ಬದ್ಧ ವೈರಿಗಳ ಮುಖಾಮುಖಿ.. ಚಾಂಪಿಯನ್ಸ್‌ ಟ್ರೋಫಿಗೂ ಮುನ್ನವೇ ಕೆಣಕಿದ ಪಾಕ್ ಪ್ರಧಾನಿ; ಹೇಳಿದ್ದೇನು?

author-image
Gopal Kulkarni
Updated On
ಬದ್ಧ ವೈರಿಗಳ ಮುಖಾಮುಖಿ.. ಚಾಂಪಿಯನ್ಸ್‌ ಟ್ರೋಫಿಗೂ ಮುನ್ನವೇ ಕೆಣಕಿದ ಪಾಕ್ ಪ್ರಧಾನಿ; ಹೇಳಿದ್ದೇನು?
Advertisment
  • ಬದ್ಧ ವೈರಿಗಳ ಕಾದಾಟಕ್ಕೂ ಮುಂಚೆಯೇ ಕೆಣಕಿದ ಪಾಕ್ ಪ್ರಧಾನಿ ಷರೀಫ್
  • ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದಲ್ಲ, ಭಾರತವನ್ನು ಸೋಲಿಸುವುದು ನಮ್ಮ ಗುರಿ
  • ನವೀಕರಣಗೊಂಡ ಮೈದಾನ ಉದ್ಘಾಟನೆ ಮಾಡಿ ನಾಲಿಗೆ ಹರಿಬಿಟ್ಟ ಪಾಕ್ ಪ್ರಧಾನಿ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಇನ್ನೇನು ಆರಂಭವಾಗಲಿದೆ. ಫೆಬ್ರವರಿ 23 ರಂದು ಸಾಂಪ್ರದಾಯಿಕ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಅಖಾಡದಲ್ಲಿ ತೊಡೆ ತಟ್ಟಲು ಸಜ್ಜಾಗಿವೆ. ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಗಳಲ್ಲಿ ಪಾಕಿಸ್ತಾನ ಭಾರತೀಯ ತಂಡದ ಕೈಯಲ್ಲಿ ಅಟ್ಟಾಡಿಸಿ ತಟ್ಟಿಸಿಕೊಂಡ ಇತಿಹಾಸವೇ ಇದೆ. ಹುಲಿಯಂತೆ ಹಾರಾಡುತ್ತ ಬರುವ ಆಟಗಾರರು ಇಲಿಯಂತೆ ಸೋಲಿನ ಬಲೆಗೆ ಸಿಲುಕಿ ಜಾಗತಿಕವಾಗಿ ನಗೆಪಾಟಲಿಗೆ ಈಡಾಗುತ್ತಾರೆ ಪಾಕ್ ಆಟಗಾರರು. ಇಷ್ಟೆಲ್ಲಾ ಇತಿಹಾಸವಿದ್ದರೂ ಕೂಡ ಪಾಕ್​​ಗೆ ಇರುವ ಕೊಬ್ಬು, ದುರಹಂಕಾರ ಮಾತ್ರ ಕಡಿಮೆಯಾಗಿಲ್ಲ. ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡದೆ ಶತ್ರುತ್ವದ ಕನ್ನಡ ಹಾಕಿಕೊಂಡು ನೋಡುತ್ತಿದೆ. ಅದರಲ್ಲೂ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್​​ ಇಂತಹ ದ್ವೇಷಪೂರಿತ ಮಾತುಗಳನ್ನು ಹೇರಿದ್ದಾರೆ.

ನವೀಕರಣಗೊಳಿಸಲಾಗಿರುವ ಗಡಾಫಿ ಕ್ರಿಕೆಟ್ ಮೈದಾನವನ್ನು ಉದ್ಘಾಟನೆ ಮಾಡಿದ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮಾತನಾಡಿದ. ಐಸಿಸಿ ಚಾಂಪಿಯನ್ಸ್​ ಟ್ರೊಫಿ ಗೆಲ್ಲುವುದೊಂದೇ ಅಲ್ಲ. ಫೆಬ್ರವರಿ 23 ರಂದು ಭಾರತೀಯ ತಂಡವನ್ನು ಸೋಲಿಸುವುದು ಕೂಡ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: ಬಾಲ್ಯದ ಕೋಚ್​​ಗೆ ನೆಹ್ರಾ ಗುರು ದಕ್ಷಿಣೆ; ಬಾಡಿಗೆ ಮನೆಯಲ್ಲಿದ್ದ ಗುರುವಿಗೆ ಅರಮನೆ ನೀಡಿದ ಕತೆ..!

ನಮ್ಮ ತಂಡವು ಉತ್ತಮವಾಗಿದೆ. ಭಾರತೀಯ ತಂಡವು ಕೂಡ ಇತ್ತೀಚೆಗೆ ಅದ್ಭುತವಾಗಿ ಆಡುತ್ತಿದೆ. ಆದ್ರೆ ನಮ್ಮ ಮುಂದಿರುವ ಮೊದಲ ಗುರಿ ಐಸಿಸಿ ಚಾಂಪಿಯನ್ ಟ್ರೋಫಿ ಗೆಲ್ಲುವುದು ಅಲ್ಲ. ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಭಾರತವನ್ನು ಸೋಲಿಸುವುದೇ ಆಗಿದೆ. ಇದಕ್ಕಾಗಿ ಇಡೀ ದೇಶವ ಪಾಕಿಸ್ತಾನದ ತಂಡದ ಬೆನ್ನಿಗೆ ಇದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪೈಪೋಟಿಯ ಕದನದ ಇತಿಹಾಸವೇ ಇದೆ.90ರ ದಶಕದಿಂದಲೂ ಭಾರತ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ತನ್ನ ಹಿಡಿತವನ್ನು ಸಾಧಿಸಿಕೊಂಡು ಬಂದಿದೆ 2021ರ ಟಿ20 ವಿಶ್ವಕಪ್​ನಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿದ್ದೇ ಕೊನೆಯದಾಗಿತ್ತು. ಆದ್ರೆ ಈಗ ಮುಂಬರುವ ಪಂದ್ಯಗಳಲ್ಲಿ ಭಾರತವನ್ನು ಸೋಲಿಸುವ ಗುರಿಯೊಂದಿಗೆ ನಮ್ಮ ತಂಡ ಆಡಲಿದೆ.

ಇದನ್ನೂ ಓದಿ:10, 20 ಕೋಟಿ ಅಲ್ಲವೇ ಅಲ್ಲ.. ಧನಶ್ರೀಗೆ ಚಹಾಲ್ ಕೊಟ್ರಂತೆ ಕೋಟಿ ಕೋಟಿ ಹಣ..!

ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಬರಲು ನಿರಾಕರಿಸುತ್ತಿದ್ದು. ಇದು ಎರಡು ದೇಶಗಳ ಕ್ರಿಕೆಟ್ ಮಂಡಳಿಗಳ ನಡುವೆ ಸಂಬಂಧವನ್ನು ಕೆಡಿಸುತ್ತಿದೆ. 29 ವರ್ಷಗಳ ಬಳಿಕ ಪಾಕಿಸ್ತಾನ ಐಸಿಸಿಯ ಪಂದ್ಯಾವಳಿಗಳನ್ನು ಆತಿಥ್ಯವಹಿಸುತ್ತಿದೆ. ಇದು ನಮ್ಮ ಪಾಲಿಗೆ ದೊಡ್ಡ ಹಬ್ಬವೇ ಸರಿ ಎಂದು ಶಹಬಾಜ್ ಷರೀಫ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment