/newsfirstlive-kannada/media/post_attachments/wp-content/uploads/2024/09/upendra2.jpg)
ಬೆಂಗಳೂರು: ಒಂಭತ್ತು ವರ್ಷಗಳಿಂದ ಉಪ್ಪಿ ಅಭಿಮಾನಿಗಳು ಕಾಯ್ತಿದ್ದ ಬಿಗ್ ಡೇ ಬಂದೇಬಿಟ್ಟಿದೆ. ಫಿಲ್ಮ್ ಬೈ ರಿಯಲ್ ಸ್ಟಾರ್ ಉಪೇಂದ್ರ ಅನ್ನೋ ಟೈಟಲ್ ನೋಡೋಕೆ ಜನ ರೆಡಿಯಾಗಿದ್ದಾರೆ. ಯುಐ ಸಿನಿಮಾ ರಿಲೀಸ್ಗೆ ಸಖತ್ ಕ್ರೇಜ್ ಇದೆ.
ಯುಐ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡ್ತಿರೋ ಪ್ಯಾನ್ ಇಂಡಿಯಾ ಸಿನಿಮಾ. ಒಂಭತ್ತು ವರ್ಷದ ನಂತರ ಉಪ್ಪಿ ನಿರ್ದೇಶನ ಮಾಡ್ತಿರೋದ್ರಿಂದ, ಸಹಜವಾಗಿಯೇ ಸಿನಿಮಾ ಮೇಲೆ ಕ್ರೇಜ್ ಹೆಚ್ಚಿದೆ. ಅಷ್ಟೇ ಅಲ್ಲ ಟೈಟಲ್ನಿಂದ ವಾರ್ನರ್ ತನಕ ಯುಐ ಟೀಂ ಬಿಡುಗಡೆ ಮಾಡಿದ್ದೆಲ್ಲವೂ, ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ಈ ಕುತೂಹಲವೇ ಸಿನಿಮಾ ಮೇಲಿನ ಫೀವರ್, ಕ್ರೇಜ್ ದುಪ್ಪಟ್ಟಾಗಲು ಕಾರಣ.
ಐದು ಭಾಷೆಗಳಲ್ಲಿ ರಿಲೀಸ್
ಇಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಯುಐ ಬಿಡುಗಡೆ ಆಗ್ತಿದ್ದು, ನಿರೀಕ್ಷೆಗೂ ಮೀರಿದ ಬೇಡಿಕೆ ಸೃಷ್ಟಿಯಾಗಿದೆ. ಸುಮಾರು 2000ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಇನ್ನೂ ಹೆಚ್ಚು ಸ್ಕ್ರೀನ್ ಸೇರ್ಪಡೆ ಆಗೋ ಸಾಧ್ಯತೆಯಿದೆ.
ಪ್ರೀ ಬುಕ್ಕಿಂಗ್ನಲ್ಲಿ ದಾಖಲೆ ಬರೆದ ಯುಐ
ಅಷ್ಟೇ ಅಲ್ಲ.. ಪ್ರೀ ರಿಲೀಸ್ ಬುಕ್ಕಿಂಗ್ನಲ್ಲಿ ಯುಐ ಹೊಸ ಇತಿಹಾಸ ಬರೆದಿದೆ. ಬುಕ್ಕಿಂಗ್ಸ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ದಾಖಲೆ ಮಟ್ಟದಲ್ಲಿ ಟಿಕೆಟ್ ಸೇಲ್ ಆಗಿದ್ದು, ಬಹುತೇಕ ಶೋ ಹೌಸ್ಫುಲ್ ಆಗಿವೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅನ್ನೋದು ಕೆವಿಎನ್ ಪ್ರೊಡಕ್ಷನ್ನ ಡಿಸ್ಟ್ರಿಬ್ಯೂಟರ್ ಸುಪ್ರೀತ್ ಮಾತು.
ಮಿಡ್ ನೈಟ್ ಶೋ ಮಾಡುವಂತೆ ಯುಐ ಸಿನಿಮಾಗೆ ಭಾರೀ ಬೇಡಿಕೆಯಿತ್ತು. ಆದ್ರೆ, ಪುಷ್ಪ 2 ಸಿನಿಮಾದಿಂದ ಮಿಡ್ ನೈಟ್ ಶೋಗಳು ನಿಲ್ಲಿಸಲಾಗಿದ್ದು, ಬೆಳಗ್ಗೆ 6.15ರ ನಂತರ ಶೋಗಳು ಶುರುವಾಗಲಿದೆ.
ಡೈರೆಕ್ಟರ್ಸ್ ಡೈರೆಕ್ಟರ್ ಉಪ್ಪಿ ಎಂಟ್ರಿ ಆಗ್ತಿರೋದು, ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಸುತ್ತೆ ಅನ್ನೋದು ಗಾಂಧಿನಗರ ಪಂಡಿತರ ಮಾತಾಗಿದ್ದು, ಯುಐ ದೊಡ್ಡ ಇತಿಹಾಸ ಬರೆಯಲಿದೆ ಅನ್ನೋದು ಎಲ್ಲರ ನಂಬಿಕೆಯಾಗಿದೆ.
ಇದನ್ನೂ ಓದಿ:ಮಗನ ನಿವೃತ್ತಿ ಬಗ್ಗೆ ಮೌನಮುರಿದ R ಅಶ್ವಿನ್ ತಂದೆ; ರೋಹಿತ್, ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ