newsfirstkannada.com

ಬೀದಿಗೆ ಬಂದ ಕಾಂಗ್ರೆಸ್​​ ಜಗಳ; ಶಾಸಕ-ಸಚಿವರ ಬೆಂಬಲಿಗರು ಹೊಡೆದಾಡಲು ಕಾರಣವೇನು?

Share :

Published February 13, 2024 at 8:33pm

Update February 13, 2024 at 8:35pm

    ಕೋಲಾರ ಕಾಂಗ್ರೆಸ್‌ನಲ್ಲಿ ಬಹಿರಂಗ​​​ ಬಣ ಬಡಿದಾಟ!

    ಸ್ಪಪಕ್ಷೀಯರ ವಿರುದ್ಧವೇ ಧಿಕ್ಕಾರ ಕೂಗುತ್ತಾ ಆಕ್ರೋಶ

    ಶಾಸಕ-ಸಚಿವರ ಬೆಂಬಲಿಗರ ನಡುವೆ ಹೊಡೆದಾಟ!

ಕೋಲಾರ: ಇಂದು ಕೋಲಾರ ಕಾಂಗ್ರೆಸ್‌ನಲ್ಲಿ ಬೀದಿ ಕಾಳಗ ನಡೆದಿದೆ. ರಾಜಕೀಯದ ಹೆಸರಲ್ಲಿ ಇಬ್ಬರು ನಾಯಕರ ಬೆಂಬಲಿಗರ ಮಧ್ಯೆ ಬಹಿರಂಗ ಹೊಡೆದಾಟ ನಡೆದಿದೆ. ಹಿರಿಯ ನಾಯಕರು ನಡೆಸ್ತಿದ್ದ ಸಭೆ ರಣಾಂಗಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿ ಪಕ್ಷದ ಮರ್ಯಾದೆಯನ್ನ ಬೀದಿಗೆ ತಂದಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲ-ಕೋಲಾಹಲ

ಇದು ಬೀದಿಯಲ್ಲಿ ಹೋಗುವವರ ಬಡಿದಾಟವಲ್ಲ. ದಾರಿ ಹೋಕರ ಮಧ್ಯೆ ನಡೆದ ಕಿತ್ತಾಟವಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಸೆಣಸಾಟ. ಕೈಕೈ ಮಿಲಾಯಿಸಿ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಸನ್ನಿವೇಶ. ಬಣ ಬಡಿದಾಟದ ಮಧ್ಯೆ ಸಭೆಯಲ್ಲಿ ಆಕ್ರೋಶ.

ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಫ್ಲೆಕ್ಸ್ ಗಲಾಟೆ

ಇವತ್ತು ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು. ಒಬ್ಬರಿಗೊಬ್ಬರು ನಿಂದಿಸಿಕೊಳ್ಳುತ್ತಾ ಕೈಕೈ ಮಿಲಾಯಿಸಿದ ಪ್ರಸಂಗ ನಡೆದೋಯ್ತು. ಕಾಂಗ್ರೆಸ್‌ ಶಾಸಕರ ಬೆಂಬಲಿಗರು, ಸಚಿವರ ಬೆಂಬಲಿಗರ ಮಧ್ಯೆ ಭಾರೀ ಹೊಡೆದಾಟವೇ ಆಗೋಯ್ತು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಉಸ್ತುವಾರಿ ರಾಜ್‌ಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಲೋಕಸಭಾ ಚುನಾವಣೆಯ ದಿನದಂದು ಜಿಲ್ಲೆಯಲ್ಲಿ ಬೂತ್ ಮಟ್ಟದ ಏಜೆಂಟ್‌ಗಳ ನೇಮಕ ಕುರಿತು ಚರ್ಚೆ ಆಗುತ್ತಿತ್ತು. ಸಭೆಯಲ್ಲಿ ಹಾಕಿದ್ದ ಬ್ಯಾನರ್‌ನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ಶಾಸಕರು ಹಾಗೂ ನಾಯಕರ ಪೋಟೋ ಹಾಕಿಲ್ಲ ಎಂದು ಗಲಾಟೆ ಶುರುವಾಗಿತ್ತು. ಈ ವೇಳೆ ಕೊತ್ತೂರು ಮಂಜುನಾಥ್ ಬೆಂಬಲಿಗ ಶಿವಕುಮಾರ್ ಎಂಬಾತ ನೋಡ ನೋಡುತ್ತಿದ್ದಂತೆ ವೇದಿಕೆಯತ್ತ ನುಗ್ಗಿಬಿಟ್ಟಿದ್ದ. ಕೋಲಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ, ಸಚಿವ ಮುನಿಯಪ್ಪ ಬೆಂಬಲಿಗ ಊರಬಾಗಿಲು ಶ್ರೀನಿವಾಸ್‌ರ ಶರ್ಟ್ ಕಾಲರ್ ಹಿಡಿದು ಎಳೆದಾಡಿ ಬಿಟ್ಟಿದ್ದ.

ಹಿರಿಯ ನಾಯಕರ ಮುಂದೆ ಕಾರ್ಯಕರ್ತರ ಬಡಿದಾಟ

ಯಾವಾಗ ಶಿವುಕುಮಾರ್, ಶ್ರೀನಿವಾಸ್‌ರನ್ನ ಹಿಡಿದು ಎಳೆದಾಡಿದ್ನೋ ಕೋಲಾರ ಜಿಲ್ಲಾ ಕಚೇರಿ ಯುದ್ಧಭೂಮಿಯಂತೆ ಭಾಸವಾಗಿತ್ತು. ಎರಡು ಬಣಗಳ ಕಾರ್ಯಕರ್ತರು ಪರಸ್ಪರ ಗಲಾಟೆಯಲ್ಲಿ ತೊಡಗಿದ್ರು. ಸಭೆಯ ಮಧ್ಯದಲ್ಲೇ ಕುಳಿತು ಘೋಷಣೆ ಕೂಗಲು ಶುರು ಮಾಡಿದ್ರು.

ಗಲಾಟೆ ತಾರಕಕ್ಕೇರುತ್ತಿದ್ದಂತೆ ಮುನಿಯಪ್ಪ ಬೆಂಬಲಿಗ ಶ್ರೀನಿವಾಸ್ ಸಭೆಯಿಂದ ಹೊರ ನಡೆದ್ರು. ಅಲ್ಲದೇ ಕೊತ್ತೂರು ಮಂಜುನಾಥ್ ಬೆಂಬಲಿಗೆ ಶಿವುಕುಮಾರ್‌ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಶ್ರೀನಿವಾಸ್ ಆರೋಪಿಸಿದ್ದಾರೆ. ಇತ್ತ ಶಿವಕುಮಾರ್‌ನ ಹೊಡೆಯೋಕೆ ಶ್ರೀನಿವಾಸ ಬಂದಿದ್ರು. ಆಗ ಜಗಳ ನಡೆದಿದೆ ಅಂತ ಕೊತ್ತೂರು ಮಂಜುನಾಥ್ ಬೆಂಬಲಿಗರು ಆರೋಪಿಸಿದ್ದಾರೆ.

ಇನ್ನೂ, ಬೈ ಮಿಸ್‌ ಆಗಿ ಗಲಾಟೆ ನಡೆದು ಹೋಗಿದೆ ಅಂತ ಜಿಲ್ಲಾ ಕಾಂಗ್ರೆಸ್ ನಾಯಕ ಲಕ್ಷ್ಮೀ ನಾರಾಯಣ್ ಹೇಳಿದ್ದಾರೆ. ಇತ್ತ ಪ್ರತಿಭಟನೆ, ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಪಿ.ಆರ್. ರಮೇಸ್ ಹೇಳಿದ್ದಾರೆ.

ಒಟ್ಟಾರೆ, ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೇ ನೆರಮನೆಯ ಸುಡಬಹುದೇ ಎಂಬ ಮಾತಿನಂತೆ ಚಿನ್ನದ ನಾಡಿನಲ್ಲಿ ಎದ್ದಿರೋ ಕಿಚ್ಚು ಲೋಕ ಕದನದಲ್ಲಿ ‘ಕೈ’ನೇ ಸುಡುತ್ತಾ ಎಂಬ ಪ್ರಶ್ನೆ ಮೂಡಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೀದಿಗೆ ಬಂದ ಕಾಂಗ್ರೆಸ್​​ ಜಗಳ; ಶಾಸಕ-ಸಚಿವರ ಬೆಂಬಲಿಗರು ಹೊಡೆದಾಡಲು ಕಾರಣವೇನು?

https://newsfirstlive.com/wp-content/uploads/2024/02/Kolar-1.jpg

Load More