/newsfirstlive-kannada/media/post_attachments/wp-content/uploads/2024/08/bangladesh-voilance.jpg)
ಢಾಕಾ: ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕೆಲವು ದಿನಗಳ ಹಿಂದಷ್ಟೆ ಮೀಸಲಾತಿ ವಿಚಾರವಾಗಿ ಬಾಂಗ್ಲಾದೇಶದಲ್ಲಿ ಭೀಕರ ಹಿಂಸಾಚಾರ ಸೃಷ್ಟಿಯಾಗಿತ್ತು. ಇಂದು ನಡೆದ ಹಿಂಸಾಚಾರ ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ತಮ್ಮ ಪ್ರಧಾನಿ ಸ್ಥಾನದಿಂದ ನಿರ್ಗಮಿಸಬೇಕು ಎಂದು ಆಗ್ರಹಿಸಿ ಜನರು ಬೀದಿಗಿಳಿದ್ದಾರೆ. ಭೀಕರ ಹಿಂಸಾಚಾರದಲ್ಲಿ ಒಟ್ಟು 72 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ:ಈತ ಹಮಾಸ್ ಉಗ್ರನಿಗಿಂತಲೂ ಡೇಂಜರ್.. ಟೂಥ್ಪೇಸ್ಟ್ನಲ್ಲಿ ವಿಷ ಇಟ್ಟು ಇಸ್ರೇಲ್ ಕೊಂದಿದ್ದು ಹೇಗೆ?
ಭೀಕರ ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಅಲ್ಲಿನ ಕೇಂದ್ರ ಸರ್ಕಾರ ದೇಶಾದ್ಯಂತ ಕರ್ಫ್ಯೂ ಘೋಷಣೆ ಮಾಡಿದೆ. ಈ ಹಿಂಸಾಚಾರಕ್ಕೆ ಅಸಲಿ ಕಾರಣ, ಪ್ರಧಾನಿ ಶೇಖ್ ಹಸೀನಾ ಬೆಂಬಲಿಗರ ಪಡೆ ಹಾಗೂ ಆಡಳಿತ ವಿರೋಧಿ ಹಾಗೂ ಪ್ರಧಾನಿಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಪಡೆಯ ನಡುವೆ ನಡೆದ ಸಂಘರ್ಷವೇ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಮಗ ಓದುತ್ತಿಲ್ಲ ಎಂದು ಮೂಟೆಯಲ್ಲಿ ಕಟ್ಟಿ ಕೆರೆಗೆ ಬಿಸಾಡಿದ ತಂದೆ; ಆಮೇಲೇನಾಯ್ತು?
ಬಾಂಗ್ಲಾದೇಶದ ರಾಜಧಾನಿ ಢಾಕಾ ಸೇರಿದಂತೆ ಬೋಗ್ರಾ, ಪಬ್ನಾ, ರಂಗಪುರ್ ಹಾಗೆ ಮಾಗೂರು ಈ ಜಿಲ್ಲೆಗಳಲ್ಲಿ ಹಿಂಸಾಚಾರ ಭೀಕರವಾಗಿದ್ದು ಈ ಜಿಲ್ಲೆಗಳಲ್ಲಿಯೇ ಪ್ರತಿಭಟನಾಕಾರರ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ನಾನ್ ಕೋಆಪರೇಷನ್ ಅಂದ್ರೆ ಅಸಹಕಾರ ಚಳುವಳಿಯನ್ನು ಪ್ರತಿಭಟನಾ ಪಡೆ ನಡೆಸುತ್ತಿದೆ. ಶೇಖ್ ಹಸೀನಾ ಪದತ್ಯಾಗ ಆಗುವರೆಗೂ ನಾವು ಟ್ಯಾಕ್ಸ್ ಕಟ್ಟುವುದಿಲ್ಲ ಯುಟಿಲಿಟಿ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ದೇಶದಲ್ಲಿ ಎಲ್ಲಾ ಕಚೇರಿಗಳು, ಬ್ಯಾಂಕ್ಗಳು, ಕಾರ್ಖಾನೆಗಳು ತೆರೆದಿವೆ ಆದ್ರೆ ಕೆಲಸ ಮಾಡಲು ಸಿಬ್ಬಂದಿಗಳೇ ಬರುತ್ತಿಲ್ಲ, ಪ್ರಮುಖ ಹೈವೇಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿ ರಸ್ತೆ ತಡೆ ನಡೆಸಿದ್ದು, ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತಿದ್ದಾರೆ.
ಈಗ ಬಾಂಗ್ಲಾದಲ್ಲಿ ಮತ್ತೆ ಎಲ್ಲೆಡೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ದೇಶಾದ್ಯಂತ ಕರ್ಫ್ಯೂ ಜಾರಿಯಾಗಿದ್ದು, ಗುಂಪುಕಟ್ಟಿಕೊಂಡು ಹೋಗುವವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ಅಟ್ಟಲಾಗುತ್ತಿದೆ, ಶಾಲಾ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಅನಿರ್ಧಾಷ್ಟವಧಿ ರಜೆ ಘೋಷಿಸಲಾಗಿದೆ ಇನ್ನು ಪ್ರತಿಭಟನಾಕಾರರು ವಿದ್ಯಾರ್ಥಿಗಳಲ್ಲ ಅವರು ಟೆರೆರಿಸ್ಟ್, ಪ್ರತಿಭಟನೆಯ ಹೆಸರಿನಲ್ಲಿ ದೇಶಾದ್ಯಂತ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ