡೋಕೆ ಅಂತ ರಶ್ಮಿ ಮತ್ತು ವೀರೇಶ್ ಅನ್ನೋರ ಕರ್ಕೋಂಡು ಬಂದಿದ್ದ.. ವೀರೇಶ್ ಫ್ಲ್ಯಾಟ್ಗಳಿಗೆ ಫಂಡಿಂಗ್ ಮಾಡ್ತೀನಿ ಅಂತಾ ಪೇಪರ್ ತಗೊಂಡು ಹೋಗ್ತಿದ್ರಂತೆ. ಅಸಲಿ ಕಥೆ ಇಲ್ಲಿಂದ ನೋಡಿ ಶುರುವಾಗೋದು.

ಒಂದು ವರ್ಷ ಗೃಹ ಬಂಧನದಲ್ಲಿಟ್ಟು ಟಾರ್ಚರ್

ಬಿಲ್ಡರ್ ಅಶೋಕ್ ಶಿವರಾಜ್ ಗೋನಿ ಆಸ್ತಿಯನ್ನ ಲಪಟಾಯಿಸಲು ರಶ್ಮಿ, ವೀರೇಶ್ ಹಾಗೂ ಆತನ ಸಹಚರರು ಕಿಡ್ನಾಪ್ ಮಾಡಿ ಒಂದು ವರ್ಷ ಗೃಹ ಬಂಧನದಲ್ಲಿ ಇಟ್ಟಿದ್ರು ಎಂದು ಆರೋಪಿಸಲಾಗಿದೆ. ಈ ವೇಳೆ ಬಿಲ್ಡರ್ ಅಶೋಕ್ ಹೆಸರಿನಲ್ಲಿದ್ದ ಕೋಟಿ ಕೋಟಿ ಆಸ್ತಿಯನ್ನ ಇವರ ಹೆಸರಿಗೆ ಮಾಡಿಕೊಂಡಿದ್ದಾರಂತೆ.

ಇದೀಗ ಕಾನೂನು ಹೋರಾಟಕ್ಕೆ ಮುಂದಾದ ಅಶೋಕ್ ಶಿವರಾಜ್​​ನನ್ನು ಮತ್ತೆ ಕಿಡ್ನಾಪ್ ಮಾಡಲಾಗಿತ್ತಂತೆ. ಜ್ಞಾನಭಾರತಿ ಬಳಿ ಸ್ನೇಹಿತರನ್ನ ಮಾತನಾಡಿಸಲು ಹೋಗಿದ್ದಾಗ ಟಾಟಾ ಸುಮೋ ವಾಹನದಲ್ಲಿ ಬಂದಿದ್ದ ನಾಲ್ಕೈದು ಜನರು ಕಿಡ್ನಾಪ್ ಮಾಡಿದ್ದು ಮೈ ತುಂಬಾ ಬಾಸುಂಡೆ ಬರೋ ಹಾಗೆ ಹಲ್ಲೆ ಮಾಡಿದ್ದಾರೆ. ವ್ಯಾನ್​​ನಲ್ಲಿದ್ದ ಮಚ್ಚು ಲಾಂಗುಗಳನ್ನ ತೆಗೆದು ಬೆದರಿಕೆ ಹಾಕಿದ್ದಾರಂತೆ. ಈ ಸಂಬಂಧ ರಶ್ಮಿ ಹಾಗೂ ವೀರು ಸಹಚರರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಗಾಗಲೇ ವೀರೇಶ್, ರಶ್ಮಿ, ಕೃಷ್ಣಪ್ಪ, ರಾಜಶೇಖರ್, ಕಾರ್ತಿಕ್ ಮತ್ತು ರಘು ಸೇರಿದಂತೆ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸ್ತಾ ಇದ್ದು, ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಇದು ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆಸಿರೋ ಘಟನೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆ ನಂತ್ರ ಪ್ರಕರಣ ಸತ್ಯಾಸತ್ಯತೆ ಹೊರಬರಲಿದ್ದು, ಈ ಕಿಡ್ನಾಪ್ನ ಅಸಲಿ ಕಹಾನಿ ಬಯಲಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೀದಿಗೆ ಬಂದ ಕೋಟ್ಯಾಧೀಶ್ವರ.. ಉದ್ಯಮಿಗೆ ಕೋಟ್ಯಾಂತರ ಆಸ್ತಿ ಲಪಟಾಯಿಸಿದ ಗ್ಯಾಂಗ್!

https://newsfirstlive.com/wp-content/uploads/2024/01/Real-Estate-Business-man.jpg

Load More