/newsfirstlive-kannada/media/post_attachments/wp-content/uploads/2024/12/HANUMANTHU_BIGG_BOSS.jpg)
ಬಿಗ್ ಬಾಸ್ ಕನ್ನಡ ಸೀಸನ್ 11 ಕರುನಾಡಿನಲ್ಲಿ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡ ರಿಯಾಲಿಟಿ ಶೋ. ಈ ಕಾರ್ಯಕ್ರಮದಲ್ಲಿ ಒಬ್ಬೊಬ್ಬ ಸ್ಪರ್ಧಿಯದ್ದು ಒಂದೊಂದು ಕಥೆ. ಅವಮಾನ, ಅಪಮಾನ ಹೀಗೆ ಎಲ್ಲವನ್ನು ಎದುರಿಸಿ ದೊಡ್ಮನೆಗೆ ಬಂದ ಇವರು ಕನ್ನಡಿಗರ ಮನ ಗೆದ್ದು ಎಲ್ಲಾ ಟೀಕೆಗಳಿಗೂ ಉತ್ತರ ನೀಡುತ್ತಾರೆ. ಹೀಗೆ ತನ್ನ ಸರಳ ವ್ಯಕ್ತಿತ್ವದಿಂದಲೇ ವೀಕ್ಷಕ ಮನ ಗೆದ್ದ ವಿನ್ನರ್ ಮತ್ಯಾರು ಅಲ್ಲ ಹನುಮಂತು.
ಹನುಮಂತು ನಡೆದ ಹಾದಿಯೇ ರೋಚಕ..!
ಪ್ರತಿನಿತ್ಯ ಮನರಂಜನೆ ಶೋಗಳು ನೋಡೋ ಎಲ್ಲರಿಗೂ ಹನುಮಂತು ಯಾರು ಎಂಬುದು ಗೊತ್ತೇ ಇದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಸರಿಗಮಪ' ಮೂಲಕ ಕನ್ನಡಿಗರ ಮನೆಮಾತಾದ ಗಾಯಕ ನಮ್ಮ ಹನುಮಂತು. ಇಷ್ಟೆಲ್ಲಾ ಫೇಮಸ್ ಆದ್ರೂ ಹನುಮಂತು ಕುರಿಗಾಹಿ ಆಗಿಯೇ ಉಳಿದಿದ್ರು.
ಕುರಿಗಾಹಿ ಹನುಮಂತು
ರಿಯಾಲಿಟಿ ಶೋಗೆ ಬರೋ ಮುನ್ನ ಹನುಮಂತು ಎಂದರೆ ಊರಿನ ಜನರಿಗೆ ಕೇವಲ ಕುರಿಗಾಹಿ. ಇವರು ಹಾವೇರಿಯ ಚಿಲ್ಲೂರ ಬಡ್ಡಿ ಎಂಬ ಪುಟ್ಟ ಗ್ರಾಮದಲ್ಲಿ ಕುರಿಗಾಹಿ ಕೆಲಸ ಮಾಡಿಕೊಂಡಿದ್ದರು. ಕುರಿಗಳನ್ನು ಮೇಯಿಸುತ್ತಲೇ ಹಾಡು ಹಾಡುತ್ತಾ ಸರಿಗಮಪ ವೇದಿಕೆಗೆ ಬಂದವರು. ತನ್ನ ಜನಪದ ಹಾಡುಗಳಿಂದಲೇ ಜನಮನ್ನಣೆ ಗಳಿಸಿದವರು. ಈ ಶೋನಲ್ಲಿ ವಿನ್ನರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.
ವೈಲ್ಡ್ ಕಾರ್ಡ್ ಟು ಫಿನಾಲೆ ಹೇಗಿತ್ತು?
ಹನುಮಂತು ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಂದ ಮೊದಲ ಎರಡು ವಾರದಲ್ಲೇ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ದೊಡ್ಡನೆಯಲ್ಲಿ ಆಟದ ಮೂಲಕವೇ ಕನ್ನಡಿಗರ ಮೆಚ್ಚಿನ ಸ್ಪರ್ಧಿಯಾದರು.
ಇದನ್ನೂ ಓದಿ:BBK11GrandFinale: ಅಮ್ಮನ ಕನಸು ನನಸಾಗದ ನೋವು.. ಬಿಗ್ಬಾಸ್ ಮನೆಯಿಂದ ಮೋಕ್ಷಿತಾ ಔಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ