ಶೇಕಡಾ 80ರಷ್ಟು ಜನರು ತಮ್ಮ ಹಲ್ಲುಗಳನ್ನು ಸರಿಯಾಗಿ ಉಜ್ಜುವುದಿಲ್ಲ.. ನಿರ್ಲಕ್ಷ್ಯದಿಂದ ಅಪಾಯ; ವೈದ್ಯರಿಂದ ಆಘಾತಕಾರಿ ಮಾಹಿತಿ!

author-image
Gopal Kulkarni
Updated On
ಶೇಕಡಾ 80ರಷ್ಟು ಜನರು ತಮ್ಮ ಹಲ್ಲುಗಳನ್ನು ಸರಿಯಾಗಿ ಉಜ್ಜುವುದಿಲ್ಲ.. ನಿರ್ಲಕ್ಷ್ಯದಿಂದ ಅಪಾಯ; ವೈದ್ಯರಿಂದ ಆಘಾತಕಾರಿ ಮಾಹಿತಿ!
Advertisment
  • ಹಲ್ಲು ಉಜ್ಜುವ ವಿಚಾರದಲ್ಲಿ ಬಹಳಷ್ಟು ಜನರು ಬಹಳಷ್ಟು ತಪ್ಪು ಮಾಡುತ್ತಾರೆ
  • ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳೇನು? ತಜ್ಞರು ಈ ಬಗ್ಗೆ ಹೇಳುವುದೇನು?
  • ದಿನಕ್ಕೆ ಎಷ್ಟು ನಿಮಿಷಗಳ ಕಾಲ ಬ್ರಷ್ ಮಾಡಬೇಕು? ಯಾವ ಪೇಸ್ಟ್ ಬಳಸಬೇಕು ?

ಸರಿಸುಮಾರು ಶೇಕಡಾ 80 ರಷ್ಟು ಜನರು ತಮ್ಮ ಹಲ್ಲುಗಳನ್ನು ಸರಿಯಾಗಿ ಬ್ರಷ್​ ಮಾಡುವುದಿಲ್ಲ, ಇದು ಬಾಯಿಯ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡುತ್ತವೆ ಎಂದು ಪಬ್ಲಿಕ್ ಹೆಲ್ತ್ ಡೆಂಟಿಸ್ಟರಿ ಕಾರ್ಯಕ್ರಮದಲ್ಲಿ ತಜ್ಞರು ಹೇಳಿದ್ದಾರೆ. ಲಖನೌನ ಕಿಂಗ್​ ಜಾರ್ಜ್​ ಮೆಡಿಕಲ್ ಯುನಿವರ್ಸಿಟಿಯಲ್ಲಿ ವರ್ಲ್ಡ್​ ಟೂಥ್ ಬ್ರಶಿಂಗ್ ಡೇ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಪಬ್ಲಿಕ್ ಹೆಲ್ತ್ ಡೆಂಟಿಸ್ಟರಿ ಕಾರ್ಯಕ್ರಮದಲ್ಲಿ ಈ ಒಂದು ಆತಂಕಕಾರಿ ವಿಷಯವನ್ನು ಹೇಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಗುಪ್ತಾ ಅವರು ಹಲ್ಲು ಉಜ್ಜುವ ವಿಚಾರದಲ್ಲಿ ಜನರು ಅನೇಕ ತಪ್ಪುಗಳನ್ನು ಮಾಡುತ್ತಾರೆ. ಸರಿಯಾದ ಟೂಥ್​​ಬ್ರಷ್​ ಆಯ್ಕೆಯಿಂದ ಹಿಡಿದು ಸರಿಯಾಗಿ ಬ್ರಷ್​ ಮಾಡುವತನಕ ಅನೇಕ ತಪ್ಪುಗಳನ್ನು ಮಾಡುತ್ತಾರೆ ಎಂದು ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ:Winter Health: ಚಳಿಗಾಲದಲ್ಲಿ ಪ್ರತಿದಿನ ಒಂದು ಚಮಚ ಜೇನು ಸೇವಿಸಿ.. ನಿಮ್ಮ ನೂರೆಂಟು ಸಮಸ್ಯೆಗಳು ಮಾಯ!

ನಿತ್ಯ ಕನಿಷ್ಠ ಎರಡು ಬಾರಿ ನಾವು ಬ್ರಷ್​ ಮಾಡಬೇಕು. ಸತತ ಎರಡು ನಿಮಿಷಗಳ ಕಾಲ ಬ್ರಷ್​ ಮಾಡಬೇಕು. ಸರಿಯಾಗಿ ನಾವು ಹಲ್ಲು ಉಜ್ಜದಿದ್ದರೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ತುಂಬಾ ಗಡುಸಾಗಿ ಹಲ್ಲು ಉಜ್ಜುವುದರಿಂದಲೂ ಸಮಸ್ಯೆಗಳು ಉತ್ಪನ್ನಗೊಳ್ಳುತ್ತವೆ. ಹಾರ್ಡ್ ಬ್ರಷಿಂಗ್​ನಿಂದ ಹಲ್ಲುಗಳಿಗೆ ಅನೇಕ ರೀತಿಯ ಹಾನಿಗಳುಂಟಾಗುತ್ತವೆ. ಹಾರ್ಡ್ ಟೂಥ್ ಬ್ರಷ್​ ಉಪಯೋಗಿಸುವುದರಿಂದ ವಸಡುಗಳಿಗೆ ಹಾನಿಯಾಗುತ್ತದೆ. ಹೀಗಾಗಿ ಹಲ್ಲು ಉಜ್ಜಲು ಸರಿಯಾದ ಬ್ರಷ್ ಬಳಸುವುದ ಸೂಕ್ತ ಎಂದು ಹೇಳಲಾಗಿದೆ.

publive-image

ಇನ್ನು ಕೆಲವು ಸಮಯಗಳಲ್ಲಿ ಜನರು ಹಲ್ಲು ಉಜ್ಜುವುದನ್ನೇ ಸ್ಕಿಪ್ ಮಾಡುತ್ತಾರೆ ಇದು ತುಂಬಾ ಅಪಾಯಕಾರಿ ಎಂದು ಹೇಳಿರುವ ಗುಪ್ತಾ, ಹಲ್ಲು ಉಜ್ಜುವುದರ ಜೊತೆಗೆ ನಾವು ನಾಲಿಗೆಯನ್ನು ಕೂಡ ಸರಿಯಾಗಿ ಸ್ವಚ್ಛಗೊಳಿಸುವ ಅಭ್ಯಾಸವಿಟ್ಟುಕೊಳ್ಳಬೇಕು ಎಂದು ಕೂಡ ಹೇಳಿದ್ದಾರೆ. ಆ್ಯಸಿಡಿಕ್ ಆಹಾರವನ್ನು ಸೇವಿಸಿದ ತಕ್ಷಣ ಬ್ರಷ್ ಮಾಡುವುದು ಕೂಡ ಅಪಾಯಕಾರಿ ಇದು ದಂತಕವಚದ ಮೇಲೆ ಪರಿಣಾಮ ಬೀರುತ್ತದೆ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಗೌರವ್ ಮಿಶ್ರಾ. ಜನರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಮತ್ತೊಂದು ಅಂದ್ರೆ ಸರಿಯಾದ ಸಮಯಕ್ಕೆ ಟೂಥ್​ಬ್ರಷ್​ಗಳನ್ನು ಬದಲಿಸದಿರುವುದು, ಫ್ಲೊರಿಡಾ ಟೂಥ್​ಪೇಸ್ಟ್​ಗಳನ್ನ ಬಳಸುವುದು, ಹಲ್ಲು ಉಜ್ಜುವುದರ ಜೊತೆಗೆ ಮೌತ್​ವಾಶ್​ ಕೂಡ ಮಾಡಿಕೊಳ್ಳಬೇಕು ಇದನ್ನು ಹೆಚ್ಚಿನ ಜನರು ಮಾಡುವುದಿಲ್ಲ. ಇವುಗಳ ನಿತ್ಯ ಪಾಲಿಸುವುದರಿಂದಲೇ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕ್ಯಾಂಡಿಗಳಿಂದ ನಿಮ್ಮ ಮಕ್ಕಳನ್ನು ದೂರವಿಡಿ; ಇಲ್ಲದಿದ್ದರೆ ಸಕ್ಕರೆ ಕಾಯಿಲೆ ಅಂಟಿಕೊಳ್ಳುತ್ತೆ! ವೈದ್ಯರು ಹೇಳೋದೇನು?

ವಿಶ್ವ ಟೂಥ್​ಬ್ರಷಿಂಗ್ ದಿನದ ಅಂಗವಾಗಿ ಜನರು ಹಲ್ಲುಜ್ಜುವ ವಿಚಾರದಲ್ಲಿ ಮಾಡುವ ಸಾಮಾನ್ಯ ತಪ್ಪುಗಳನ್ನು ಹೇಳಲಾಗಿದೆ. ಅವರು ಹೇಳುವ ಪ್ರಕಾರ ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಬೇಕು. ಎರಡು ನಿಮಿಷಗಳ ಕಾಲ ನಿರಂತರ ಹಲ್ಲುಜ್ಜುವುದು ತುಂಬಾ ಒಳ್ಳೆಯದು. ಕನಿಷ್ಠ ಮೂರು ತಿಂಗಳಿಗೊಮ್ಮೆ ನಾವು ನಮ್ಮ ಟೂಥ್​ಬ್ರಷ್​ ಬದಲಾಯಿಸಬೇಕು ಎಂದು ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment